Gubbi : ಲಕ್ಕೇನಹಳ್ಳಿ ಶ್ರೀ ತುಳಸಿ ರಂಗನಾಥಸ್ವಾಮಿ ಸೂರ್ಯ ಮಂಡಲೋತ್ಸವ ಅದ್ಧೂರಿಯಾಗಿ ಜರುಗಿತು.

Gubbi ತಾಲೂಕಿನ ಲಕ್ಕೇನಹಳ್ಳಿ ಶ್ರೀ ತುಳಸಿ ರಂಗನಾಥಸ್ವಾಮಿ ಸೂರ್ಯ ಮಂಡಲೋತ್ಸವ ಅದ್ಧೂರಿಯಾಗಿ ಜರುಗಿದ್ದು, ಸಾವಿರಾರು ಮಂದಿ ಭಕ್ತರು ಭಾಗಿಯಾಗಿದ್ರು. ತುಳಸಿಕಟ್ಟೆ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಮೂರು ದಿನಗಳಿಂದ ನಡೆದ ಜಾತ್ರಾ ಮಹೋತ್ಸವ ಹಲವು ಧಾರ್ಮಿಕ ಆಚರಣೆ ಮೂಲಕ ವಿಧಿವತ್ತಾಗಿ ನಡೆಯಿತು.
ಇದನ್ನು ಓದಿ : Dina Bhavishya : ಇಂದು ಈ ರಾಶಿಗೆ ಮಹಾದೇವನ ಕೃಪೆಯಿಂದ ಭರ್ಜರಿ ಲಾಭ..!!
ಸಹಸ್ರಾರು ಭಕ್ತರು ಭಾಗಿ
ನಿನ್ನೆ ಅಶ್ವಗಳ ರಥದಲ್ಲಿ ಸೂರ್ಯ ಮಂಡಲ ನಿರ್ಮಿಸಿ ಸ್ವಾಮಿಯನ್ನು ಕುಳ್ಳರಿಸಿ ರಥೋತ್ಸವ ಅದ್ದೂರಿಯಾಗಿ ಎಳೆಯಲಾಯಿತು. ಈ ಜಾತ್ರಾ ಮಹೋತ್ಸವಕ್ಕೆ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದು, ರಥಕ್ಕೆ ಬಾಳೆಹಣ್ಣು ದವನ ಎಸೆದು ಹರಕೆ ತೀರಿಸಿದ್ರು.
ಸಮಿತಿ ರಚನೆ
ಜಾತ್ರಾ ವ್ಯವಸ್ಥೆವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಮಿತಿಯನ್ನು ರಚಿಸಿಕೊಂಡಿದ್ದು, ಸಮಿತಿಯಲ್ಲಿ ಅಧ್ಯಕ್ಷ ಶಿವರಾಮಣ್ಣ, ಗ್ರಾಪಂ ಸದಸ್ಯರಾದ ಕೃಷ್ಣಮೂರ್ತಿ, ಮಹೇಂದ್ರ ಕುಮಾರ್, ತೋಪೇಗೌಡ, ಎಲ್.ಆರ್.ಗಂಗಾಧರ್, ನಾಗರಾಜು ಸೇರಿ ಹಲವರು ಇದ್ದರು.
ಇದನ್ನು ನೋಡಿ : MADUGIRI | ವಿದ್ಯುತ್ ಸ್ಪರ್ಷಿಸಿ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು




