
ನಿಮ್ಮ ಪ್ರಜಾಶಕ್ತಿ ಜನಪರ ಕೆಲಸ ಮಾಡುವ ಮೂಲಕ ಜನಮನ್ನಣೆ ಗಳಿಸಿದೆ. ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸುದ್ದಿ ಬಿತ್ತರಿಸಿ, ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಇದೇ ಕಾರಣಕ್ಕೆ ಪ್ರಜಾಶಕ್ತಿ ಟಿವಿ ಇಂದು ತುಮಕೂರು ಜಿಲ್ಲೆಯ ಜನರ ಏಕೈಕ ಆಯ್ಕೆಯಾಗಿ ಹೊರಹೊಮ್ಮಿದೆ. ಇತ್ತ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯಲ್ಲಿನ ದೊಡ್ಡಬಿದರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಸ ಲಂಬಾಣಿ ತಾಂಡ್ಯಾದಲ್ಲಿ ರಸ್ತೆ ನಿರ್ಮಾಣಕ್ಕೆ ಇದ್ದ ರಸ್ತಯನ್ನು ಹಗೆದು, ಹಾಗೇಯೇ ಬಿಟ್ಟು ಎರಡು ತಿಂಗಳು ಕಳೆದಿತ್ತು. ಆದ್ರೆ ಅಧಿಕಾರಿಗಳು ಯಾರೊಬ್ಬರು ಇತ್ತ ತಲೆ ಹಾಕುತ್ತಿರಲಿಲ್ಲ. ಹೀಗಾಗಿ ಮಳೆ ಬಂತು ಎಂದರೆ ಇಡೀ ಗ್ರಾಮವೇ ಕೆಸರುಗದ್ದೆಯಾಗುತ್ತಿತ್ತು. ಈ ಕುರಿತು ನಿಮ್ಮ ಪ್ರಜಾಶಕ್ತಿ ಟಿವಿ ವರದಿಯನ್ನು ಬಿತ್ತರಿಸಿತ್ತು. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ರಸ್ತೆ ಕಾಮಗಾರಿಗೆ ಮುಂದಾಗಿದ್ದಾರೆ. ಇದು ನಿಮ್ಮ ಪ್ರಜಾಶಕ್ತಿ ಟಿವಿಯ ಬಿಗ್ ಇಂಪ್ಯಾಕ್ಟ್

ಚಿ.ನಾ.ಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ದೊಡ್ಡಬಿದರೆ ಪಂಚಾಯತಿ ವ್ಯಾಪ್ತಿಯ ಹೊಸ ಲಂಬಾಣಿ ತಾಂಡ್ಯಾದಲ್ಲಿ ರಸ್ತೆ ಸಂಕಷ್ಟ ಎದುರಾಗಿದೆ. ಕಾಂಕ್ರೀಟ್ ರಸ್ತೆ ಮಾಡಲಾಗುತ್ತದೆ ಎಂದು ಎರಡು ತಿಂಗಳ ಹಿಂದೆ ರಸ್ತೆ ಅಗೆದಿದ್ದರೂ, ನಂತರದಿಂದ ಯಾವುದೇ ಕಾಮಗಾರಿ ನಡೆಯದೆ ರಸ್ತೆಯನ್ನು ಹಾಗೇಯೇ ಬಿಡಲಾಗಿದೆ. ಇತ್ತ ಮಳೆ ಬಂದರೆ ರಸ್ತೆಗಳೆಲ್ಲ ಕೆಸರುಗದ್ದೆಯಾಗಿ ಗ್ರಾಮಸ್ಥರು ಓಡಾಡಲು ಪರದಾಡುವಂತಾಗಿದೆ. ಶಾಸಕ ಸುರೇಶ್ ಬಾಬು ಅವರು ಗುದ್ದಲಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದರೂ, ಅದರ ನಂತರ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಗಮನಹರಿಸಲಿಲ್ಲ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ಈ ಗ್ರಾಮದಲ್ಲಿ ಹಿರಿಯರು, ಮಕ್ಕಳು, ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುತ್ತಿದ್ದರು. ಈ ಕುರಿತು ನಿಮ್ಮ ಪ್ರಜಾಶಕ್ತಿ ವರದಿಯನ್ನು ಬಿತ್ತರಿಸಿತ್ತು. ಇದೀಗ ಎಚ್ಚೆತ್ತ ಅಧಿಕಾರಿಗಳು ರಸ್ತೆ ಮಾಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಇನ್ನು ಗ್ರಾಮಸ್ಥರು ಮಾತನಾಡಿ, ನಿಮ್ಮ ಪ್ರಜಾಶಕ್ತಿ ಟಿವಿಯ ವರದಿಯಿಂದಾಗಿ ನಮ್ಮ ಊರಿಗೆ ರಸ್ತೆ ಬಂದಿದೆ. ಕಳೆದ ಎರಡು ತಿಂಗಳಿಂದ ನಾವು ರಸ್ತೆ ಇಲ್ಲದೆ ಪರದಾಡುತ್ತಿದ್ದೇವು. ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದ್ರು ಅವರು ಕ್ಯಾರೆ ಎನ್ನುತ್ತಿರಲಿಲ್ಲ. ಹೀಗಾಗಿ ನಾವು ಕೊಚ್ಚೆಯಲ್ಲಿ ಜೀವನ ನಡೆಸುವಂತಾಗಿತ್ತು. ನಿಮ್ಮ ಪ್ರಜಾಶಕ್ತಿ ಟಿವಿಯು ವರದಿ ಮಾಡಿದ ಬೆನ್ನಲ್ಲೆ ಅಧಿಕಾರಿಗಳು ಮುಂದೆ ಬಂದು ರಸ್ತೆ ಕಾಮಗಾರಿ ಮಾಡಿಸುತ್ತಿದ್ದಾರೆ. ನಿಮ್ಮ ಟಿವಿಯಿಂದ ನಮಗೆ ಒಳ್ಳೆಯದಾಯಿತು. ನಿಮ್ಮ ಜನಪರ ಕೆಲಸ ಹೀಗೆ ಮುಂದುವರೆಯಲಿ ಎಂದು ಶುಭಕೋರಿದ್ರು.




