ರಾಜ್ಯ ಸರ್ಕಾರಿ ನೌಕರರ ಪಾಲಿಗೆ ರಾಜ್ಯ ಸರ್ಕಾರವು ಮಹತ್ವದ Good News ಒಂದನ್ನು ನೀಡಿದೆ.

ರಾಜ್ಯ ಸರ್ಕಾರಿ ನೌಕರರ ಪಾಲಿಗೆ ರಾಜ್ಯ ಸರ್ಕಾರವು ಮಹತ್ವದ Good News ಒಂದನ್ನು ನೀಡಿದೆ. ಹಬ್ಬಗಳ ಆಚರಣೆಗಾಗಿ ಸರ್ಕಾರ ನೀಡುವ ‘ಹಬ್ಬದ ಮುಂಗಡ’ ಸೌಲಭ್ಯಕ್ಕೆ ಸಂಬಂಧಿಸಿದಂತೆ ಈಗಿರುವ ಹಬ್ಬಗಳ ಪಟ್ಟಿಗೆ ಹೊಸದಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸಿ, ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ನೌಕರರಿಗೆ ಹೆಚ್ಚಿನ ಅನುಕೂಲ
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಕೃತ ನಡವಳಿ ಹೊರಡಿಸಿದ್ದಾರೆ.
ಸರ್ಕಾರದ ನಿಯಮಗಳ ಪ್ರಕಾರ, ಸರ್ಕಾರಿ ನೌಕರರು ಹಬ್ಬದ ಆಚರಣೆಗಾಗಿ ಮುಂಗಡ ಹಣವನ್ನು ಪಡೆಯಲು ನಿಗದಿತ ಹಬ್ಬಗಳ ಪಟ್ಟಿಯಲ್ಲಿದ್ದ ಹಬ್ಬಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಈಗ ಈ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ನೌಕರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ.
ಇದನ್ನು ಓದಿ :

ಚಾಲ್ತಿಯಲ್ಲಿರುವ ಹಬ್ಬ
ಈಗಾಗಲೇ ರಜೆಗಳಲ್ಲಿ ಚಾಲ್ತಿಯಲ್ಲಿರುವ ಹಬ್ಬಗಳೆಂದರೆ, ಚಂದ್ರಮಾನ ಯುಗಾದಿ, ಮಕರ ಸಂಕ್ರಾಂತಿ, ದೀಪಾವಳಿ, ಗಣೇಶ ಚತುರ್ಥಿ, ರಂಜಾನ್, ಬಕ್ರೀದ್, ಈದ್-ಎ-ಮಿಲಾದ್, ಈಸ್ಟರ್, ದಸರಾ, ಗಣತಂತ್ರ ದಿನ ಮತ್ತು ಸ್ವಾತಂತ್ರ್ಯ ದಿನ ಇದ್ದವು.
ಹಲವು ಹಬ್ಬಗಳ ಸೇರ್ಪಡೆ
ಈ ಹಿಂದೆ ಕೇವಲ ಸೀಮಿತ ಹಬ್ಬಗಳಿಗೆ ಮಾತ್ರ ಮುಂಗಡ ಹಣ ಪಡೆಯಲು ಅವಕಾಶವಿತ್ತು. ಆದರೆ, ನೌಕರರ ಬೇಡಿಕೆ ಮತ್ತು ವಿವಿಧ ಸಮುದಾಯಗಳ ಹಬ್ಬಗಳನ್ನು ಪರಿಗಣಿಸಿ, ಈಗ ಈ ಪಟ್ಟಿಗೆ ಹೆಚ್ಚುವರಿಯಾಗಿ ಹಲವು ಹಬ್ಬಗಳನ್ನು ಸೇರ್ಪಡೆಗೊಳಿಸಲಾಗಿದೆ.
ಇದರಿಂದಾಗಿ ರಾಜ್ಯದಾದ್ಯಂತ ಇರುವ ವಿವಿಧ ಧರ್ಮ ಮತ್ತು ಸಂಸ್ಕೃತಿಯನ್ನು ಪಾಲಿಸುವ ಸರ್ಕಾರಿ ನೌಕರರು ತಮ್ಮ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಆರ್ಥಿಕ ನೆರವು ಪಡೆಯಲು ಸುಲಭವಾಗಲಿದೆ.
ಇದನ್ನು ಓದಿ : Tumakuru ಹೆತ್ತೇನಹಳ್ಳಿ ಮಾರಮ್ಮ ದೇವಾಲಯದಲ್ಲಿ ಭಕ್ತರ ವಿಚಿತ್ರ ಹರಕೆಗಳು..!

ಮುಂಗಡ ಹಣ ಪಡೆಯುವುದು ಹೇಗೆ
ಇನ್ನು ಹೊಸದಾಗಿ ಸೇರ್ಪಡೆಯಾದ ಹಬ್ಬಗಳೆಂದರೆ, ಮಹಾ ಶಿವರಾತ್ರಿ, ಶ್ರೀರಾಮನವಮಿ, ವರಮಹಾಲಕ್ಷ್ಮೀ ವ್ರತ, ಮಹಾಲಯ ಅಮವಾಸ್ಯೆ, ನಾಗರ ಪಂಚಮಿ, ಕನ್ನಡ ರಾಜ್ಯೋತ್ಸವ, ಹೋಳಿ ಹಬ್ಬ, ಬಸವ ಜಯಂತಿಗೆ ರಜೆ ನೀಡಲಾಗಿದೆ. ಮುಂಗಡ ಹಣ ಪಡೆಯುವುದು ಹೇಗೆ ಅನ್ನೋದಾದ್ರೆ. ಸರ್ಕಾರ ನಿಗದಿಪಡಿಸಿದ ಅರ್ಜಿಯಲ್ಲಿ ನೌಕರರು ತಮಗೆ ಬೇಕಾದ ಹಬ್ಬವನ್ನು ನಮೂದಿಸಿ ಮುಂಗಡ ಹಣಕ್ಕಾಗಿ ಮನವಿ ಮಾಡಬಹುದು.
ಅರ್ಜಿಯಲ್ಲಿ ನಮೂದಿಸಿದ ಹಬ್ಬವು ಸರ್ಕಾರದ ಅಧಿಕೃತ ಪಟ್ಟಿಯಲ್ಲಿದ್ದರೆ ಮಾತ್ರ ಮುಂಗಡ ಹಣ ಮಂಜೂರಾಗುತ್ತದೆ. ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಸರ್ಕಾರಿ ನೌಕರರಿಗೆ ಹಬ್ಬದ ಸಮಯದಲ್ಲಿ ಆರ್ಥಿಕವಾಗಿ ದೊಡ್ಡ ನೆರವು ಸಿಕ್ಕಂತಾಗಿದೆ.
ಇದನ್ನು ನೋಡಿ : TUMAKURU | ಮನೆಯ DRIVERನನ್ನೇ ಪ್ರೀತಿಸಿ ಮದುವೆ ಆದ ಯುವತಿ




