RCB ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ ಬೆನ್ನಲ್ಲೇ, ಚಿನ್ನಸ್ವಾಮಿ ಕ್ರಿಕೆಟ್ ಕಾಮಗಾರಿಯ ವೇಗವನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷ ಕಾಲ್ತುಳಿತ ದುರಂತ ಸಂಭವಿಸಿದ ಸ್ಥಳದಲ್ಲಿ ಗೋಡೆಗಳನ್ನು ತೆರವುಗೊಳಿಸಿ, ಎಂಟ್ರಿ ಮತ್ತು ಎಕ್ಸಿಟ್ಗಳಿಗೆ ವಿಶಾಲವಾದ ಜಾಗದ ವ್ಯವಸ್ಥೆ ಮಾಡಲಾಗುತ್ತಿದೆ.
AI ಕ್ಯಾಮರಾ ಅಳವಡಿಕೆ
ಕೆಎಸ್ಸಿಎ (KSCA) ಗೇಟ್ ನಂ. 18 ಮತ್ತು 19 ಬಳಿ ಕಾಮಗಾರಿಯನ್ನು ಆರಂಭಿಸಿದ್ದು, ಜನ ದಟ್ಟಣೆ ನಿಯಂತ್ರಿಸಲು ಹೆಚ್ಚಿನ ಸ್ಥಳವನ್ನು ಸಿದ್ಧಪಡಿಸಲಾಗಿದೆ. RCB ಆಡಳಿತ ಮಂಡಳಿ 350 AI ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದೆ. ಈ ಮೂಲಕ, ಭದ್ರತೆ ಹೆಚ್ಚಿಸಲು ಹಾಗೂ ಜನರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲಾಗಿದೆ.

ಇದನ್ನು ಓದಿ : ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ Saina Nehwal ನಿವೃತ್ತಿ
IPL ಆರಂಭಕ್ಕೆ ಕೆಲವೇ ದಿನಗಳು ಬಾಕಿ
ಐಪಿಎಲ್ ಆರಂಭಕ್ಕೆ ಇನ್ನೂ 65 ದಿನಗಳಿವೆ. ಆರ್ಸಿಬಿ ಮತ್ತು ಮೈದಾನದ ಆಡಳಿತ ಮಂಡಳಿ ಅಗ್ನಿಶಾಮಕ, ಜಿಬಿಎ, ಲೋಕೋಪಯೋಗಿ, ಜಲಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಭದ್ರತಾ ಕ್ರಮಗಳನ್ನು ತ್ವರಿತಗತಿಯಲ್ಲಿ ಜಾರಿಗೆ ತಂದಿದ್ದಾರೆ. ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಎಐ ಕ್ಯಾಮೆರಾ ಅಳವಡಿಸುವ ಮೂಲಕ ಜನ ದಟ್ಟಣೆ ನಿಯಂತ್ರಿಸಲು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಸಿದ್ಧತೆ ಮಾಡಲಾಗಿದೆ.
ಪಂದ್ಯಗಳು ನಡೆಯುವಂತೆಯೂ ವ್ಯವಸ್ಥೆ
ಇನ್ನು ರಾಜ್ಯ ಸರ್ಕಾರದ ಅನುಮತಿಯೊಂದಿಗೆ, ಚಿನ್ನಸ್ವಾಮಿ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಐಪಿಎಲ್ ಪಂದ್ಯಗಳು ನಡೆಯುವಂತೆಯೂ ವ್ಯವಸ್ಥೆ ಮಾಡಲಾಗಿದೆ.

ಇದನ್ನು ನೋಡಿ : ವಾಸಣ್ಣನ ಬಣ್ಣ ಡಿಕೆಶಿ ಬಯಲು ಮಾಡಿದ್ದಾರೆ ಬಿಜೆಪಿ ಮುಖಂಡ ದಿಲೀಪ್ ಕೆಂಡಾಮಂಡಲ




