
ಪ್ರಸಿದ್ಧ ಇ-ಕಾಮರ್ಸ್ ತಾಣಗಳು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2025 ಶುರುವಾಗಿದೆ. ಸೆಪ್ಟೆಂಬರ್ 23 ರಿಂದ ಸಾಮಾನ್ಯ ಬಳಕೆದಾರರು ಈ ಸೆಲ್ನಲ್ಲಿ ಸ್ಮಾರ್ಟ್ಫೋನ್, ಟಿವಿ, ಎಸಿ, ರೆಫ್ರಿಜರೇಟರ್, ಗೃಹೋಪಯೋಗಿ ವಸ್ತುಗಳು ಮತ್ತು ಇನ್ನಷ್ಟು ಖರೀದಿಸಬಹು.

ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಸ್, ಟಿವಿಗಳು, ಎಸಿಗಳು, ರೆಫ್ರಿಜರೇಟರ್, ಗೃಹೋಪಯೋಗಿ ವಸ್ತುಗಳು ಮತ್ತು ಇನ್ನಷ್ಟು ಉತ್ಪನ್ನಗಳನ್ನು ಭರ್ಜರಿ ರಿಯಾಯಿತಿಗಳೊಂದಿಗೆ ಖರೀದಿಸಬಹುದು. ವಿಶೇಷವಾಗಿ ಸ್ಮಾರ್ಟ್ಫೋನ್ಸ್ನಲ್ಲಿ ಆಕರ್ಷಕ ಡಿಸ್ಕೌಂಟ್ಗಳು ಲಭ್ಯವಿವೆ. ಐಫೋನ್ 15 ಮೂಲ ಬೆಲೆ ₹79,900 ಇದ್ದರೂ, ಈಗ ₹46,999 ರಿಂದ ಖರೀದಿಸಬಹುದು ಮತ್ತು ₹2,349 ವರೆಗೆ ಕ್ಯಾಶ್ಬ್ಯಾಕ್ ದೊರೆಯುತ್ತದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S24 Ultra ₹1,29,999 ಮೂಲ ಬೆಲೆಯಲ್ಲಿದ್ದರೂ, ₹71,999 ದಲ್ಲಿ ಲಭ್ಯ ಮತ್ತು ₹3,599 ವರೆಗೆ ಕ್ಯಾಶ್ಬ್ಯಾಕ್ ಸಿಗುತ್ತದೆ. ಒನ್ಪ್ಲಸ್ 13R ₹44,999 ಮೂಲ ಬೆಲೆ ಹೊಂದಿದ್ದು, ಈಗ ₹37,999 ದಲ್ಲಿ ಖರೀದಿಸಬಹುದು ಮತ್ತು ₹2,250 ವರೆಗೆ ಕ್ಯಾಶ್ಬ್ಯಾಕ್ ಲಭ್ಯವಿದೆ. ಐಫೋನ್ 16 ಮೂಲ ಬೆಲೆ ₹69,900 ಇದ್ದರೂ, ಸೇಲ್ನಲ್ಲಿ ₹51,999 ದಲ್ಲಿ ಲಭ್ಯವಾಗಿದೆ. ಫ್ಲಿಪ್ಕಾರ್ಟ್ನಲ್ಲಿ ಗೂಗಲ್ ಪಿಕ್ಸೆಲ್ 9 ಪ್ರೊ ಫೋಲ್ಡ್ ₹172,999 ಮೂಲ ಬೆಲೆಗೂ ಹೋಲಿಕೆ ಮಾಡಿದರೆ ₹53,000 ಕಡಿಮೆ ಬೆಲೆಗೆ ಲಭ್ಯವಾಗಿದೆ. ಈ ಹಬ್ಬದ ಸಮಯದಲ್ಲಿ ಬಳಕೆದಾರರು ಅಮೆಜಾನ್, ಫ್ಲಿಪ್ಕಾರ್ಟ್, ಕ್ರೋಮಾ, ರಿಲಯನ್ಸ್ ಡಿಜಿಟಲ್ ಸೇರಿದಂತೆ ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಬೆಲೆ ಮತ್ತು ಕೊಡುಗೆಗಳನ್ನು ಹೋಲಿಸಿ ಖರೀದಿಸುವುದು ಸೂಕ್ತ. ಈ ಸೇಲ್, ವರ್ಷದಲ್ಲಿ ಸ್ಮಾರ್ಟ್ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ಖರೀದಿಸಲು ಅತ್ಯುತ್ತಮ ಸಮಯವಾಗಿದೆ.




