ಪೊಲೀಸ್ ಡ್ರೆಸ್ ನಲ್ಲಿ ಕಚೇರಿಯಲ್ಲಿ DGP ರಾಮಚಂದ್ರರಾವ್ ರಾಸಲೀಲೆ!

ರಾಜ್ಯದಲ್ಲಿ ಮತ್ತೊಂದು ರಾಸಲೀಲೆ ವಿಡಿಯೋ ಬಿಡುಗಡೆಯಾಗಿದೆ. ಇದರಲ್ಲಿ ಭಾಗಿಯಾಗಿರೋದು ಯಾರೋ ರಾಜಕಾರಣಿಯಲ್ಲ. ರಾಜ್ಯದ DGP ಭಾಗಿ ಆಗಿರುವ ರಾಸಲೀಲೆ ವಿಡಿಯೋ ಬಿಡುಗಡೆಯಾಗಿದೆ.

ರಾಸಲೀಲೆಗಳು CC ಕ್ಯಾಮರಾದಲ್ಲಿ ರೆಕಾರ್ಡ್
ಕರ್ನಾಟಕದ ಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯಾದ ಡಾ. ರಾಮಚಂದ್ರ ರಾವ್ ಅವರು ಮಹಿಳೆಯರ ಜೊತೆ ರಾಸಲೀಲೆ ನಡೆಸುತ್ತಿರುವ ವಿಡಿಯೋ ಬಿಡುಗಡೆಯಾಗಿದೆ. ಡಿಜಿಪಿ ಕಚೇರಿಯಲ್ಲೇ ಈ ರಾಸಲೀಲೆಗಳು ನಡೆದಿವೆ. ಇನ್ನು ಮಹಿಳೆಯರ ಜೊತೆ ಡಿಜಿಪಿ ಕಚೇರಿಯಲ್ಲೇ ರಾಮಚಂದ್ರ ರಾವ್ ರಾಸಲೀಲೆ ನಡೆಸಿರುವುದು ಸೀಕ್ರೆಟ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
ಇದನ್ನು ಓದಿ : ಆನಗೋಡು ಕಿರು ಮೃಗಾಲಯದಲ್ಲಿ 4 ಚುಕ್ಕಿ ಜಿಂಕೆಗಳ ನಿಗೂಢ ಸಾವು

ಪೊಲೀಸ್ ಡ್ರೆಸ್ ನಲ್ಲಿ ಕಚೇರಿಯಲ್ಲಿ ರಾಸಲೀಲೆ!
ಕಚೇರಿಯಲ್ಲಿ ಕರ್ತವ್ಯದ ಸಮಯದಲ್ಲೇ ಮಹಿಳೆಯರ ಜೊತೆ ಡಾ.ರಾಮಚಂದ್ರರಾವ್ ರಾಸಲೀಲೆ ನಡೆಸಿದ್ದಾರೆ. ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳೆಯರನ್ನ ತಬ್ಬಿಕೊಂಡು ಮುತ್ತುಕೊಟ್ಟಿ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ನಡೆಸಿದ್ದಾರೆ. ಕಚೇರಿಯ ವೇಳೆಯಲ್ಲಿ ಪೊಲೀಸ್ ಡ್ರೆಸ್ ಧರಿಸಿ ರಾಮಚಂದ್ರ ರಾವ್ ರಾಸಲೀಲೆ ನಡೆಸಿರುವುದು ತೀವ್ರ ಟೀಕೆಗೆ ಗುರಿಯಾಗಿದ್ದ, ಇದು ಪೋಲಿಸ್ ಇಲಾಖೆ ಶಿಸ್ತು, ಗೌರವ ಮತ್ತು ಘನತೆಗೆ ತೀವ್ರ ಧಕ್ಕೆ ತರುವ ವಿಷಯವಾಗಿದೆ.

ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ..?
ವಿದ್ಯಮಾನದಲ್ಲಿ ಡಿಜಿಪಿ ರಾಮಚಂದ್ರ ರಾವ್ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿದ್ದು, ಈ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಲುಪಿದಿದ್ದು, ಅವರು ಕೋಪಗೊಂಡಿದ್ದಾರೆ. ಇನ್ನು ಈ ಪ್ರಕರಣದ ಸಂಬಂಧದಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನು ನೋಡಿ : KSRTC WORKERS PROTEST | ರೊಚ್ಚಿಗೆದ್ದ ಸರ್ಕಾರಿ ಸಾರಿಗೆ ನೌಕರರು




