Menstrual Leave : ಮಹಿಳಾ ನೌಕರರ ಋತುಚಕ್ರ ರಜೆಗೆ ಕಂಡೀಷನ್ ಅಪ್ಲೈ! ರಜೆ ತೆಗೆದುಕೊಳ್ಳಲು ಈ ಎಲ್ಲಾ ಷರತ್ತುಗಳು ಕಡ್ಡಾಯ.

ಸರ್ಕಾರದಿಂದ ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರ ರಜೆ (Menstrual Leave) ನೀಡುವ ಆದೇಶದ ಹಿನ್ನೆಲೆಯಲ್ಲಿ, ಶಿಕ್ಷಣ ಇಲಾಖೆಯಲ್ಲಿ ಮಹಿಳಾ ನೌಕರರಿಗೆ ಕಡ್ಡಾಯವಾಗಿ ಋತುಚಕ್ರ ರಜೆ ನೀಡುವಂತೆ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಈ ಸಂಬಂಧ ರಜೆ ಮಂಜೂರಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.
ಷರತ್ತುಗಳು ಕಡ್ಡಾಯ
ಆದೇಶದಂತೆ, ಶಿಕ್ಷಣ ಇಲಾಖೆಯ ಮಹಿಳಾ ಸರ್ಕಾರಿ ನೌಕರರು ಪ್ರತಿ ತಿಂಗಳು ಒಂದು ದಿನ ಋತುಚಕ್ರ ರಜೆ ಪಡೆಯಲು ಅರ್ಹರಾಗಿದ್ದು, ಈ ರಜೆಗೆ ಯಾವುದೇ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ. ಆದರೆ, ರಜೆ ಬಳಕೆಗೆ ಕೆಲವು ಸ್ಪಷ್ಟ ಷರತ್ತುಗಳನ್ನು ವಿಧಿಸಲಾಗಿದೆ.

ಇದನ್ನು ಓದಿ : ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ Good ನ್ಯೂಸ್.!
ಋತುಚಕ್ರ ರಜೆಯ ಪ್ರಮುಖ ಷರತ್ತುಗಳು
- ಮಹಿಳಾ ನೌಕರರು ಆಯಾ ತಿಂಗಳ ಋತುಚಕ್ರ ರಜೆಯನ್ನು ಅದೇ ತಿಂಗಳಲ್ಲೇ ಬಳಸಿಕೊಳ್ಳಬೇಕು. ಹಿಂದಿನ ತಿಂಗಳ ರಜೆಯನ್ನು ಮುಂದಿನ ತಿಂಗಳಿಗೆ ವರ್ಗಾಯಿಸಲು (Carry Over) ಅವಕಾಶ ಇರುವುದಿಲ್ಲ.
- ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆ ಪಡೆಯಲು ವೈದ್ಯಕೀಯ ಪ್ರಮಾಣಪತ್ರ ಅಗತ್ಯವಿಲ್ಲ.
- ಋತುಚಕ್ರ ಹೊಂದಿರುವ 18 ರಿಂದ 52 ವರ್ಷ ವಯಸ್ಸಿನ ಮಹಿಳಾ ಸರ್ಕಾರಿ ನೌಕರರು ಈ ರಜೆಗೆ ಅರ್ಹರು.
- ಸಾಂದರ್ಭಿಕ ರಜೆ ಮಂಜೂರು ಮಾಡುವ ಅಧಿಕಾರ ಹೊಂದಿರುವ ಪ್ರಾಧಿಕಾರಿಯೇ ಋತುಚಕ್ರ ರಜೆಯನ್ನೂ ಮಂಜೂರು ಮಾಡಬಹುದು.
- ಋತುಚಕ್ರ ರಜೆಯನ್ನು ರಜೆ/ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ದಾಖಲಿಸಬೇಕು.
- ಈ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸಲು ಅವಕಾಶ ಇರುವುದಿಲ್ಲ.
ಮಹಿಳಾ ನೌಕರರಿಗೆ ಅನುಕೂಲ
ಈ ಆದೇಶದಿಂದ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರಿಗೆ ಆರೋಗ್ಯಪರ ಅನುಕೂಲ ಒದಗುವ ನಿರೀಕ್ಷೆಯಿದ್ದು, ಮಹಿಳಾ ಕಲ್ಯಾಣದತ್ತ ಸರ್ಕಾರದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ನೋಡಿ : ಪ್ರಿಯಕರನೇ ಬೇಕು ಅಂತಾ ಹೋದವಳು ಕೊನೆಗೂ ಸಿಕ್ಕಿಹಾಕಿಕೊಂಡ್ಳು?




