
HUBLI : ಶಬರಿಮಲೆ ಯಾತ್ರೆ ಕೈಗೊಂಡು ಕೇರಳಕ್ಕೆ ತೆರಳುತ್ತಿರುವ ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ (South Western Railway) ವತಿಯಿಂದ 14 ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ರೈಲುಗಳು ಹುಬ್ಬಳ್ಳಿ ಮತ್ತು ಕೇರಳದ ಕೊಲ್ಲಂ ಜಂಕ್ಷನ್ ನಡುವೆ ಬೆಂಗಳೂರು ಮೂಲಕ ಸಂಚರಿಸಲಿದ್ದು, ಭಕ್ತರ ಪ್ರಯಾಣವನ್ನು ಸುಲಭ ಹಾಗೂ ಆರಾಮದಾಯ ಕಗೊಳಿಸುವ ಉದ್ದೇಶವಿದೆ.
ಈ ರೈಲುಗಳು ಸೆಪ್ಟೆಂಬರ್ 28ರಿಂದ ಅಕ್ಟೋಬರ್ 28ರವರೆಗೆ ಭಾನುವಾರಗಳಂದು ಕಾರ್ಯನಿರ್ವಹಿ ಸಲಿದ್ದು, ಮಧ್ಯಾಹ್ನ 3.15ಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಧ್ಯಾಹ್ನ 12.55ಕ್ಕೆ ಕೊಲ್ಲಂ ತಲು ಪಲಿವೆ. ಮರಳಿ ಪ್ರಯಾಣದ ಭಾಗವಾಗಿ, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 29ರವರೆಗೆ ಸೋಮವಾರ ಗಳಂದು ಸಂಜೆ 5.00ಕ್ಕೆ ಕೊಲ್ಲಂನಿಂದ ಹೊರಟು ಮರುದಿನ ಸಂಜೆ 6.30ಕ್ಕೆ ಹುಬ್ಬಳ್ಳಿ ತಲುಪಲಿವೆ.
ಈ ವಿಶೇಷ ರೈಲುಗಳಲ್ಲಿ ಒಟ್ಟು 22 ಬೋಗಿಗಳಿದ್ದು, ಇದರೊಳಗೆ 1 ಎಸಿ 2-ಟೈರ್ ಕೋಚ್,2 ಎಸಿ 3-ಟೈರ್ ಕೋಚ್ಗಳು,12 ಸ್ಲೀಪರ್ ಕೋಚ್ಗಳು, 5 ಜನರಲ್ ಕೋಚ್ಗಳು ಇರುತ್ತವೆ. ವಿಶೇಷ ರೈಲುಗಳು ಮಾರ್ಗ ಮಧ್ಯೆ ಹಾವೇರಿ, ದಾವಣಗೆರೆ, ಬಿರೂರು, ಅರಸಿಕೆರೆ, ತುಮಕೂರು, ಎಸ್.ಎಂ.ವಿಟಿ (Sir M Visvesvaraya Terminal – ಬೆಂಗಳೂರು), ಕೃಷ್ಣರಾಜಪುರಂ ಈ ಎಲ್ಲಾ ಜಾಗಗಳಲ್ಲಿ ನಿಲುಗಡೆ ಇರಲಿದೆ. ಇನ್ನು ಶಬರಿ ಮಲೆಗೆ ತೆರಳುವ ಭಕ್ತಾದಿಗಳು ದೇವಸ್ಥಾನಕ್ಕೆ ಹತ್ತಿರವಿರುವ ಚೆಂಗನ್ನೂರು ರೈಲು ನಿಲ್ದಾಣದಲ್ಲಿ ಇಳಿಯಬಹುದೆಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.





