ತುಮಕೂರಿನಲ್ಲಿ ಮನೆಯ ವಿರೋಧದ ನಡುವೆಯೂ Love Marriage ಮಾಡಿಕೊಂಡ ಸೌಂದರ್ಯ–ರವೀಶ್ ಜೋಡಿ ಕುಟುಂಬದ ಬೆದರಿಕೆ ಆರೋಪಿಸಿ ಪೊಲೀಸರ ಮೊರೆ ಹೋಗಿದ್ದಾರೆ

Love Marriage : ಪ್ರೀತಿ ಮಾಡಬಾರದು ಮಾಡಿದರೇ ಜಗಕೆ ಹೆದರಬಾರದು ಅನ್ನೋ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಈ ಸಾಂಗ್ ಯಾರಿಗೆ ಗೊತ್ತಿಲ್ಲ ಹೇಳಿ… ಈ ಹಾಡಿನಂತೆ ಇಲ್ಲೊಬ್ಬ ಪ್ರೇಮಿಗಳು ವಿರೋಧದ ನಡುವೆ ಮದುವೆ ಆಗಿದ್ದು…
ಈ ನವ ಜೋಡಿಗೆ ಇದೀಗ ಯುವತಿ ಮನೆಯವರಿಂದ ಬೆದರಿಕೆ ಇದ್ದು, ರಕ್ಷಣೆ ಕೋರಿ ಪ್ರೇಮ ಪಕ್ಷಿಗಳು ಪೊಲೀಸರ ಮೊರೆ ಹೋಗಿರೋ ಘಟನೆ ತುಮಕೂರಿನಲ್ಲಿ ನಡೆದಿದೆ….

ಹೀಗೆ ನಿಂತಿರೋ ಪ್ರೇಮಿಗಳ ಹೆಸರು ಸೌಂದರ್ಯ ಹಾಗೂ ರವೀಶ್ ಅಂತಾ… ಸೌಂದರ್ಯ ತುಮಕೂರು ನಗರದ ಹನಮಂತಪುರದ ಯುವತಿಯಾಗಿದ್ರೆ ಹಾಗೂ ರವೀಶ್ ಬೆಳ್ಳಾವಿ ಮೂಲಕ ಯುವಕ..
ಸೌಂದರ್ಯ ಮನೆಯಲ್ಲಿ ಡ್ರೈವರ್ ಕೆಲಸಕ್ಕೆ ಸೇರಿದ್ದ.. ಸೌಂದರ್ಯ ಹಾಗೂ ರವೀಶ್ ಮಧ್ಯೆ ಅದ್ಯಾಗೋ ಪ್ರೇಮಾಂಕುರವಾಗಿದ್ದು… ಇಬ್ಬರು ಕಳೆದ ಒಂದು ವರ್ಷದಿಂದ ಪ್ರೀತಿ ಮಾಡ್ತಾ ಇದ್ದು…
ಮನೆಯ ಡ್ರೈವರ್ ರವೀಶ್ ಹಾಗೂ ಸೌಂದರ್ಯ ಒಬ್ಬರಿಗಿಬ್ಬರು ಬಿಟ್ಟಿರಲಾದಷ್ಟು ಗಾಢವಾಗಿ ಲವ್ ಮಾಡ್ತಾ ಇದ್ರು…
ಮನೆಯ ಡ್ರೈವರ್ ರವೀಶ್ ಹಾಗೂ ಸೌಂದರ್ಯ ಲವ್ ಮ್ಯಾಟರ್ ಅದ್ಯಾಗೋ ಹುಡುಗಿ ಮನೆಯವರಿಗೆ ಗೊತ್ತಾಗಿ ಬಿಟ್ಟಿದೆ… ಇದೆಲ್ಲ ಬೇಡ ಇಲ್ಲಿಗೆ ಇದನ್ನು ಬಿಟ್ಟುಬಿಡಿ ಅಂತಾ ವಾರ್ನಿಂಗ್ ಕೊಟ್ರಿದ್ರಂತೆ…
ಅಲ್ದೇ ಯುವತಿ ಸೌಂದರ್ಯಗೆ ತಮ್ಮ ಮಾವನ ಮಗನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ರಂತೆ…
ಆದ್ರೆ ಇದಕ್ಕೆ ಒಪ್ಪದ ಯುವತಿ ಸೌಂದರ್ಯ… ತನ್ನ ಪ್ರಿಯಕರನ್ನು ಬಿಟ್ಟು ಬೇರೆಯವರನ್ನು ಮದುವೆ ಆಗಲು ಒಪ್ಪದೇ..
ಮನೆ ಬಿಟ್ಟು ಹೋಗಿ ಚಿಕ್ಕನಾಯಕನಹಳ್ಳಿಯಲ್ಲಿ ಸದ್ದಿಲ್ಲದೇ ರಿಜಿಸ್ಟ್ರಾರ್ ಮ್ಯಾರೇಜ್ ಆಗಿ ಬಿಟ್ಟಿದ್ದಾರೆ..
ಮನೆ ಬಿಟ್ಟು ಹೋಗಿದ್ದ ಯುವತಿ ಸೌಂದರ್ಯ ಮಿಸ್ ಆಗಿದ್ದಾಳೆ ಅಂತಾ ತುಮಕೂರು ನಗರ ಪೊಲೀಸ್ ಠಾಣೆಗೆ ಯುವತಿ ಮನೆಕಡೆಯವರು ಚೆನ್ನಾಗಿದ್ದಾರೆ,
ಆಸ್ತಿ ಹೊಡೆಯಲು ನಮ್ಮ ಹುಡುಗಿಯ ಮನಸ್ಸು ಕೆಡಿಸಿ ರವೀಶ್ ಕರೆದುಕೊಂಡು ಹೋಗಿದ್ದಾನೆ ಎಂದು ಹುಡುಗಿ ಸೌಂದರ್ಯ ಕುಟುಂಬಸ್ಥರು ದೂರು ನೀಡಿದ್ದಾರೆ.
ಇನ್ನು ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಹುಡುಗ ಹುಡುಗಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ನಾವು ಮೇಜರ್… ನಮಗೆ ರಕ್ಷಣೆ ಬೇಕು!
ಇನ್ನು ಪೊಲೀಸ್ ಠಾಣೆಗೆ ಬಂದ ಪ್ರಣಯ ಪಕ್ಷಿಗಳು, ನಾವು ಮೇಜರ್ ಇದ್ದೇವೆ. ನಾವು ಇಷ್ಟ ಪಟ್ಟೆ ಮದುವೆ ಆಗಿದ್ದೇವೆ..
ನಾವಿಬ್ಬರು ಒಟ್ಟಿಗೆ ಬದುಕಲು ನಿರ್ಧರಿಸಿದ್ದೇವೆ. ಆದ್ರೆ ನಮ್ಮ ಮನೆಯಲ್ಲಿ ಬೆದರಿಕೆ ಹಾಕುತ್ತಿದ್ದಾರೆ.
ಒಂದು ವೇಳೆ ನಿನಗೆ ಅವನೇ ಬೇಕು ಅಂದ್ರೆ ನಿಮಗೂ ನಮಗೂ ಸಂಬಂಧ ಇಲ್ಲ…
ಆಸ್ತಿಯಲ್ಲಿ ಪಾಲು ಕೊಡಲ್ಲ ಅಂತಾ ಪೇಪರ್ ಮೇಲೆ ಬರೆದುಕೊಟ್ಟು ಹೋಗು ಅಂತಾ ಇದ್ದಾರೆ.. ನಮಗೆ ರಕ್ಷಣೆ ಬೇಕು ಅಂತಾ ಯುವತಿ ಸೌಂದರ್ಯ ಆಗ್ರಹಿಸಿದ್ಳು.

ಅದೇನೆ ಆಗಲಿ, ಪ್ರೀತಿ ಮಾಡೋದು ತಪ್ಪಲ್ಲ… ಮಕ್ಕಳ ಇಷ್ಟಪಟ್ಟವರ ಜೊತೆ ಮದುವೆ ಮಾಡಿಸಿದ್ರೆ, ಅಥವಾ ಅವರು ತಪ್ಪು ಆಯ್ಕೆ ಮಾಡಿಕೊಂಡಿದ್ದರೆ ಅದನ್ನ ತಿದ್ದಿ, ಬುದ್ದಿ ಹೇಳುವುದು ಹೆತ್ತವರ ಕೆಲಸ..
ಆದ್ರೆ ಅದನ್ನ ಬಿಟ್ಟು ಈ ಮದುವೆಗೆ ಒಪ್ಪಲ್ಲ ಅಂತಾ ಹೇಳಿ, ಮಕ್ಕಳ ಇಷ್ಟದ ವಿರುದ್ಧ ಹೋದರೇ ಹೀಗೆ ಓಡಿ ಹೋಗಿ ಮದುವೆ ಆಗ್ತಾರೆ…. ಇದ್ರಲ್ಲಿ ಪ್ರೇಮಿಗಳದ್ದು ಎಷ್ಟು ತಪ್ಪಿರುತ್ತದೇಯೋ.. ಅಷ್ಟೇ ತಪ್ಪು ಹೆತ್ತವರದ್ದು ಇರುತ್ತದೆ…
ಸದ್ಯ ಈ ಪ್ರಣಯ ಪಕ್ಷಿಗಳು ತಮ್ಮ ಪ್ರೀತಿ ಉಳಿಸಿಕೊಳ್ಳಲು ಪೊಲೀಸರ ಮೊರೆ ಹೋಗಿದ್ದು… ಈ ಜೋಡಿಯ ಪ್ರೀತಿಗೆ ನ್ಯಾಯ ಒದಗಿಸಿಕೊಡಬೇಕಿದೆ.




