Accident : ಎರಡು ಟ್ರಕ್ಗಳ ನಡುವೆ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಕಾಕಿನಾಡದ ಕತಿಪುಡಿಯಲ್ಲಿ ಎರಡು ಟ್ರಕ್ಗಳ ನಡುವೆ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಚಾಲಕನೋರ್ವ ಸ್ಥಳದಲ್ಲೇ ಸಜೀವದಹನವಾಗಿರುವ ಘಟನೆ ನಡೆದಿದೆ.

ಚಾಲಕ ಸ್ಥಳದಲ್ಲೇ ಸಜೀವದಹನ
ಹೆಚ್ಚು ವಾಹನಗಳು ಸಂಚರಿಸುವ ಹೆದ್ದಾರಿ ಪಕ್ಕದ ರಸ್ತೆಯಿಂದ ಒಂದು ಟ್ರಕ್ ಯೂ ಟರ್ನ್ ತೆಗೆದುಕೊಳ್ಳುವ ವೇಳೆ ಎದುರಿನಿಂದ ಬಂದ ಮತ್ತೊಂದು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ Accident ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳಿಗೆ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದ್ದು, ಓರ್ವ ಚಾಲಕ ಟ್ರಕ್ನಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾದ್ರೆ, ಮತ್ತೋರ್ವ ಚಾಲಕ ಟ್ರಕ್ ನೊಳಗಿಂದ ಹೊರಬರಲು ಸಾಧ್ಯವಾಗದೇ ಸ್ಥಳದಲ್ಲೇ ಸಜೀವದಹನವಾಗಿದ್ದಾರೆ.
ಇದನ್ನು ಓದಿ : ರಾಜಕಾರಣಿಗಳ ಮಗಳಂದಿರ ಜತೆ ಯುವಕನ ಕಾಮಕೇಳಿ – ವಿಡಿಯೋ Viral

ಪ್ರಕರಣ ದಾಖಲು
ಇನ್ನು ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೇ ಧಾವಿಸಿ ಬೆಂಕಿ ನಂದಿಸಿ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಅಧಿವೇಶನದಲ್ಲಿ ರೂಲ್ ಬುಕ್ ಹರಿದ ವಿಚಾರ ಸದನದಲ್ಲಿ ಬಿ.ಕೆ.ಹರಿಪ್ರಸಾದ್ ಕೆಂಡಾಮಂಡಲ




