
KALBURGI NEWS : ಮಹಾರಾಷ್ಟ್ರದ ವ್ಯಾಪಕ ಮಳೆಯ ಪರಿಣಾಮವಾಗಿ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಜೊತೆಗೆ ಸೊನ್ನ ಬ್ಯಾರೇಜ್ನಿಂದ 1.60 ಲಕ್ಷ ಕ್ಯೂಸೆಕ್ನೀರು ಹರಿಸಲಾಗಿದೆ.
ನದಿಗೆ ಆಗುತ್ತಿರುವ ಭಾರೀ ಒಳಹರಿವಿನಿಂದ ದೇವಲ ಗಾಣಗಾಪುರ, ಘತ್ತರಗಿ ಸೇತುವೆ ಮತ್ತು ಮಣ್ಣೂರ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನ ಮುಳುಗಡೆಯಾಗಿದೆ. ಪರಿಣಾಮವಾಗಿ ಈ ಭಾಗದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ.
ನದಿ ತೀರದ ಗ್ರಾಮಗಳಿಗೆ ನದಿನೀರು ನುಗ್ಗುವ ಭೀತಿ ಇರುವುದರಿಂದ, ಕಲಬುರಗಿ ಜಿಲ್ಲಾಧಿಕಾರಿ ನದಿ ಪಕ್ಕದ ಜನರಿಗೆ ಎಚ್ಚರಿಕೆ ಜಾರಿಗೊಳಿಸಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ, ಹಾಗೂ ನದಿ ಪ್ರವಾಹದ ಪರಿಸ್ಥಿತಿ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ.




