ಹಾಸನದಲ್ಲಿ ʼದಳಪತಿʼಗಳ ಅಬ್ಬರ – ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಹೆಚ್ಡಿಡಿ.

ಸ್ಥಳೀಯ ಚುನಾವಣೆ ಜೊತೆ ಹಲವು ಚುನಾವಣೆಗಳು ಹತ್ತರ ಬರ್ತಾ ಇದ್ದು, ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ದಳಪತಿ ಸಜ್ಜಾಗಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಬೆನ್ನಲ್ಲೇ ಜೆಡಿಎಸ್ಗೆ ಭಾರೀ ಮುಖಭಂಗವಾಗಿದ್ದು, ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತೆ ಬಲಪಡಿಸುವ ನಿಟ್ಟಿನಲ್ಲಿ ದಳಪತಿ ಕರುನಾಡಿನಲ್ಲಿ ರಣಕಹಳೆ ಮೊಳಗಿಸಿದ್ದಾರೆ. ಅಖಾಡಕ್ಕೆ ಮಾಜಿ ಪ್ರಧಾನಿ ದೇವೇಗೌಡರೇ ಧುಮುಕಿದ್ದು, ಜೆಡಿಎಸ್ ಬೆಳ್ಳಿ ಹಬ್ಬದ ಅಂಗವಾಗಿ ಹಾಸನದಲ್ಲಿ ಬೃಹತ್ ಶಕ್ತಿ ಪ್ರದರ್ಶನ ಮಾಡಲಾಯ್ತು.
ತವರು ಕ್ಷೇತ್ರ ಹಾಸನದಲ್ಲಿ ದಳಪತಿ ಶಕ್ತಿ ಪ್ರದರ್ಶನ
ತವರು ಕ್ಷೇತ್ರ ಹಾಸನದಲ್ಲೇ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ಗೆ ಭಾರೀ ಮುಖಂಭಂಗವಾಗಿತ್ತು. ಜೊತೆಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಕುಟುಂಬದ ವಿರುದ್ಧ ಕೇಳಿ ಬಂದ ಆರೋಪಗಳಿಂದ ಜೆಡಿಎಸ್ ರಾಜ್ಯದಲ್ಲಿ ನೆಲಕಚ್ಚಿದ್ದು, ರಾಜ್ಯದಲ್ಲಿ ಮತ್ತೆ ಪುಟಿದೇಳುವಂತೆ ಮಾಡಲು ಜೆಡಿಎಸ್ ರಣತಂತ್ರವನ್ನು ಹೆಣೆದಿದೆ.
ಇದೇ ವೇಳೆ ಜೆಡಿಎಸ್ ಪಕ್ಷಕ್ಕೆ 25 ವರ್ಷ ಪೂರ್ಣಗೊಂಡ ಬೆನ್ನಲ್ಲೇ ಬೆಳ್ಳಿ ಹಬ್ಬವನ್ನು ಆಚರಿಸಲಾಗ್ತಾ ಇದ್ದು, ತವರು ಕ್ಷೇತ್ರ ಹಾಸನದಲ್ಲಿ ದಳಪತಿ ಶಕ್ತಿ ಪ್ರದರ್ಶನ ಮಾಡಲಾಗಿದ್ದು, ಸಾವಿರಾರು ಮಂದಿ ಜೆಡಿಎಸ್ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ರು. ಕಾರ್ಯಕರ್ತರ ಪ್ರೀತಿ ಕಂಡ ಜೆಡಿಎಸ್ ವರಿಷ್ಠರಾದ ದೇವೇಗೌಡರು ಭಾವುಕರಾದ್ರು.

ರೇವಣ್ಣ ಹಗಲು ರಾತ್ರಿ ಶ್ರಮಿಸಿ ಅಭಿವೃದ್ಧಿ
ಇನ್ನು ಜೆಡಿಎಸ್ ಬೃಹತ್ ಶಕ್ತಿ ಪ್ರದರ್ಶನದ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಹಾಸನ ಜಿಲ್ಲೆಗೆ ರೇವಣ್ಣ ಹಗಲು ರಾತ್ರಿ ಶ್ರಮಿಸಿ ಅಭಿವೃದ್ಧಿ ಮಾಡಿದ್ದಾರೆ. ಆದ್ರೆ ರೇವಣ್ಣನನ್ನು ತುಳಿಯಬೇಕು ಅಂತಾ, ಮನೆಯಲ್ಲಿದ್ದ ರೇವಣ್ಣನನ್ನು ನಿಮ್ಮನ್ನ ಅರೆಸ್ಟ್ ಮಾಡಿದ್ದೇವೆ ಬನ್ನಿ ಅಂದ್ರು. ಅಂದು ರೇವಣ್ಣನನ್ನು ಅರೆಸ್ಟ್ ಮಾಡಿದ್ದ ಎಸ್ಐಟಿ ಅಧಿಕಾರಿಗಳಿಗೆ ಉಡುಗೊರೆಯನ್ನು ಕೊಟ್ಟಿದ್ದಾರೆ ಎಂದು ದೇವೇಗೌಡರು ಆಕ್ರೋಶ ಹೊರಹಾಕಿದ್ರು.
ಇದನ್ನು ಓದಿ : ಗೃಹಿಣಿಯರ ಕೈಸುಟ್ಟ ಎಣ್ಣೆ..! ಒಗ್ಗರಣೆ ಹಾಕುವ ಮುನ್ನ ಈ ಸ್ಟೋರಿ ಓದಿ..!

ಅಲ್ದೇ ಈ ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸೋಕೆ ಪ್ರಯತ್ನ
ಇನ್ನು ಇದೇ ವೇಳೆ ನಾನು ಹಿಂದೆ ಇಲ್ಲೇ ಸೋತಿದ್ದೇನೆ, ಯಾವ ದೇವೇಗೌಡರನ್ನು ಸೋಲಿಸಿದ್ದರು. ಅದೇ ಜನ 1991ರಲ್ಲಿ ಗೆಲ್ಲಿಸಿದ್ದರು. ನನ್ನ ತುಳಿಬೇಕು ಅಂತಾ ಪ್ರಯತ್ನ ಮಾಡಿದ್ರು, ಕೇಸ್ಗಳನ್ನು ಹಾಕಿದ್ರು. ಅಂತಹವರ ಮುಂದೆ ನಾನು ಗೆದ್ದು ತೋರಿಸಿದೆ. ಅಲ್ದೇ ಈ ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸೋಕೆ ಪ್ರಯತ್ನ ಪಟ್ಟರು, ರಾಜ್ಯದ ಆಡಳಿತ ನಡೆಸೋರಿಗೆ ನಿಮ್ಮ ಆಟ ನಡೆಯಲ್ಲ ಅಂತ ತೋರಿಸಿದ್ದಾರೆ. ಕಾಲ ಬರುತ್ತೆ, ಕಾಲ ಬರುತ್ತೆ ಸ್ವಲ್ಪ ಕಾಯಿರಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ರಾಜ್ಯ ರಾಜಕಾರಣಕ್ಕೆ ಕುಮಾರಣ್ಣ ಬರೋದು ಅನಿವಾರ್ಯ
ಇನ್ನು ಈ ವೇಳೆ ಕೇಂದ್ರ ಸಚಿವರಾಗಿರೋ ಕುಮಾರಣ್ಣ ರಾಜ್ಯ ರಾಜಕಾರಣಕ್ಕೆ ಬರೋದು ಅನಿವಾರ್ಯ ಆಗಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಬರುವ ಸಾಧ್ಯತೆ ಇದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಲ್ ಕುಮಾರಸ್ವಾಮಿ ಕುಮಾರಣ್ಣ ರಾಜ್ಯ ರಾಜಕಾರಣಕ್ಕೆ ಬರುವ ಸುಳಿವನ್ನು ಕೊಟ್ಟಿದ್ದಾರೆ. ಅಲ್ದೇ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಗ್ಯಾರಂಟಿ ಯೋಜನೆಯನ್ನು ಟೀಕೆ
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಗ್ಯಾರಂಟಿ ಯೋಜನೆಯನ್ನು ಟೀಕಿಸಿದ್ರು.
ಒಟ್ನಲ್ಲಿ ಜೆಡಿಎಸ್ ಪಕ್ಷವನ್ನು ತವರು ಕ್ಷೇತ್ರದಿಂದ ಬಲಪಡಿಸಲು ದಳಪತಿಗಳುರಣಕಹಳೆ ಮೊಳಗಿಸಿದ್ದು, 2028ರ ವಿಧಾನಸಭಾ ಚುನಾವಣೆ ಹಾಗೂ ಸ್ಥಳೀಯ ಚುನಾವಣೆಗಳನ್ನು ಗುರಿಯಾಗಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗ್ತಾ ಇದ್ದಾರೆ. ಮುಂದಿನ ಚುನಾವಣೆ ಗಳನ್ನ JDS ಹೇಗೆ ಹೆದರಿಸುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.

ಇದನ್ನು ನೋಡಿ : ಗಣರಾಜ್ಯೋತ್ಸವ ಭಾಷಣದಲ್ಲಿ ರಾಜ್ಯಪಾಲರು ನಾವು ಬರೆದುಕೊಟ್ಟಿದ್ದನ್ನ ಓದಬೇಕೆಂಬ ನಿಯಮವಿಲ್ಲ : ಸಿಎಂ ಸಿದ್ದರಾಮಯ್ಯ




