Kunigal : ರೈಲ್ವೆ ಸ್ಟೇಷನ್ ಜಪ್ತಿ – ಪೀಠೋಪಕರಣವನ್ನ ಕೊಂಡೊಯ್ದ ಸಂತ್ರಸ್ತರು..!

ರೈಲ್ವೆ ಕಾಮಗಾರಿಗೆಂದು ರೈತರು ಭೂಮಿ ಕೊಟ್ಟಿ ಸುಮಾರು ವರ್ಷಗಳೇ ಆಗಿದ್ರು ಕೂಡ ಈವರೆಗೂ ರೈತರಗೆ ಪರಿಹಾರ ಸಿಗದೇ ಇದ್ದು, ರೈಲ್ವೆ ಸ್ಟೇಷನ್ನನ್ನೇ ಜಪ್ತಿ ಮಾಡಿರೋ ಅಪರೂಪದ ಪ್ರಸಂಗ ಬೆಳಕಿಗೆ ಬಂದಿದೆ.
ಸ್ಟೇಷನ್ ಮಾಸ್ಟರ್ ಕಚೇರಿಯನ್ನೇ ಜಪ್ತಿ
ಹೌದು, ರೈಲ್ವೆ ಕಾಮಗಾರಿಯಿಂದ ಭೂಮಿ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಪರಿಹಾರ ಕೊಡದ ಹಿನ್ನೆಲೆ ಕುಣಿಗಲ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಕಚೇರಿಯನ್ನೇ ಜಪ್ತಿ ಮಾಡಲಾಗಿದೆ.
ಸಂತ್ರಸ್ತ ರೈತರು ರೊಚ್ಚಿಗೆದ್ದಿದ್ದಾರೆ.
ಕುಣಿಗಲ್ ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ರೆ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಲೋಕಸಭಾ ಸೇರಲಿದೆ. ತುಮಕೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರೋ ವಿ.ಸೋಮಣ್ಣ ರೈಲ್ವೆ ಸಚಿವರಾಗಿ ಆಯ್ಕೆಯಾದ್ರು. ಸೋಮಣ್ಣ ಅವರು ರೈಲ್ವೆ ಸಚಿವರಾದ ಬಳಿಕ ತುಮಕೂರಿನಲ್ಲಿ ಸಾಕಷ್ಟು ರೈಲ್ವೆ ಕಾಮಗಾರಿ ನಡೆದಿದ್ದು, ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಆದ್ರೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ರೈಲ್ವೆ ಕಾಮಗಾರಿಯಿಂದ ಸಂತ್ರಸ್ತ ರೈತರಿಗೆ ಕೇಂದ್ರದಿಂದ ಪರಿಹಾರ ಕೊಡಲು ಮೀನಾಮೇಷ ಎಣಿಸಿದ್ದು, ಸಂತ್ರಸ್ತ ರೈತರು ರೊಚ್ಚಿಗೆದ್ದಿದ್ದಾರೆ.

ಸಂತ್ರಸ್ತರಿಗೆ 20 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ
ನೈರುತ್ಯ ರೈಲ್ವೆ ಇಲಾಖೆ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಗಾಗಿ ಕುಣಿಗಲ್ ತಾಲೂಕಿನ ಮಲ್ಲಾಘಟ್ಟದ ಮೂಡಲಗಿರಿ ಹಾಗೂ ಲಕ್ಕಯ್ಯ ಎಂಬವವರ ನಿವೇಶನ ಹಾಗೂ ಮನೆ ಸ್ವಾಧೀನ ಮಾಡಿಕೊಂಡಿತ್ತು. 2020ರಲ್ಲಿ ಇಬ್ಬರೂ ಸಂತ್ರಸ್ತರಿಗೆ 20 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಮಾಡಿತ್ತು. ನ್ಯಾಯಾಲಯ ಆದೇಶ ಮಾಡಿದ್ರು ಕೂಡ ರೈಲ್ವೆ ಇಲಾಖೆ ಸಂತ್ರಸ್ತರಿಗೆ ಪರಿಹಾರ ನೀಡದೇ ನಿರ್ಲಕ್ಷ್ಯ ತೋರಿದ್ದು, ಸಂತ್ರಸ್ತ ರೈತರನ್ನು ಕೆರಳಿಸುವಂತೆ ಮಾಡಿತ್ತು.
ರೈತರು ಕೋರ್ಟ್ ಮೊರೆ
ಇನ್ನು ಈ ಸಂಬಂಧ ಸಂತ್ರಸ್ತ ರೈತರು ಕೋರ್ಟ್ ಮೊರೆ ಹೋಗಿದ್ರು. Kunigal ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರ ಆದೇಶದ ಮೇರೆಗೆ ನ್ಯಾಯಾಲಯದ ಸಿಬ್ಬಂದಿ ಕುಣಿಗಲ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಆಫೀಸ್ನನ್ನೇ ಜಪ್ತಿ ಮಾಡಿದ್ರೆ, ಆಫೀಸ್ನಲ್ಲಿದ್ದ ಪೀಠೋಪಕರಣವನ್ನು ಸಂತ್ರಸ್ತರು ಕೊಂಡೊಯ್ದಿರೋ ಪ್ರಸಂಗ ನಡೆದಿದೆ.
ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ಮೀನಾ ಮೇಷ
ವಿ.ಸೋಮಣ್ಣ ಅವರು ರೈಲ್ವೆ ಸಚಿವರಾದ ಬಳಿಕ ಕ್ಷೇತ್ರದಲ್ಲಿ ಸಾಕಷ್ಟು ರೈಲ್ವೆ ಅಭಿವೃದ್ಧಿ ಕಾಮಗಾರಿ ಏನೋ ಆಗ್ತಾ ಇದೆ. ಆದ್ರೆ ರೈಲ್ವೆ ಕಾಮಗಾರಿಯಿಂದ ಸಂತ್ರಸ್ತ ರೈತರಿಗೆ ಸಿಗಬೇಕಾದ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದು, ಈ ಬಗ್ಗೆ ಕೇಂದ್ರ ಸಚಿವರಾದ ಸೋಮಣ್ಣ ಅವರು ಎಚ್ಚೆತ್ತುಕೊಂಡು ಸಂತ್ರಸ್ತರಿಗೆ ಪರಿಹಾರ ಒದಗಿಸಿಕೊಡುವಂತಹ ಕೆಲಸ ಆಗಬೇಕಿದೆ.





