Kolar : ಮಾಲೂರಿನಲ್ಲಿ ದೇವಾಲಯದ ಪೂಜಾರಿ ಕೊಲೆ; ದುಷ್ಕರ್ಮಿಗಳು ಪರಾರಿ

Kolar : ದೇವಾಲಯದ ಪೂಜಾರಿಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಹರಳೇರಿ ಸಮೀಪ ನಡೆದಿದೆ. ಮಾಲೂರು ತಾಲ್ಲೂಕು ಕಲ್ಲೂರು ಗ್ರಾಮದ ಚೌಡೇಶ್ವರಿ ದೇವಾಲಯದ ಪೂಜಾರಿ ಆಂಜಿನಪ್ಪ (45) ಕೊಲೆಯಾದ ದುರ್ದೈವಿಯಾಗಿದ್ದಾರೆ.
ಕೊಚ್ಚಿ ಕೊಲೆ
ನೆನ್ನೆ ರಾತ್ರಿ ಮಾಲೂರು ನಗರದಿಂದ ಬೈಕ್ನಲ್ಲಿ ವಾಪಸ್ಸಾಗುತ್ತಿದ್ದ ವೇಳೆ, ದುಷ್ಕರ್ಮಿಗಳು ಆಂಜಿನಪ್ಪ ಅವರ ಮೇಲೆ ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನು ನೋಡಿ : ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ- ಕಾಲು ಜಾರಿ ನಾಲೆಗೆ ಬಿದ್ದು ದಾರುಣ ಸಾ*
ವ್ಯಕ್ತಿಗತ ದ್ವೇಷವೇ ಕೊಲೆಗೆ ಕಾರಣ…?
ಕೊಲೆಯ ಹಿಂದೆ ಇರುವ ದುಷ್ಕರ್ಮಿಗಳು ಯಾರು ಹಾಗೂ ಕೊಲೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ವ್ಯಕ್ತಿಗತ ದ್ವೇಷವೇ ಈ ಕೊಲೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಪ್ರಕರಣ ದಾಖಲು
ಇನ್ನು ಘಟನಾ ಸ್ಥಳಕ್ಕೆ ಮಾಲೂರು ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನು ಓದಿ : Haveri|ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ




