Budget 2026 : ಮದ್ಯ ಪ್ರಿಯರಿಗೆ ಮತ್ತೆ ಶಾಕ್; ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ? ಇಲ್ಲಿದೆ ಸಂಪೂರ್ಣ ಲಿಸ್ಟ್.

Budget 2026 : ಕೇಂದ್ರ ಹಣಕಾಸು ಸಚಿವೆ Nirmala Sitharaman ಅವರು ಇಂದು ತಮ್ಮ ದಾಖಲೆಯ ಒಂಬತ್ತನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ತೆರಿಗೆದಾರರು ಹಾಗೂ ಸಾಮಾನ್ಯ ಜನರಿಗೆ ಹಲವು ರೀತಿಯ ಸಕಾರಾತ್ಮಕ ಘೋಷಣೆಗಳನ್ನು ಮಾಡಿದ್ದಾರೆ. ಒಂದೆಡೆ ಹಲವಾರು ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಇಳಿಕೆ ಮಾಡಲಾಗಿದ್ದರೆ, ಮತ್ತೊಂದೆಡೆ ಕೆಲ ವಸ್ತುಗಳು ದುಬಾರಿಯಾಗುವ ಸಾಧ್ಯತೆ ಇದೆ.
ಹೊಸ ಯೋಜನೆ ಘೋಷಣೆ
MSME ಗಳು, ರತ್ನ ಮತ್ತು ಆಭರಣ ಉದ್ಯಮ, ಸಿದ್ಧ ಉಡುಪು ಕ್ಷೇತ್ರಗಳಿಗೆ ಉತ್ತೇಜನ ನೀಡಲಾಗಿದ್ದು, ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಹೊಸ ಯೋಜನೆಯನ್ನು ಘೋಷಿಸಲಾಗಿದೆ.
ಭಾರತದಲ್ಲಿ ಭವಿಷ್ಯದ ಪ್ರಮುಖ ಕ್ಷೇತ್ರಗಳೆಂದು ಪರಿಗಣಿಸಲಾದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ.
ಸೆಮಿಕಂಡಕ್ಟರ್ ಮಿಷನ್ನ ಎರಡನೇ ಆವೃತ್ತಿಯಲ್ಲಿ ಉಪಕರಣಗಳು ಮತ್ತು ಕಚ್ಚಾ ವಸ್ತುಗಳ ತಯಾರಿಕೆ, ಜೊತೆಗೆ ಫುಲ್ ಸ್ಟ್ಯಾಕ್ ಇಂಡಿಯನ್ ಐಪಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ಇದನ್ನು ಓದಿ : ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್ – ಹಲವು ಮಹಿಳೆಯರು ಗಂಭೀರ
ಯಾವ ವಸ್ತುಗಳು ಅಗ್ಗವಾಗುತ್ತವೆ?
ಸರ್ಕಾರ ಪ್ರಮುಖ ಘಟಕಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಭಾರತದಲ್ಲಿ ತಯಾರಾಗುವ ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳು ಅಗ್ಗವಾಗುವ ನಿರೀಕ್ಷೆ ಇದೆ.
ಅಲ್ಲದೆ ಆರೋಗ್ಯ ವಿಮೆ, ವಿದ್ಯುತ್ ವಾಹನಗಳು, ಕ್ಯಾನ್ಸರ್ ಔಷಧಗಳು, ಕ್ರೀಡಾ ಉಪಕರಣಗಳು ಹಾಗೂ ಕೆಲವು ದೇಶೀಯ ಗೃಹೋಪಯೋಗಿ ವಸ್ತುಗಳು ಹೆಚ್ಚು ಕೈಗೆಟುಕುವಂತಾಗಲಿವೆ. ಸೋಲಾರ್ ಬಿಡಿಭಾಗಗಳು, ಕ್ಯಾನ್ಸರ್ ಔಷಧಿಗಳು, ಮೈಕ್ರೋ ಓವನ್, ಬಟ್ಟೆ ಸೆಣಬು ಉತ್ಪನ್ನಗಳ ಮೇಲೂ ಇಳಿಕೆ ಕಾಣುವ ಸಾಧ್ಯತೆ ಇದೆ.
ಯಾವುದು ದುಬಾರಿಯಾಗಲಿದೆ?
ಇನ್ನೊಂದೆಡೆ, ವಿದೇಶಗಳಲ್ಲಿ ತಯಾರಾಗುವ ಐಷಾರಾಮಿ ಕೈಗಡಿಯಾರಗಳು, ಪಾದರಕ್ಷೆಗಳು ಮತ್ತು ಬಟ್ಟೆಗಳ ಮೇಲಿನ ಕಸ್ಟಮ್ಸ್ ಸುಂಕ ಹೆಚ್ಚಳದಿಂದ ಅವುಗಳ ಬೆಲೆ ಏರಿಕೆಯಾಗಲಿದೆ.
ತಂಬಾಕು ಉತ್ಪನ್ನಗಳಾದ ಸಿಗರೇಟ್, ಪಾನ್ ಮಸಾಲಾ ಹಾಗೂ ಮದ್ಯದ ದರದಲ್ಲೂ ಏರಿಕೆ ನಿರೀಕ್ಷಿಸಲಾಗಿದೆ. ಜೊತೆಗೆ ವಿಮಾನ ಬಿಡಿಭಾಗಗಳೂ ದುಬಾರಿಯಾಗಲಿವೆ.

ಒಟ್ಟಾರೆ, ಈ ಬಜೆಟ್ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವ ಜೊತೆಗೆ ಸಾಮಾನ್ಯ ಜನರ ಖರ್ಚಿನ ಮೇಲೆ ಮಿಶ್ರ ಪರಿಣಾಮ ಬೀರುವ ನಿರೀಕ್ಷೆಯಿದೆ.
ಇದನ್ನು ನೋಡಿ : ಅನುಮಾನಾಸ್ಪದ ವಸ್ತು ಸ್ಫೋಟ ಕೇಸ್ – ಬ್ರಿಮ್ಸ್ಗೆ ಭೇಟಿ ನೀಡಿ, ಗಾಯಾಳು ಮಕ್ಕಳ ಆರೋಗ್ಯ ವಿಚಾರಿಸಿದ ಖಂಡ್ರೆ




