Kodagu : ರಾಜಕಾರಣಿ ಮಕ್ಕಳು ಸೇರಿ ಯುವತಿಯರೊಂದಿಗೆ ರಾಸಲೀಲೆ ವಿಡಿಯೋ ವೈರಲ್ – ಆರೋಪಿ ಅರೆಸ್ಟ್!

ಕೊಡಗು ಜಿಲ್ಲೆಯಲ್ಲಿ ಯುವಕನೊಬ್ಬ ಹಲವು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ರಾಸಲೀಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಸಂಚಲನ ಮೂಡಿಸಿದೆ. ಇನ್ನು ಈ ಪ್ರಕರಣ ಸಂಬಂಧ ಮೊಹಮ್ಮದ್ ಸವದ್ ಎಂಬ ಯುವಕನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ರಾಸಲೀಲೆಯ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಸವದ್
ಬಂಧಿತ ಆರೋಪಿ ಮೊಹಮ್ಮದ್ ಸವದ್ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿರುವ ಯೆನಪೋಯ ಕಾಲೇಜಿನಲ್ಲಿ BBA ವಿದ್ಯಾರ್ಥಿಯಾಗಿದ್ದಾನೆ. ಆರೋಪಿ ಸವದ್ ವಿವಿಧ ಯುವತಿಯರೊಂದಿಗೆ ಕಾಮಕೇಳಿ ನಡೆಸಿ, ಖಾಸಗಿ ಕ್ಷಣಗಳನ್ನು ಸ್ವತಃ ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ ಎನ್ನಲಾಗಿದೆ. ಈ ವಿಡಿಯೋಗಳು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನು ಓದಿ : ಸ್ಯಾಂಡಲ್ವುಡ್ ನಟ Mayur Patel ವಿರುದ್ಧ FIR – ಆಗಿದ್ದೇನು..?
ರಾಜಕಾರಣಿ ಮಕ್ಕಳು ಸೇರಿ ಯುವತಿಯರೊಂದಿಗೆ ರಾಸಲೀಲೆ
ವೈರಲ್ ಆಗಿರುವ ವಿಡಿಯೋಗಳಲ್ಲಿ ಕೆಲ ಯುವತಿಯರು ಅನ್ಯ ಧರ್ಮಕ್ಕೆ ಸೇರಿದವರಾಗಿದ್ದು, ಕೆಲವರು ರಾಜಕೀಯ ಪಕ್ಷಗಳ ಜಿಲ್ಲಾ ಮಟ್ಟದ ನಾಯಕರ ಪುತ್ರಿಯರು ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಆರೋಪಿ ಅರೆಸ್ಟ್! – Kodagu
ಈ ಸಂಬಂಧ Kodagu ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದು, ವಿಡಿಯೋಗಳ ಮೂಲ, ಹರಡುವಿಕೆ ಹಾಗೂ ಇತರೆ ಅಂಶಗಳ ಕುರಿತು ಪೊಲೀಸರು ಸುದೀರ್ಘ ತನಿಖೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ವಿಧಾನಸಭೆಯಲ್ಲಿ ಪಡಿತರ ಅಕ್ಕಿ ಗದ್ದಲ ಮುನಿಯಪ್ಪ – ಮಹೇಶ್ ಫುಲ್ ಫೈಟ್




