Gold & Silver Rate : ಫೆಬ್ರವರಿ 24ರಂದು ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದ್ದು, ಬೆಳ್ಳಿ ದರ ಇಳಿಕೆಯಾಗಿದೆ. ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್, 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದ ಬುಲ್ಲಿಯನ್ ಮಾರುಕಟ್ಟೆಯಲ್ಲಿ ಇಂದು (ಫೆಬ್ರವರಿ 24, ಮಂಗಳವಾರ) ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಕಳೆದ ಎರಡು ದಿನಗಳಿಂದಲೇ ಏರಿಕೆಯಾಗುತ್ತಿದ್ದ ಚಿನ್ನದ ದರ ಇಂದು ಮತ್ತಷ್ಟು 40 ರೂಪಾಯಿ ಹೆಚ್ಚಾಗಿದೆ. ಇನ್ನೊಂದೆಡೆ, ನಿರಂತರ ಏರಿಕೆಯಲ್ಲಿ ಇದ್ದ ಬೆಳ್ಳಿ ಬೆಲೆ ಇದೀಗ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಮಿಶ್ರ ಪ್ರವೃತ್ತಿ ಕಂಡುಬರುತ್ತಿದೆ.
ಇಂದಿನ ಚಿನ್ನದ ಬೆಲೆ (ಫೆಬ್ರವರಿ 24)
ಇಂದು 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ 14,790 ರೂಪಾಯಿಯಿಂದ 14,830 ರೂಪಾಯಿಗೆ ಏರಿಕೆಯಾಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಗ್ರಾಮ್ಗೆ 16,178 ರೂಪಾಯಿಯಾಗಿ ದಾಖಲಾಗಿದೆ.
ಪ್ರಸ್ತುತ ಭಾರತದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,48,300 ರೂಪಾಯಿ ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ 1,61,780 ರೂಪಾಯಿ ಮಟ್ಟದಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ (1 ಗ್ರಾಂಗೆ)
- 24 ಕ್ಯಾರಟ್ ಚಿನ್ನ – 16,178 ರೂ
- 22 ಕ್ಯಾರಟ್ ಚಿನ್ನ – 14,830 ರೂ
- 18 ಕ್ಯಾರಟ್ ಚಿನ್ನ – 12,134 ರೂ
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
ಬೆಂಗಳೂರು ಮಾರುಕಟ್ಟೆಯಲ್ಲೂ ಇದೇ ದರ ಮುಂದುವರಿದಿದೆ. ಹೂಡಿಕೆದಾರರು ಹಾಗೂ ಖರೀದಿದಾರರು ಬೆಲೆ ಚಲನವಲನವನ್ನು ಗಮನಿಸುತ್ತಿದ್ದಾರೆ.
- 24 ಕ್ಯಾರಟ್ ಚಿನ್ನ (1 ಗ್ರಾಂ) – 16,178 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ) – 14,830 ರೂ
- ಬೆಳ್ಳಿ (1 ಗ್ರಾಂ) – 285 ರೂ
100 ಗ್ರಾಂ ಬೆಳ್ಳಿ ಬೆಲೆ 28,500 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ ಇಳಿಕೆ – ಖರೀದಿಗೆ ಅವಕಾಶ?
ನಿನ್ನೆ ಬರೋಬ್ಬರಿ 25 ರೂಪಾಯಿ ಏರಿಕೆ ಕಂಡಿದ್ದ ಬೆಳ್ಳಿ ಬೆಲೆ ಇಂದು 10 ರಿಂದ 15 ರೂಪಾಯಿವರೆಗೆ ಇಳಿಕೆಯಾಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಗ್ರಾಮ್ಗೆ 285 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಚೆನ್ನೈ ಮತ್ತು ಕೇರಳದಲ್ಲಿ ಗ್ರಾಮ್ಗೆ 290 ರೂಪಾಯಿ ಇದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ)
- ಬೆಂಗಳೂರು – 14,830 ರೂ
- ಚೆನ್ನೈ – 14,890 ರೂ
- ಮುಂಬೈ – 14,830 ರೂ
- ದೆಹಲಿ – 14,845 ರೂ
- ಕೋಲ್ಕತಾ – 14,830 ರೂ
- ಕೇರಳ – 14,830 ರೂ
- ಅಹ್ಮದಾಬಾದ್ – 14,835 ರೂ
- ಜೈಪುರ್ – 14,845 ರೂ
- ಲಕ್ನೋ – 14,845 ರೂ
- ಭುವನೇಶ್ವರ್ – 14,830 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ)
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಸ್ಥಿರತೆ ಕಾಣುತ್ತಿದೆ.
- ಮಲೇಷ್ಯಾ – 617 ರಿಂಗಿಟ್ (14,345 ರೂ)
- ದುಬೈ – 580.25 ಡಿರಾಮ್ (14,370 ರೂ)
- ಅಮೆರಿಕ – 161.50 ಡಾಲರ್ (14,689 ರೂ)
- ಸಿಂಗಾಪುರ – 204.30 SGD (14,661 ರೂ)
- ಕತಾರ್ – 574 ರಿಯಾಲ್ (14,323 ರೂ)
- ಸೌದಿ ಅರೇಬಿಯಾ – 589 ರಿಯಾಲ್ (14,289 ರೂ)
- ಓಮನ್ – 61.50 ರಿಯಾಲ್ (14,528 ರೂ)
- ಕುವೇತ್ – 47.41 ದಿನಾರ್ (14,123 ರೂ)
ವಿಭಿನ್ನ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂಗೆ)
- ಬೆಂಗಳೂರು – 285 ರೂ
- ಚೆನ್ನೈ – 290 ರೂ
- ಮುಂಬೈ – 285 ರೂ
- ದೆಹಲಿ – 285 ರೂ
- ಕೋಲ್ಕತಾ – 285 ರೂ
- ಕೇರಳ – 290 ರೂ
- ಅಹ್ಮದಾಬಾದ್ – 285 ರೂ
- ಜೈಪುರ್ – 285 ರೂ
- ಲಕ್ನೋ – 285 ರೂ
- ಭುವನೇಶ್ವರ್ – 290 ರೂ
- ಪುಣೆ – 285 ರೂ
ಒಟ್ಟಾರೆ ಮಾರುಕಟ್ಟೆ ಸ್ಥಿತಿ
ಒಟ್ಟಾರೆ ನೋಡಿದರೆ ಚಿನ್ನದ ಬೆಲೆ ಸತತ ಏರಿಕೆಯಲ್ಲಿ ಮುಂದುವರಿದಿದ್ದು, ಹೂಡಿಕೆದಾರರ ಗಮನ ಸೆಳೆಯುತ್ತಿದೆ. ಅದೇ ವೇಳೆ ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿರುವುದು ಖರೀದಿದಾರರಿಗೆ ಅವಕಾಶ ನೀಡುವ ಸೂಚನೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯ ಚಲನವಲನದ ಮೇಲೆ ದರಗಳು ಅವಲಂಬಿತವಾಗಿರಲಿವೆ.




