Greather Bengaluru ಚುನಾವಣೆಗೆ ಆಯೋಗ ರೆಡಿ; ಕರಡು ಮತದಾರರ ಪಟ್ಟಿ ಪ್ರಕಟ, EVMಗೆ ಕೊಕ್!

ಕಳೆದ 10 ವರ್ಷಗಳಿಂದ ಬಿಬಿಎಂಪಿ ಎಲೆಕ್ಷನ್ ನಡಿದೇ ಇರಲಿಲ್ಲ. 198 ವಾರ್ಡ್ಗಳನ್ನು ಹೊಂದಿರೋ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ 2015ರ ಆಗಸ್ಟ್ನಲ್ಲಿ ನಡೆದಿದ್ದು, ಇದರ ಅವಧಿ 2020ರಲ್ಲಿ ಕೊನೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಬಿಬಿಎಂಪಿಗೆ ಚುನಾವಣೆಯೇ ನಡೆದಿರಲಿಲ್ಲ.
ಸಕಲ ಸಿದ್ಧತೆ
ಅಲ್ದೇ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೂ ಪದೇ ಪದೇ ಚುನಾವಣೆಯನ್ನ ಮುಂದೂಡಲಾಗಿತ್ತು. ಐದು ನಗರ ಪಾಲಿಕೆಗಳನ್ನು ಹೊಂದಿರೋ ಬೆಂಗಳೂರು ಮಹಾನಗರ ಪಾಲಿಕೆಯನ್ನ ಕಳೆದ ಸೆಫ್ಟೆಂಬರ್ ನಲ್ಲಿ ಗ್ರೇಟರ್ ಬೆಂಗಳೂರನ್ನು ಕೂಡ ಮಾಡಲಾಗಿತ್ತು. ಅಲ್ದೇ ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಎಲೆಕ್ಷನ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಲಾಗಿತ್ತು. ಆದ್ರಂತೆ ಗ್ರೇಟರ್ ಬೆಂಗಳೂರು ಎಲೆಕ್ಷನ್ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ
ಮೇ 25ರ ನಂತರ ಗ್ರೇಟರ್ ಬೆಂಗಳೂರು ಎಲೆಕ್ಷನ್ ನಡೆಯೋ ಸಾಧ್ಯತೆ ಹೆಚ್ಚಾಗಿದ್ದು, ಐದು ನಗರ ಪಾಲಿಕೆಗಳ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಇನ್ನು ಗ್ರೇಟರ್ ಬೆಂಗಳೂರು ಎಲೆಕ್ಷನ್ಗೆ ಕರ್ನಾಟಕ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ನಿರ್ಧರಿಸಿದೆ.
ಇದನ್ನು ಓದಿ : ರೌಡಿಶೀಟರ್ Shabeer ಕೊಲೆ ಕೇಸ್ – 8 ಆರೋಪಿಗಳು ಅರೆಸ್ಟ್

ಮತದಾರರ ಪಟ್ಟಿ ರಿಲೀಸ್
ಅಲ್ದೇ ಐದು ನಗರ ಪಾಲಿಕೆ, 192 ಸಂಸ್ಥೆಗಳಿಗೆ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ರಿಲೀಸ್ ಮಾಡಿದ್ದು, ಬಹಳ ವರ್ಷಗಳ ನಂತರ ಮತ್ತೆ ಬ್ಯಾಲೇಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಮುಂದಾಗಿದೆ.
ಕಾಂಗ್ರೆಸ್ ಆಕ್ಷೇಪ
ದೇಶಾದ್ಯಂತ ಇವಿಎಂಗಳ ಬಳಕೆ ಬಗ್ಗೆ ಕಾಂಗ್ರೆಸ್ ಆಕ್ಷೇಪ ಎತ್ತಿತ್ತು. ಇವಿಎಂ ಬಳಕೆಗೆ ಕಾಂಗ್ರೆಸ್ ಸರ್ಕಾರಗಳ ತೀರ್ಮಾನ, ಕರ್ನಾಟಕದಿಂದಲೇ ಜಾರಿಯಾದಂತಿದೆ. ಕಳೆದ ಹಲವು ವರ್ಷಗಳಿಂದ ಬ್ಯಾಲೆಟ್ ಪೇಪರ್ ಬಿಟ್ಟು ಇವಿಎಂ ಮೂಲಕ ಚುನಾವಣೆ ನಡೆಸಲಾಗ್ತಿತ್ತು. ಆದ್ರೆ ಈ ಬಾರಿ ಗ್ರೇಟರ್ ಎಲೆಕ್ಷನ್ನನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.
ವಾರ್ಡ್ ವಿಂಗಡನೆ
ಈ ಹಿಂದೆ ವಾರ್ಡ್ ವಿಂಗಡನೆ ಮಾಡಿ, ಮೀಸಲಾತಿ ಘೋಷಣೆ ಮಾಡಲಾಗಿತ್ತು. ಇದೀಗ ಕರಡು ಮತದಾರರ ಪಟ್ಟಿಯನ್ನ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಅಲ್ಲದೇ ಪುರಸಭೆ, ನಗರಸಭೆ ಸೇರಿ 192 ಸ್ಥಳೀಯ ಸಂಸ್ಥೆಗಳಿಗೂ ಬ್ಯಾಲೆಟ್ ಪೇಪರ್ ಬಳಕೆ ನಿರ್ಧರಿಸಲಾಗಿದೆ. ಮುಂಬರುವ ಗ್ರೇಟರ್ ಬೆಂಗಳೂರು ಎಲೆಕ್ಷನ್ ಹೇಗೆ ನಡೆಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನು ನೋಡಿ : ಅಧಿಕಾರದ ಆಸೆಗೆ ರೈತರ ಹೊಟ್ಟೆ ಮೇಲೆ ಶ್ರೀನಿವಾಸ್ ತಣ್ಣೀರು ಬಟ್ಟೆ




