Cricket : ಇಂಡೋ-ನ್ಯೂಜಿಲೆಂಡ್ ಟಿ20 ಸರಣಿಯ ನಡುವೆ ಕನ್ನಡಿಗ ಕೆ.ಎಲ್ ರಾಹುಲ್ ಇದ್ದಕ್ಕಿದ್ದಂತೆ ತನ್ನ ಕ್ರಿಕೆಟ್ ಅಭಿಮಾನಿಗಳಿಗೆ ಬಹಿರಂಗವಾಗಿ ಹೇಳಿಕೆ ನೀಡಿ ಶಾಕ್ ನೀಡಿದ್ದಾರೆ.

Cricket : ಕನ್ನಡಿಗ ಕ್ರಿಕೆಟರ್ ಕೆ.ಎಲ್. ರಾಹುಲ್ ಇದ್ದಕ್ಕಿದ್ದಂತೆ ರಿಟೈರ್ಮೆಂಟ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು, “ವಿದಾಯ ಹೇಳುವುದು ನನಗೆ ಅಷ್ಟು ಕಷ್ಟವಲ್ಲ, ಅದನ್ನು ವಿಳಂಬ ಮಾಡುವುದಲ್ಲೂ ಅರ್ಥವಿಲ್ಲ” ಎಂಬ ಹೇಳಿಕೆ ನೀಡಿ ಫ್ಯಾನ್ಸ್ ತಲೆಗೆ ಹುಳಬಿಟ್ಟಿದ್ದಾರೆ.
ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಸೈಲೆಂಟ್ ಸೂಪರ್ಸ್ಟಾರ್
ಸದ್ಯ ಟಿ20 ಫಾರ್ಮ್ಯಾಟ್ನಿಂದ ದೂರ ಉಳಿದಿರುವ ರಾಹುಲ್, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗಿ ಮಿಂಚುತ್ತಿದ್ದಾರೆ. ಟೆಸ್ಟ್ನಲ್ಲಿ ಆರಂಭಿಕನಾಗಿ, ಏಕದಿನದಲ್ಲಿ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಪ್ರದರ್ಶನ ನೀಡುತ್ತಿರುವ ಅವರು, ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ನಿಂದಲೂ ಎದುರಾಳಿಗಳಿಗೆ ತಲೆ ನೋವಾಗಿದ್ದಾರೆ.

ನಿವೃತ್ತಿ ಬಗ್ಗೆ ಕನ್ನಡಿಗ ಓಪನ್ ಟಾಕ್..!
ಫಿಟ್ನೆಸ್ ವಿಚಾರದಲ್ಲೂ ಟಾಪ್ ಕ್ಲಾಸ್ ಅಥ್ಲೀಟ್ ಎನ್ನಿಸಿಕೊಂಡಿರುವ ಕನ್ನಡಿಗನಿಂದ ನಿವೃತ್ತಿ ಮಾತುಗಳು ಹೊರಬಿದ್ದಿರುವುದು ಅಭಿಮಾನಿಗಳಿಗೆ ಅಚ್ಚರಿಯಾಗಿದೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಪೀಟರ್ಸನ್ ಜೊತೆಗಿನ ಸಂದರ್ಶನವೊಂದರಲ್ಲಿ,“ರಿಟೈರ್ಮೆಂಟ್ ಅನ್ನೋದು ನನಗೆ ಅಷ್ಟು ಕಷ್ಟ ಅಂತ ಅನ್ನಿಸಿಲ್ಲ. ಅದನ್ನ ವಿಳಂಬ ಮಾಡೋದ್ರಲ್ಲೂ ಅರ್ಥವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ : IPL RAPP ಲಿಸ್ಟ್ ಪ್ರಕಟ – 1,307 ಆಟಗಾರರಿಗೆ ಸ್ಥಾನ
ವಿದಾಯ ಹೇಳೋದು ನನಗೆ ಕಷ್ಟವಲ್ಲ
“ನಮಗೆ ಕುಟುಂಬ ಇದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಅದಕ್ಕಿಂತ ನಾನು ಮುಖ್ಯವಲ್ಲ. ಕ್ರಿಕೆಟ್ ನಮ್ಮ ದೇಶದಲ್ಲೂ ಜಗತ್ತಿನಲ್ಲೂ ಯಾವಾಗಲೂ ಮುಂದುವರೆಯುತ್ತೆ. ಆದರೆ ನಮ್ಮ ಜೀವನದಲ್ಲೂ ಹೆಚ್ಚು ಮುಖ್ಯವಾದ ವಿಚಾರಗಳಿವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಹುಲ್ಗೆ ಇನ್ನೂ 2–3 ವರ್ಷಗಳ ಕಾಲ ಉನ್ನತ ಮಟ್ಟದ ಕ್ರಿಕೆಟ್ ಆಡೋ ಸಾಮರ್ಥ್ಯವಿದ್ದು, ಟೀಮ್ ಇಂಡಿಯಾಗೂ ಈ ಹೆಮ್ಮೆಯ ಕನ್ನಡಿಗನ ಅಗತ್ಯತೆ ಬಹಳಷ್ಟಿದೆ. ಹೀಗಾಗಿ ಸದ್ಯಕ್ಕಂತೂ ಕೆ.ಎಲ್ ರಾಹುಲ್ ಕ್ರಿಕೆಟ್ಗೆ ಗುಡ್ಬೈ ಹೇಳೋದು ದೂರದ ಮಾತೇ ಎನ್ನಲಾಗುತ್ತಿದೆ.
MUST WATCH : ಮಕ್ಕಳಿಗೆ ಬಿಸಿಯೂಟದಲ್ಲಿ ಕೊಡ್ತಿರೋ ಬೇಳೇನ ಹಂದಿನೂ ತಿನ್ನಲ್ಲ – ಸುರೇಶ್ ಗೌಡ ಆಕ್ರೋಶ




