Chamarajanagara : ಕೊಳ್ಳೇಗಾಲದಲ್ಲಿ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ವರನಿಗೆ ಚಾಕು ಇರಿತ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

Chamarajanagara: ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ವರನ ಮೇಲೆ ಚಾಕು ಇರಿತ ಪ್ರಕರಣ ಸಂಬಂಧಿಸಿದಂತೆ ಹತ್ಯೆ ಯತ್ನದ ಹಿಂದೆ ವಧುವಿನ ಕೈವಾಡವಿರೋದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡಿ.30ರಂದು ಕುಣಗಳ್ಳಿ ಗ್ರಾಮದ ರವೀಶ್ ಹಾಗೂ ನಯನ ಅವರ ವಿವಾಹ ನಡೆಯಬೇಕಿತ್ತು. ಆದರೆ ರಿಸೆಪ್ಶನ್ಗೆ ವೆಂಕಟೇಶ್ವರ ಮಂಟಪಕ್ಕೆ ತೆರಳುತ್ತಿದ್ದ ವೇಳೆ, ವರನ ಕಾರನ್ನ ಮತ್ತೊಂದು ಕಾರಿನಲ್ಲಿ ಬಂದ ಗುಂಪೊಂದು ಅಡ್ಡಗಟ್ಟಿ ಚಾಕು ಇರಿದು ಪರಾರಿಯಾಗಿದ್ರು.
ಗಾಯಗೊಂಡಿದ್ದ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಇನ್ನು ಪೊಲೀಸರು ನಯನ ಪೋನ್ ಕರೆಗಳ ಡಿಟೇಲ್ಸ್ ಪರಿಶೀಲಿಸಿದಾಗ ಆಕೆ ಚಾಕು ಇರಿದ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ಬೆಳಕಿಗೆ ಬಂದಿದೆ.

ಆರೋಪಿ ದರ್ಶನ್ ತಮಟೆ ಬಾರಿಸುವ ಹಾಗೂ ಪುಸ್ತಕ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದು, ಕಳೆದ 2 ವರ್ಷಗಳಿಂದ ನಯನಳನ್ನ ಪ್ರೀತಿಸುತ್ತಿದ್ದ. ಆದರೆ ನಯನ ಕುಟುಂಬದವರು ರವೀಶ್ ಜೊತೆ ವಿವಾಹ ನಿಶ್ಚಯ ಮಾಡಿದ್ದರು.
ಇದನ್ನೂ ಓದಿ : ಆರತಕ್ಷತೆಗೆ ಹೊರಟ ಮದುಮಗನ ಮೇಲೆ ದುಷ್ಕರ್ಮಿಗಳ ಹಲ್ಲೆ..!
ಇಷ್ಟ ಇಲ್ಲದೇ ಇದ್ದರೂ ಮನೆಯವರು ಮದುವೆ ಮಾಡಲು ಮುಂದಾಗಿದ್ದರು. ಬಳಿಕ ನಯನ, ರವೀಶ್ನ ಮೊಬೈಲ್ ಸಂಖ್ಯೆಯನ್ನ ತನ್ನ ಪ್ರಿಯಕರ ದರ್ಶನ್ಗೆ ನೀಡಿ ಮದುವೆ ನಿಲ್ಲಿಸುವಂತೆ ಒತ್ತಡ ಹೇರಿದ್ದಳು.
ಮದುವೆ ನಿಲ್ಲಿಸಲು ಹಿಂದಿನ ದಿನ ನಯನ ತನ್ನ ತಂಗಿಯ ಮೊಬೈಲ್ನಿಂದ ದರ್ಶನ್ಗೆ ಕರೆ ಮಾಡಿ ವರನನ್ನು ಹತ್ಯೆ ಮಾಡುವಂತೆ ಸೂಚಿಸಿದ್ದಾಳೆ ಎಂದು ಪೊಲೀಸ್ ವಿಚಾರಣೆಯಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಪ್ರಕರಣ ಸಂಬಂಧ ನಯನ, ಆಕೆಯ ಪ್ರೇಮಿ ದರ್ಶನ್ ಹಾಗೂ ಮಿಥುನ್ ಅವರನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.

ಚಾಕು ಇರಿತದ ಬಳಿಕ ಮದುವೆ ರದ್ದಾಗಿದ್ದು, ಆಸ್ಪತ್ರೆಗೆ ಬಂದ ನಯನ ಕಣ್ಣೀರಿಟ್ಟು ವರ ರವೀಶ್ ಬಳಿ ಮದುವೆ ಮಾಡಿಕೊಳ್ಳುವಂತೆ ಬೇಡಿಕೊಂಡು, “ನೀವು ಕೈಕೊಟ್ಟರೆ ನನ್ನನ್ನು ಯಾರೂ ಮದುವೆಯಾಗುವುದಿಲ್ಲ” ಎಂದು ನಾಟಕವಾಡಿದ್ದಳು.
MUST WATCH : ಮದುವೆಗೆ ಹೋಗುತ್ತಿದ್ದ ವರ – ಏಕಾಏಕಿ ಬಂದ್ರು ಚಾಕು ಹಾಕಿದ್ರು




