
GOLD RATE : ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ನಿರಂತರ ಏರಿಕೆಯಾಗುತ್ತಿವೆ. ಇಂದು ಆಭರಣ ಚಿನ್ನದ ಬೆಲೆ (22 ಕ್ಯಾರಟ್) ಪ್ರತಿ 10 ಗ್ರಾಮ್ಗೆ ₹10,500 ಗಡಿ ಸಮೀಪಿಸುತ್ತಿದ್ದು, ಈಗಾಗಲೇ ₹10,400 ಗಡಿ ದಾಟಿದೆ. ಅಪರಂಜಿ ಚಿನ್ನ (24 ಕ್ಯಾರಟ್) ಬೆಲೆ ₹11,400 ಗಡಿ ದಾಟಿದ್ದು, ಇದೇ ಈ ಮೊದಲ ಬಾರಿಗೆ ಮಾರುಕಟ್ಟೆ ತಲುಪಿದ ಮೈಲಿಗಲ್ಲು ಎಂದು ಹೇಳಲಾಗುತ್ತಿದೆ.
ಇನ್ನು ಬೆಳ್ಳಿ ಬೆಲೆಯೂ ದಾಖಲೆ ಮಟ್ಟವನ್ನು ತಲುಪಿದ್ದು, ಪ್ರತಿ 100 ಗ್ರಾಂಗೆ ₹13,900 ದಾಟಿದೆ. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,04,800, ಮತ್ತು 24 ಕ್ಯಾರಟ್ ಚಿನ್ನದ ಬೆಲೆ ₹1,14,330 ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ ₹13,900 ಇದೆ. ತಮಿಳುನಾಡು, ಕೇರಳ ಮೊದಲಾದ ರಾಜ್ಯಗಳಲ್ಲಿ ಈ ಬೆಲೆ ₹14,900ರ ಗಡಿಯನ್ನು ತಲುಪಿದೆ.
ವಿದೇಶಿ ಮಾರುಕಟ್ಟೆಗಳಲ್ಲಿ ಉಂಟಾದ ಚಿನ್ನದ ಬೇಡಿಕೆ, ಆರ್ಥಿಕ ಅಸ್ಥಿರತೆ ಇತ್ಯಾದಿ ಅಂಶಗಳು ಈ ಬೆಲೆ ಏರಿಕೆಗೆ ಕಾರಣವಾಗಿವೆ ಎನ್ನಲಾಗ್ತಿದೆ. ಚಿನ್ನದ ದರದಲ್ಲಿ ಈ ಬಗೆಯ ಹೈಜಂಪ್ ಭಾರತೀಯ ಮಾರುಕಟ್ಟೆಯಲ್ಲಿ ಅಪರೂಪವಾಗಿದ್ದು, ಗ್ರಾಹಕರಿಗೆ ಅದು ಹೆಚ್ಚುವರಿ ಹೊರೆ ಆಗುವ ಸಾಧ್ಯತೆ ಇದೆ.




