ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ (RDPR) ಇಲಾಖೆ 2025 ನೇ ಸಾಲಿಗೆ ಒಂಬಡ್ಸ್ಪರ್ಸನ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಲೇ ಆರಂಭವಾಗಿದೆ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ನೇಮಕಾತಿ ವಿವರಗಳು:
- ಹುದ್ದೆ ಹೆಸರು: ಒಂಬಡ್ಸ್ಪರ್ಸನ್
- ಹುದ್ದೆಗಳ ಸಂಖ್ಯೆ: ವಿವಿಧ
- ಉದ್ಯೋಗ ಸ್ಥಳ: ಚಾಮರಾಜನಗರ, ಚಿಕ್ಕಮಗಳೂರು, ಕಲ್ಬುರ್ಗಿ, ದಕ್ಷಿಣ ಕನ್ನಡ
- ಅಧಿಕೃತ ವೆಬ್ಸೈಟ್: https://rdpr.karnataka.gov.in/
- ಅರ್ಜಿ ಪ್ರಾರಂಭ ದಿನಾಂಕ: 02-09-2025
- ಅರ್ಜಿ ಕೊನೆಯ ದಿನಾಂಕ: 03-10-2025
ವಿದ್ಯಾರ್ಹತೆ ಮತ್ತು ಅನುಭವ:
- ಪದವಿ (Degree) ಹೊಂದಿರಬೇಕು.
- ಕನಿಷ್ಠ 10 ವರ್ಷಗಳ ಅನುಭವ ಕಡ್ಡಾಯ.
- ಸಮುದಾಯ ಸಂಸ್ಥೆ ಅಥವಾ ಸಾರ್ವಜನಿಕರೊಂದಿಗೆ ನೇರ ಕೆಲಸ ಮಾಡಿದ ಅನುಭವವು ಪ್ಲಸ್ ಪಾಯಿಂಟ್.
- ಗರಿಷ್ಠ ವಯೋಮಿತಿ: 66 ವರ್ಷ (03-10-2025 ದಿನಾಂಕಕ್ಕೆ).
ವೇತನ ಶ್ರೇಣಿ: ₹45,000/- ಮಾಸಿಕ
ಅರ್ಜಿ ಶುಲ್ಕ: ಉಚಿತ, ಯಾವುದೇ ಶುಲ್ಕವಿಲ್ಲ.
ಆಯ್ಕೆ ವಿಧಾನ:
- ಆಯ್ಕೆ ಸಂದರ್ಶನ (Interview) ಆಧಾರಿತ. ಲಿಖಿತ ಪರೀಕ್ಷೆ ಇಲ್ಲ.
ಅರ್ಜಿ ಸಲ್ಲಿಸುವ ವಿಧಾನ:
- RDPR Karnataka ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಿಮ್ಮ ಸಂಬಂಧಿತ ವಿಭಾಗ ಆಯ್ಕೆಮಾಡಿ.
- ಒಂಬಡ್ಸ್ಪರ್ಸನ್ ಹುದ್ದೆಯ ಅಧಿಸೂಚನೆಯನ್ನು ಓದಿ ಅರ್ಹತೆಯನ್ನು ಪರಿಶೀಲಿಸಿ.
- ಆನ್ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಿರಿ.
- ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಅರ್ಜಿಯನ್ನು ಸಬ್ಮಿಟ್ ಮಾಡಿ.
- ಪ್ರಿಂಟ್ ಕಾಪಿಯನ್ನು ತೆಗೆದು ಇಟ್ಟುಕೊಳ್ಳಿ ಮತ್ತು ಕೆಳಗಿನ ವಿಳಾಸಕ್ಕೆ ಕಳುಹಿಸಿ:
Commissioner Rural Development, Rural Development Commission, Rural Development and Panchayat Raj Department, 5th Floor, Plot No. 1243, K.S.I.I.D.C. Building, IT Park, South Block, Rajajinagar Industrial Estate, Bangalore – 560010
ಈ ಅವಕಾಶ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಹಾರಿಕೆಯಾಗಿದೆ. ಈಗಲೇ ಅರ್ಜಿ ಸಲ್ಲಿಸಿ ನಿಮ್ಮ ಭವಿಷ್ಯ ಭದ್ರಪಡಿಸಿಕೊಳ್ಳಿ!




