ಲಂಚ ಪಡೆಯುವಾಗ್ಲೆ ಸಿಕ್ಕಿಬಿದ್ದ Inspector – ಲಾಕ್ ಆಗ್ತಿದ್ದಂತೆ ಹೈಡ್ರಾಮಾ..!

ಇತ್ತೀಚಿನ ದಿನಗಳಲ್ಲಿ ಎಲ್ಲಾ ಇಲಾಖೆಯಲ್ಲೂ ಲಂಚಾವತಾರ ಹೆಚ್ಚಾಗುತ್ತಿದ್ದು, ಲೋಕಾಯುಕ್ತ ಅಧಿಕಾರಿಗಳು ಅಲರ್ಟ್ ಆಗಿದ್ದು, ಲಂಚ ಪಡೆಯುವ ಭ್ರಷ್ಟರಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇನ್ಸ್ಪೆಕ್ಟರ್ ಒಬ್ಬರು ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ತಗ್ಲಾಕಿಕೊಳ್ಳುತ್ತಿದ್ದಂತೆ ಇನ್ಸ್ಪೆಕ್ಟರ್ ರಂಪಾಟ ಮಾಡಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ವೈರಲ್
ಲೋಕಾಯುಕ್ತ ಪೊಲೀಸರ ಮುಂದೆ ಕೂಗಾಡಿ, ಚೀರಾಡಿ ರಂಪಾಟ ಮಾಡಿರುವ Inspector ಹೆಸರು ಗೋವಿಂದ ರಾಜು. ಇವರು ಬೆಂಗಳೂರಿನ ಕೆ.ಪಿ ಅಗ್ರಹಾರ ಪೊಲೀಸ್ ಸ್ಟೇಷನ್ನ ಇನ್ಸ್ಪೆಕ್ಟರ್. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ನಡೆದ ಇನ್ಸ್ಪೆಕ್ಟರ್ ಸಿಕ್ಕಿಹಾಕಿಕೊಂಡಿದ್ದು, ಲೋಕಾಯುಕ್ತ ಪೊಲೀಸರ ವಿರುದ್ಧವೇ ಕೂಗಾಡಿ ರಂಪಾಟ ಮಾಡಿದ್ದು, ಇನ್ಸ್ಪೆಕ್ಟರ್ ರಂಪಾಟ ನಡೆಸಿದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಇದನ್ನು ಓದಿ : Love Marriage ಆದ ಪ್ರಣಯ ಪಕ್ಷಿಗಳು -ಹೆತ್ತವರಿಗೆ ಹೆದರಿ ರಕ್ಷಣೆಗಾಗಿ ಅಲೆದಾಟ..!!!
5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ
ಹಣ ಹೂಡಿಕೆ ಸಂಬಂಧಿಸಿದಂತೆ ಸೂರಜ್, ಸುಜನ್ ಮತ್ತು ಶ್ರೀನಿವಾಸ್ ಎಂಬುವವರು ಧನರಾಜ್ ಎಂಬುವವರಿಗೆ ವಂಚನೆ ಮಾಡಿದ್ದು, ಇನ್ನು ಹಣ ವಾಪಸ್ ಕೇಳಿದ್ದಕ್ಕೆ ಸೂರಜ್, ಸುಜನ್ ಬೆದರಿಕೆ ಹಾಕಿದ್ರಂತೆ ಹೀಗಾಗಿ ಜನವರಿ 22ರಂದು ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಆರೋಪಿಗಳಾದ ಸೂರಜ್ ಹಾಗೂ ಸುಜನ್ ಮನೆಗೆ ಇನ್ಸ್ಪೆಕ್ಟರ್ ಗೋವಿಂದರಾಜು ನೇತೃತ್ವದ ಟೀಂ ತೆರಳಿ ವಿಚಾರಣೆಗೆ ಮುಂದಾದ್ರು. ಈ ವೇಳೆ ಆರೋಪಿಗಳು ಹಾಗೂ ಪೊಲೀಸರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ಬಳಿಕ ಇನ್ಸ್ಪೆಕ್ಟರ್ ಗೋವಿಂದರಾಜು ಡೀಲ್ಗೆ ಮುಂದಾಗಿದ್ದು, ಕೇಸ್ನಿಂದ ಮುಕ್ತರಾಗಲು ಸುಮಾರು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ರಂತೆ. ಈ ಸಂಬಂಧ ಆರೋಪಿಗಳ ಕಡೆಯವರಾದ ಮೊಹಮ್ಮದ್ ಅಕ್ಬರ್ ಎಂಬುವವರು ಲೋಕಾಯುಕ್ತ ಎಸ್ಪಿಗೆ ದೂರು ನೀಡಲಾಗಿತ್ತು.
ಲೋಕಾಯುಕ್ತ ಪೊಲೀಸರಿಂದ ಲಾಕ್
ಇನ್ನು ದೂರಿನನ್ವಯ ಲೋಕಾಯುಕ್ತ ಪೊಲೀಸರಾದ ದೇವರಾಜು ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ಟ್ರ್ಯಾಪ್ ಪ್ಲಾನ್ ಮಾಡಲಾಗಿತ್ತು. ಇನ್ಸ್ಪೆಕ್ಟರ್ ಗೋವಿಂದರಾಜು ಈಗಾಗಲೇ 1 ಲಕ್ಷ ರೂಪಾಯಿ ಲಂಚ ಪಡೆದಿದ್ದು, ಉಳಿದ 4 ಲಕ್ಷ ರೂಪಾಯಿ ಪಡೆಯಲು ಚಾಮರಾಜಪೇಟೆಯ ಮೈದಾನಕ್ಕೆ ಬಂದಿದ್ರು.
ಈ ವೇಳೆ ಲಂಚ ಪಡೆಯುತ್ತಿದ್ದ ಗೋವಿಂದರಾಜು ಅವರನ್ನು ಲೋಕಾಯುಕ್ತ ಪೊಲೀಸರು ಸುತ್ತುವರೆದು ಲಾಕ್ ಮಾಡಿದ್ರು. ಲಾಕ್ ಮಾಡುತ್ತಿದ್ದಂತೆ ಇನ್ಸ್ಪೆಕ್ಟರ್ ಗೋವಿಂದ ರಾಜು ಕೂಗಾಡು ಶುರು ಮಾಡಿದ್ದು, ಹೈಡ್ರಾಮಾ ಸೃಷ್ಟಿಸಿದ್ದಾರೆ. ಇನ್ನು ಇನ್ಸ್ಪೆಕ್ಟರ್ ರಂಪಾಟದ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಈ ಸಂಬಂಧ ಲೋಕಾಯುಕ್ತ ಪೊಲೀಸರು ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಇದನ್ನು ನೋಡಿ : ತೀರ್ಥಪುರ ಗ್ರಾ.ಪಂ.ಯ ಕರ್ಮಕಾಂಡ..ಹಳ್ಳಿಗಳಲ್ಲಿ ಗಬ್ಬೆದ್ದು ನಾರ್ತಿವೆ




