ತೆಲುಗು ಸೂಪರ್ಸ್ಟಾರ್ Ram Charan ಅವರ ಪತ್ನಿ ಉಪಾಸನಾ ಅವರು ಒಂದು ಗಂಡು ಮತ್ತು ಒಂದು ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ತೆಲುಗು ಸೂಪರ್ಸ್ಟಾರ್ Ram Charan ಅವರ ಪತ್ನಿ ಉಪಾಸನಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಈ ಸುದ್ದಿ ಮೆಗಾಸ್ಟಾರ್ ಕುಟುಂಬದಲ್ಲಿ ಭಾರೀ ಸಂತಸ ತಂದಿದೆ. ಕೋನಿಡೇಲ ಕುಟುಂಬದ ಅಭಿಮಾನಿಗಳಲ್ಲೂ ಈ ವಿಚಾರ ಭಾರೀ ಉತ್ಸಾಹ ಮೂಡಿಸಿದೆ.
ಒಂದು ಗಂಡು, ಒಂದು ಹೆಣ್ಣು ಮಗು
ಮದುವೆಯಾಗಿ ಅನೇಕ ವರ್ಷಗಳು ಕಳೆದರೂ ರಾಮ್ಚರಣ್–ಉಪಾಸನಾ ದಂಪತಿಗೆ ಮಕ್ಕಳಾಗಿರಲಿಲ್ಲ. ಎರಡು ವರ್ಷಗಳ ಹಿಂದೆ ದಂಪತಿಗೆ ಪುತ್ರಿ ಜನಿಸಿದ್ದಳು. ಇದೀಗ, ಒಂದು ಹೆಣ್ಣು ಹಾಗೂ ಒಂದು ಗಂಡು ಅವಳಿ ಮಕ್ಕಳ ಜನನದಿಂದ ಕುಟುಂಬದ ಸಂತೋಷ ಇನ್ನಷ್ಟು ಹೆಚ್ಚಾಗಿದೆ.

ಅವಳಿ ಮಕ್ಕಳು ಜನಿಸಿರುವ ವಿಷಯವನ್ನು ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಕೋನಿಡೇಲ ಕುಟುಂಬ ಸಂಪೂರ್ಣವಾಗಿ ಖುಷಿಯಲ್ಲಿದ್ದು, ಈ ಸಂತಸದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ಕೇಂದ್ರ ಬಜೆಟ್ ದಿನವೇ ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಹೆಚ್ಚಳ

ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ
ಜನವರಿ 31ರಂದು ಉಪಾಸನಾ ಅವರಿಗೆ ಹೆರಿಗೆ ನಡೆದಿದ್ದು, ತಾಯಿ ಹಾಗೂ ಅವಳಿ ಮಕ್ಕಳು ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಚಿರಂಜೀವಿ ಅವರು, “ನಿಮ್ಮೆಲ್ಲರ ಆಶೀರ್ವಾದ, ಹರಕೆ ಮತ್ತು ಹಾರೈಕೆಗೆ ಧನ್ಯವಾದಗಳು” ಎಂದು ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಇದನ್ನು ನೋಡಿ : BREAKING|ವಿಜಯನಗರದಲ್ಲಿ `ತ್ರಿಬಲ್ ಮರ್ಡರ್’ ಕೇಸ್ ಗೆ ಬಿಗ್ ಟ್ವಿಸ್ಟ್.!




