ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ನಿಟ್ಟಿನಲ್ಲಿ Sira ನಗರಸಭೆ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.

ಶಿರಾ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನ ನಿಯಂತ್ರಿಸುವ ನಿಟ್ಟಿನಲ್ಲಿ Sira ನಗರಸಭೆಅಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಒಂದು ಟನ್ಗೂ ಅಧಿಕ ಪ್ರಮಾಣದ ಪ್ಲಾಸ್ಟಿಕ್ ಕವರ್, ಗ್ಲಾಸ್ ಹಾಗೂ ಇತರೆ ನಿಷೇಧಿತ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ : ತಂದೆಯನ್ನೇ ಗುಂಡಿಟ್ಟು ಕೊಂಡ ಮಗ – ದೇಹ ಪೀಸ್ ಪೀಸ್ ಮಾಡಿ ಡ್ರಂನಲ್ಲಿ ಬಚ್ಚಿಟ್ಟ!

ನಿಷೇಧಿತ ಪ್ಲಾಸ್ಟಿಕ್ ಜಪ್ತಿ
ಪ್ಲಾಸ್ಟಿಕ್ ಬಳಕೆಯನ್ನ ತಡೆಯಲು ಮೊದಲ ಹಂತವಾಗಿ ವಸ್ತುಗಳನ್ನಜಪ್ತಿ ಮಾಡುವ ದಂಡ ವಿಧಿಸುವ ಕ್ರಮಕ್ಕೂ ಅಧಿಕಾರಿಗಳು ಮುಂದಾಗಿದ್ದಾರೆ. ಕಾರ್ಯಾಚರಣೆ ವೇಳೆ ಕೆಲವು ವರ್ತಕರು ವಿರೋಧ ವ್ಯಕ್ತಪಡಿಸಿ, ಮೊದಲು ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಪ್ಲಾಸ್ಟಿಕ್ ಮಾರುಕಟ್ಟೆಗೆ ಬರುವುದನ್ನೇ ನಿಲ್ಲಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಠಿಣ ಕಾನೂನು ಕ್ರಮ
ಆದರೆ ಯಾವುದಕ್ಕೂ ಜಗ್ಗದ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮುಂದುವರೆದ್ರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನು ನೋಡಿ : ಲೈಬ್ರರಿಯಲ್ಲಿ ಇದೆಂಥಾ ಕರ್ಮಕಾಂಡ, ಗ್ರಂಥಾಲಯದಲ್ಲೇ ಕೂಲಿ ಕಾರ್ಮಿಕರ ವಾಸ




