Belagavi ಯಲ್ಲಿ ಬಿಯರ್ ಕುಡಿಸಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಪೋಕ್ಸೋ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹8.76 ಲಕ್ಷ ದಂಡ ವಿಧಿಸಿದೆ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

Belagavi : ಬಿಯರ್ ಕುಡಿಸಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ (Life Imprisonment) ವಿಧಿಸಿ ಬೆಳಗಾವಿ ಪೋಕ್ಸೋ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ಕೇವಲ 8 ತಿಂಗಳ ಅವಧಿಯಲ್ಲಿ ಪ್ರಕರಣ ಇತ್ಯರ್ಥಗೊಂಡು ನಾಲ್ವರು ಆರೋಪಿಗಳಿಗೆ ಕಠಿಣ ಶಿಕ್ಷೆ ಪ್ರಕಟವಾಗಿದೆ.
ಇಬ್ಬರಿಗೆ ಜೀವಾವಧಿ, ಇಬ್ಬರಿಗೆ 20 ವರ್ಷ ಜೈಲು
ಪ್ರಕರಣದ ಪ್ರಮುಖ ಆರೋಪಿಗಳಾದ ಸಾಕೀಬ್ ನಿಜಾಮಿ (22) , ರವಿ ನಾಯ್ಯೋಡಿ.ಈ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಒಟ್ಟಾರೆ ₹8.76 ಲಕ್ಷ ದಂಡ ವಿಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ರೋಹನ್ ಪಾಟೀಲ್ , ಅಶುತೋಷ್ ಪಾಟೀಲ್.
ಈ ಇಬ್ಬರಿಗೆ ತಲಾ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ತಲಾ ₹6 ಲಕ್ಷ ದಂಡ ವಿಧಿಸಿ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಆದೇಶ ಹೊರಡಿಸಿದ್ದಾರೆ.
ಇದಲ್ಲದೆ, ಪ್ರಕರಣದ ಸಂತ್ರಸ್ತೆಗೆ ₹10 ಲಕ್ಷ ಪರಿಹಾರ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.
ಇದನ್ನು ಓದಿ : ತನ್ನ ಸಚಿವರ ವಿರುದ್ಧವೇ CM ಅಸಮಾಧಾನ, ಖಡಕ್ ವಾರ್ನಿಂಗ್..!
2025 ಮೇ 10ರ ಭೀಕರ ಘಟನೆ
2025ರ ಮೇ 10ರಂದು ಬೆಳಗಾವಿಯ ಸಾವಗಾಂವ್ ಫಾರ್ಮ್ಹೌಸ್ನಲ್ಲಿ ಈ ಗ್ಯಾಂಗ್ ರೇಪ್ ಘಟನೆ ನಡೆದಿತ್ತು. ಅಪ್ರಾಪ್ತೆ ಎಂಬುದು ಗೊತ್ತಿದ್ದರೂ ಆರೋಪಿಗಳು ಬಿಯರ್ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೇ, ಅಪ್ರಾಪ್ತೆಯ ಚಿನ್ನದ ಸರವನ್ನು ಕೂಡ ಕಳವು ಮಾಡಿದ್ದರು.
ಪೊಲೀಸ್ ದೂರು ಮತ್ತು ತನಿಖೆ
ಈ ಸಂಬಂಧ ಸಂತ್ರಸ್ತೆಯ ಪೋಷಕರು ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣವನ್ನು ಮಾರ್ಕೆಟ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ವ್ಯಾಪಕ ತನಿಖೆ ನಡೆಸಿದ ಪೊಲೀಸರು ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಸರ್ಕಾರದ ಪರ ವಕಾಲತ್ತು
ಸರ್ಕಾರದ ಪರ ವಿಶೇಷ ಅಭಿಯೋಜಕ ಎಲ್.ವಿ. ಪಾಟೀಲ ಅವರು ಪರಿಣಾಮಕಾರಿ ವಕಾಲತ್ತು ನಡೆಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನು ನೋಡಿ : ಕುಮಾರಣ್ಣ, ರೇವಣ್ಣ ಜೊತೆ ನಾನಿದ್ದೇನೆ- ಕಾಂಗ್ರೆಸ್ ನಾಯಕರ ವಿರುದ್ಧ ಹೆಚ್ಡಿಕೆ ಕೆಂಡಾಮಂಡಲ




