
KL RAHUL : ಭಾರತೀಯ ಕ್ರಿಕೆಟಿಗ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಅವರು ಇದೀಗ ಪ್ರೈಮ್ ವಾಲಿಬಾಲ್ ಲೀಗ್ (ಪಿಐಎಲ್)ನ ಗೋವಾ ಗಾರ್ಡಿಯನ್ಸ್ತಂಡದ ಸಹ ಮಾಲೀಕರಾಗಿದ್ದಾರೆ. ಈ ಮೂಲಕ ಅವರು ಕೇವಲ ಕ್ರಿಕೆಟ್ ತಾರೆಯಾಗಿ ಮಾತ್ರವಲ್ಲ, ವಾಲಿಬಾಲ್ ಪ್ರೇಮಿಯನ್ನೂ ಆಗಿದ್ದಾರೆ.
ಇನ್ನು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ರಾಹುಲ್ “ವಾಲಿಬಾಲ್ ಯಾವಾಗಲೂ ನಾನು ಆನಂದಿಸುವ ಕ್ರೀಡೆಯಾಗಿದ್ದು, ಇಲ್ಲಿ ನನ್ನ ಪಾತ್ರವನ್ನು ನಿರ್ವಹಿಸಲು ಉತ್ಸುಕ ನಾಗಿದ್ದೇನೆ. ಗೋವಾ ಗಾರ್ಡಿಯನ್ಸ್ ತಂಡದ ಭಾಗವಾಗಿರುವುದು ನನಗೆ ಹೆಮ್ಮೆ ನೀಡುತ್ತದೆ,” ಎಂದು ಹೇಳಿದ್ದಾರೆ.
ಗೋವಾ ಗಾರ್ಡಿಯನ್ಸ್ ತಂಡದ 10% ಸ್ಟೇಕ್ಸ್ ಅನ್ನು ಕನ್ನಡಿಗ ಕೆ ಎಲ್ ರಾಹುಲ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಈ ತಂಡದ ಬ್ರ್ಯಾಂಡ್ ವ್ಯಾಲ್ಯೂ 50ರಿಂದ 70 ಕೋಟಿ ರುಪಾಯಿಗಳು ಎಂದು ವರದಿ ಯಾಗಿದೆ.





