
HUBLI SUICIDE : ವೈಯಕ್ತಿಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಟೆಶನರಿ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಹುಬ್ಬಳ್ಳಿಯ ಮರಾಠಾ ಗಲ್ಲಿಯಲ್ಲಿ ನಡೆದಿದೆ. ರಾಕೇಶ ವಾಗುಲೇ ಎಂಬಾತ ತನ್ನ ಟೆಶನರಿ ಅಂಗಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡ ವ್ಯಕ್ತಿ.
ಪ್ರತಿದಿನದಂತೆ ಇತ್ತೀಚೆಗೆ ಸಹ ಬೆಳಗ್ಗೆ ಅಂಗಡಿಗೆ ಬಂದಿದ್ದ ರಾಕೇಶ್, ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಅಂಗಡಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ . ಇನ್ನು ಘಟನಾ ಸ್ಥಳಕ್ಕೆ ಶಹರ ಪೊಲೀಸ್ ಠಾಣೆಯ ಅಧಿಕಾರಿ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.




