Chikkaballapura : ನಾವು 21 ನೇ ಶತಮಾನದಲ್ಲಿದ್ದೇವೆ. ನಮ್ಮಲ್ಲಿ ಇಂದಿಗೂ ಮೌಡ್ಯಾಚರಣೆ ಇಲ್ಲ, ನಾವು ಅಭಿವೃದ್ಧಿ ಹೊಂದುತ್ತಿದ್ದೇವೆ ಅಂತ ಪುಟಗಟ್ಟಲೇ ಭಾಷಣ ಮಾಡ್ತಾರೆ

Chikkaballapura: ಆದ್ರೆ ನಿಜಾಂಶಕ್ಕೆ ಬಂದ್ರೆ ಇಂದಿಗೂ ಅದೆಷ್ಟೋ ದೇಶವನ್ನು ಕಾಡುವ ಸಾಮಾಜಿಕ ಪಿಡುಗುಗಳು ತೊಲಗಿಲ್ಲ. ಅದರಲ್ಲಿ ಮುಖ್ಯವಾಗಿ ಈ ಜಾತಿ ಪದ್ಧತಿ.
ಈ ಜಾತಿ ವಿನಾಶಕ್ಕೆ ಅದೆಷ್ಟೇ ಪ್ರಯತ್ನ ಪಟ್ಟರು ಕೂಡ ಇಂದಿಗೂ ಅದು ಬದಲಾಗಿಲ್ಲ. ದಲಿತರು ಅನ್ನೋ ಕಾರಣಕ್ಕೆ ಇಂದಿಗೂ ಅವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ತಪ್ಪಿಲ್ಲ.
ಅದೆಷ್ಟೊ ಗ್ರಾಮಗಳಲ್ಲಿ ಇಂದಿಗೂ ದಲಿತರಿಗೆ ದೇವಸ್ತಾನದ ಪ್ರವೇಶ ನಿಷಿದ್ಧವಾಗಿದೆ. ಅಧಿಕಾರಿಗಳು ಮಧ್ಯಸ್ತಿಕೆ ವಹಿಸಿ ಸಮಾದಾನ ಪಡಿಸಿದ್ರು. ಇಂದಿಗೂ ಈ ಜಾತಿ ಭೂತ ತೊಲಗುತ್ತಿಲ್ಲ.
ಇತ್ತ ಇಲ್ಲೊಂದು ಗ್ರಾಮದಲ್ಲಿ ನಾವು ದೇವರನ್ನು ಹೊರುತ್ತೇವೆ. ನಮಗೂ ಅವಕಾಶ ಕೊಡಿ ಎಂದು ದಲಿತರು ಕೇಳಿದ್ದೇ ತಪ್ಪಾಯ್ತು.. ಸವರ್ಣೀಯರು ನಡುರಸ್ತೆಯಲ್ಲಿಯೇ ದೇವರನ್ನು ಬಿಟ್ಟು ಹೊರಟು ಹೋಗಿದ್ದಾರೆ. ಎಲ್ಲಿ ಇಂತಹ ಘಟನೆ ನಡೆದಿರೋದು ಅಂತೀರಾ .. ಈ ಸ್ಟೋರಿಯನ್ನ ಕಂಪ್ಲೀಟ್ ಆಗಿ ನೋಡಿ.

ದೇವಸ್ಥಾನದ ಒಳಗೆ ಪ್ರವೇಶವಿಲ್ಲ… ದೇವರನ್ನು ಮುಟ್ಟುವಂತಿಲ್ಲ… ಇದು ಹಳೆಯ ಕಾಲದ ಕಥೆಯಲ್ಲ..! ಇಂದಿನ ಡಿಜಿಟಲ್ ಯುಗದಲ್ಲೂ ದೇವರಿಗೂ ಜಾತಿಯ ಸಂಕೋಲೆ ಅಡ್ಡಬಂದಿದೆ. ಈ ಗ್ರಾಮದಲ್ಲಿ ನಡೆದ ದೇವರ ಮೆರವಣಿಗೆ ಈಗ ಸವರ್ಣೀಯರು ಮತ್ತು ದಲಿತರ ನಡುವಿನ ಸಂಘರ್ಷಕ್ಕೆ ವೇದಿಕೆಯಾಗಿದೆ.
ದೇವರನ್ನು ಹೊರಲು ಹೋದ ದಲಿತರಿಗೆ ಅವಮಾನ ಮಾಡಲಾಗಿದೆಯೇ?….ರಸ್ತೆಯಲ್ಲೇ ದೇವರನ್ನು ಬಿಟ್ಟು ಹೋದ ಸವರ್ಣೀಯರ ಉದ್ದೇಶವೇನು….? ಅನ್ನೋ ಪ್ರಶ್ನೆಗಳು ಮೂಡುತ್ತಿವೆ. ಇಂತಹದೊಂದು ಘಟನೆ ನಡೆದಿರೋದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ.

ಹೌದು.. ಚಿಕ್ಕಬಳ್ಳಾಪುರ ತಾಲೂಕಿನ ಆನೆಮಡಗು ಕೊತ್ತೂರು ಗ್ರಾಮದಲ್ಲಿ ಭಕ್ತಿಗಿಂತ ಹೆಚ್ಚಾಗಿ ಜಾತೀಯತೆಯ ಕಿಚ್ಚು ಹತ್ತಿಕೊಂಡಿದೆ. ಗ್ರಾಮದ ದೇವತೆಗಳಾದ ಗಂಗಮ್ಮ ಹಾಗೂ ಮಾರಮ್ಮ ದೇವಿಯ ಮೆರವಣಿಗೆ ಸಂಭ್ರಮದಿಂದ ಸಾಗಬೇಕಿತ್ತು.
ಆದರೆ ಅಲ್ಲಿ ನಡೆದಿದ್ದೇ ಬೇರೆ. ಸವರ್ಣೀಯರು ನಡೆಸುತ್ತಿದ್ದ ಮೆರವಣಿಗೆಯಲ್ಲಿ ದಲಿತರೂ ಕೂಡ ನಮಗೂ ದೇವರನ್ನು ಹೊರಲು ಅವಕಾಶ ನೀಡಿ ಎಂದು ಕೇಳಿದ್ದೇ ತಪ್ಪಾಯಿತಾ? ಎಂಬ ಪ್ರಶ್ನೆ ಈಗ ಮೂಡಿದೆ.
ಇನ್ನೂ ಗ್ರಾಮದ ಮನೆ ಮನೆಗೂ ತಲಾ 6 ಸಾವಿರ ರೂಪಾಯಿ ವಂತಿಗೆ ಕಟ್ಟುವಂತೆ, ಗ್ರಾಮದ ಹಿರಿಯರೆಲ್ಲಾ ಸೇರಿ ತೀರ್ಮಾನ ಮಾಡಿದ್ರಂತೆ. ಆದರಂತೆ ಯಾವುದೇ ಜಾತಿ ಧರ್ಮ ನೋಡದೇ, ಎಲ್ಲರೂ 6 ಸಾವಿರ ಹಣ ವಂತಿಗೆ ಕಟ್ಟಿದ್ದಾರೆ.
ಹಣಕ್ಕೆ ಇಲ್ಲದೆ ಇಲ್ಲದೇ ಇರೋ ಜಾತಿ, ದೇವರು ಹೊರಲು ಯಾಕೆ ಅಂತ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಸವರ್ಣೀಯರು ಮತ್ತು ದಲಿತರ ನಡುವೆ ಮಾತುಕಥೆ ಬೆಳೆದು ದೇವರನ್ನು ಗ್ರಾಮದ ಮದ್ಯದಲ್ಲೇ ಬಿಟ್ಟು ಹೋಗಿದ್ದಾರೆ ಜಾತಿ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ…

ಇನ್ನೂ ದಲಿತರು ದೇವರನ್ನು ಮುಟ್ಟಲು ಮುಂದಾದ ತಕ್ಷಣ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದಲಿತರಿಗೆ ದೇವಿಯ ಮೂರ್ತಿ ಹೊರಲು ಅವಕಾಶ ನೀಡಲು ಸವರ್ಣೀಯರು ಒಟ್ಟಾಗಿ ನಿರಾಕರಿಸಿದ್ದಾರೆ ಎನ್ನಲಾಗಿದೆ.
ವಿಪರ್ಯಾಸವೆಂದರೆ, ದಲಿತರು ಹಠ ಹಿಡಿದು ಮೆರವಣಿಗೆ ಮಾಡಲು ಮುಂದಾದಾಗ, ಸವರ್ಣೀಯರು ದೇವರ ಮೂರ್ತಿಗಳನ್ನು ರಸ್ತೆಯಲ್ಲೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದು ಗ್ರಾಮಸ್ಥರಲ್ಲಿ ಅತೀವ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ವಿಚಾರ ತಿಳಿದ ಎಎಸ್ಪಿ ಜಗನ್ನಾಥ್ ರೈ , ತಹಸೀಲ್ದಾರ್ ರಶ್ಮಿ ಇಒ ಮಂಜುನಾಥ್ ಸೇರಿದಂತೆ ಅಧಿಕಾರಿ ವರ್ಗ ಗ್ರಾಮಕ್ಕೆ ತೆರಳಿ, ಗ್ರಾಮಸ್ಥರೊಂದಿಗೆ ಕೂತ ಚರ್ಚೆ ನಡೆಸಿ, ತಿಳಿಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಕಾಲ ಬದಲಾಗುತಿದ್ದಂತೆ ನಮ್ಮ ಮನಸ್ಥಿತಿಗಳು ಬದಲಾಗಬೇಕು. ಮೂಡ ನಂಬಿಕೆಗಳಿಂದ ಹೊರಬರಬೇಕೆಂದು ಮನವರಿಕೆ ಮಾಡಿದ್ದಾರೆ.

ಒಟ್ಟಾರೆ ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ದೇವರ ಮೂರ್ತಿಗಳನ್ನು ನೋಡಿ ದಲಿತ ಯುವಕರ ಮನಸ್ಸು ಮರುಗಿದೆ. ಸವರ್ಣೀಯರು ಬಿಟ್ಟು ಹೋದ ಮೂರ್ತಿಗಳನ್ನು ದಲಿತ ಯುವಕರೇ ಭಕ್ತಿಯಿಂದ ಎತ್ತಿಕೊಂಡು ಹೋಗಿ ದೇವಾಲಯದ ಒಳಗೆ ಪ್ರತಿಷ್ಠಾಪಿಸಿದ್ದಾರೆ.
ಈ ಮೂಲಕ ಸವರ್ಣೀಯರ ನಡೆಯನ್ನು ತೀವ್ರವಾಗಿ ಖಂಡಿಸಿರುವ ಯುವಕರು, “ದೇವರ ಮುಂದೆ ಎಲ್ಲರೂ ಒಂದೇ ಅಲ್ಲವೇ?” ದೇವರಿಗೆ ಜಾತಿ ಇಲ್ಲ ನಾವೆಲ್ಲಾ ಒಂದೇ ಗ್ರಾಮದಲ್ಲಿ ಅಣ್ಣತಮ್ಮಂದಿರಂತೆ ಬಾಳಿ ಬದುಕಬೇಕು ಎಂದರು.
ಇನ್ನು ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನ್ನು ಮಾಡಲಾಗಿದೆ




