Davanagere ಯ ಆನಗೋಡು ಕಿರು ಮೃಗಾಲಯದಲ್ಲಿ 4 ಚುಕ್ಕಿ ಜಿಂಕೆಗಳ ನಿಗೂಢ ಸಾವು.

ಕಳೆದ ಕೆಲವು ತಿಂಗಳ ಹಿಂದೆ ಬೆಳಗಾವಿಯಲ್ಲಿರುವ ಕಿರು ಮೃಗಾಲಯದಲ್ಲಿ ನಿಗೂಢವಾಗಿ 25ಕ್ಕೂ ಹೆಚ್ಚು ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇದೀಗ ಚುಕ್ಕಿ ಜಿಂಕೆಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ Davanagere ಜಿಲ್ಲೆಯ ಆನಗೋಡು ಗ್ರಾಮದ ಬಳಿ ಇರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಡೆದಿದೆ.
ಇದನ್ನು ಓದಿ : Kolar|ದೇವಾಲಯ ಪೂಜಾರಿಯ ಬರ್ಬರ ಕೊಲೆ

4 ಚುಕ್ಕಿ ಜಿಂಕೆಗಳ ನಿಗೂಢ ಸಾವು
ಮೃತ ಚುಕ್ಕಿ ಜಿಂಕೆಗಳಲ್ಲಿ ಹೆಮರಾಜಿಕ್ ಸೆಫ್ಟಿಸೆಮಿಯಾ ಎಂಬ ರೋಗದ ಅಂಶಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ. ಮೃಗಾಲಯದಲ್ಲಿ ಪ್ರಸ್ತುತ 170 ಚುಕ್ಕಿ ಜಿಂಕೆಗಳು ಇರುವುದರಿಂದ, ಅವುಗಳನ್ನು ಉಳಿಸಿಕೊಳ್ಳಲು ತುರ್ತು ವೈದ್ಯಕೀಯ ಚಿಕಿತ್ಸೆಯನ್ನು ಆರಂಭಿಸಲಾಗಿದೆ.
ವೀಕ್ಷಣೆ ನಿಷೇಧ
ಇನ್ನು ಸಾರ್ವಜನಿಕರ ಸುರಕ್ಷತೆಗಾಗಿ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಮೃಗಾಲಯದ ವೀಕ್ಷಣೆ ನಿಷೇಧಿಸಿದೆ.

ಇದನ್ನು ನೋಡಿ : SURESH GOWDA | ಪರಂ ಪರ ಸುರೇಶ್ ಗೌಡ ಬ್ಯಾಟ್ – ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ




