
ASIA CUP 2025 : 2025 ಏಷ್ಯಾಕಪ್ ಟಿ20 ಟೂರ್ನಿಗೆ ತೆರೆ ಎಳೆಯುತ್ತಿದ್ದಂತೆಯೇ, ಭಾರತ ಕ್ರಿಕೆಟ್ ತಂಡ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಇದೇ ವಾರ ಈ ಮಹತ್ವಪೂರ್ಣ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಈ ಬಾರಿ ಕರ್ನಾಟಕದ ಇಬ್ಬರು ಕ್ರಿಕೆಟಿಗರಿಗೆ ಅವಕಾಶ ಸಿಗುವ ಸಾಧ್ಯತೆ ಎನ್ನಲಾಗಿದೆ.
ಆದರೆ ಈ ವೇಳೆ ಒಂದು ಮಹತ್ವದ ಬದಲಾವಣೆ ಕೂಡ ನಡೆಯಲಿದ್ದು, ಅನುಭವ ಹೊಂದಿದ ಕನ್ನಡಿಗ ಕರುಣ್ ನಾಯರ್ ಅವರನ್ನು ತಂಡದಿಂದ ಕೈಬಿಡಲಾಗುತ್ತದೆ ಎನ್ನಲಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ, ಆಯ್ಕೆ ಸಮಿತಿಯು ಕರುಣ್ ಅವರ ಮುಂದಿನ ಅವಕಾಶ ವನ್ನು ಸ್ಥಗಿತಗೊಳಿ ಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.

ಕರುಣ್ ನಾಯರ್ ಬದಲಿಗೆ ಕರ್ನಾಟಕದ ಯುವ ಎಡಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಭಾರತ ಎ ತಂಡದ ಪರ ಆಸ್ಟ್ರೇಲಿಯಾ ಎ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 150 ರನ್ ಬಾರಿಸಿ ಭರ್ಜರಿ ಫಾರ್ಮ್ನಲ್ಲಿದ್ದಾರೆ.
ಇದಕ್ಕೂ ಮುನ್ನ ಪಡಿಕ್ಕಲ್, ಭಾರತದ ಪರ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 3 ಇನಿಂಗ್ಸ್ಗಳಲ್ಲಿ ಒಟ್ಟು 90 ರನ್ಗಳನ್ನು ಕಲೆಹಾಕಿದ್ದಾರೆ. ಒಂದು ಅರ್ಧಶತಕ ಕೂಡ ಅವರ ಹೆಸರಿನಲ್ಲಿದೆ. ಈಗ ಅವರು ತೋರಿಸಿರುವ ಸ್ಥಿರತೆ ಮತ್ತು ವೈಭವದಿಂದಾಗಿ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಪಡಿಕ್ಕಲ್ ಆಯ್ಕೆಯಾಗುವ ಸಾಧ್ಯತೆ ಅತ್ಯಂತ ಹೆಚ್ಚು ಎಂಬ ಮಾಹಿತಿಯಿದೆ.




