Tumakuru : ಇಂದು ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ 7ನೇ ವರ್ಷದ ಪುಣ್ಯಸ್ಮರಣೆ

Tumakuru : ಇಂದು ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ದಿನವಾಗಿದ್ದು, ಇಡೀ ಕರುನಾಡು ಅನ್ನದಾಸೋಹ ದಿನವನ್ನಾಗಿ ಆಚರಿಸುತ್ತದೆ. ಹೌದು.. ತ್ರಿವಿಧ ದಾಸೋಹಿಗಳು ಎಂದೇ ಖ್ಯಾತಿ ಪಡೆದಿರೋ ಶ್ರೀ ಶ್ರೀ ಶಿವಕುಮಾರಸ್ವಾಮಿಗಳ ಪುಣ್ಯ ಸ್ಮರಣೆ ಇಂದು ಅದ್ದೂರಿಯಾಗಿ ನಡೆಯುತ್ತಿದೆ.

ಶ್ರೀಗಳ ಗದ್ದುಗೆಗೆ ವಿಶೇಷ ಅಲಂಕಾರ
ಶ್ರೀಗಳ ಪುಣ್ಯಸಂಸ್ಮರಣೋತ್ಸವದ ಪ್ರಯುಕ್ತ ಪೂಜ್ಯರ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ವಿವಿಧ ಬಣ್ಣದ ಹೂಗಳಿಂದ ಸಿಂಗರಿಸಲಾದ ಗದ್ದುಗೆ ಕಂಗೊಳಿಸಿತು. ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಬೆಳಿಗ್ಗೆ 5 ಗಂಟೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಅರ್ಚನೆಗಳು ನೆರವೇರಿದವು. ವೇದಮಂತ್ರೋಚ್ಚಾರಣೆಯ ನಡುವೆ ನಡೆದ ಪೂಜಾಕಾರ್ಯಕ್ರಮದಲ್ಲಿ ಭಕ್ತರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.

ಮಠಕ್ಕೆ ಹರಿದು ಬರ್ತಿದೆ ಭಕ್ತರ ದಂಡು – Tumakuru
ಇನ್ನು ಸಿದ್ದಗಂಗಾ ಮಠದ ಆವರಣದಲ್ಲಿ ಶ್ರೀಗಳ ಬೆಳ್ಳಿ ಪುತ್ಥಳಿಯ ಭವ್ಯ ಮೆರವಣಿಗೆ ನಡೆಯಿತು. ಈ ಪುಣ್ಯ ಸಮಾರಂಭಕ್ಕೆ ಮಠದ ಭಕ್ತವೃಂದ, ಅಭಿಮಾನಿಗಳು, ಹಳೇ ವಿದ್ಯಾಥಿಗಳು ಮತ್ತು ಹಿತೈಷಿಗಳು ಸೇರಿ ಹೆಚ್ಚು ಜನರು ಆಗಮಿಸಿದ್ದಾರೆ.
ಇದನ್ನು ಓದಿ : Greater Bengaluru ಚುನಾವಣೆಗೆ ಆಯೋಗ ರೆಡಿ – EVMಗೆ ಕೊಕ್!

ಮಠಕ್ಕೆ ಉಪರಾಷ್ಟ್ರಪತಿಗಳ ಆಗಮನ
ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ವಿವಿ ಆವರಣದ ಹೆಲಿಪ್ಯಾಡ್ ಮೂಲಕ ಆಗಮಿಸಿದ್ದು, ಗದ್ದುಗೆ ಪೂಜೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸದ್ಗುರು ಮಧುಸೂದನ್ ಸಾಯಿ, ಕೇಂದ್ರ ಸಚಿವ ವಿ. ಸೋಮಣ್ಣ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಂಸದ ಡಾ. ಮಂಜುನಾಥ್, ಗೋವಿಂದ ಕಾರಜೋಳ ಸೇರಿದಂತೆ ಹಲವಾರು ಶಾಸಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಇದನ್ನು ನೋಡಿ : TUMAKUR | ಗೌರಿಶಂಕರ್ ಕೈ ಸೇರಿದ ಬಳಿಕ ಕ್ಷೇತ್ರಕ್ಕೆ ದಳಪತಿ ಎಂಟ್ರಿ




