ಜನರಿಗೆ ನಿರಾಶೆ ಮಾಡಬಾರದು, ಅದಕ್ಕೆ ಚಿನ್ನಸ್ವಾಮಿಯಲ್ಲಿ (IPL ಆಡೋದಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಜನರಿಗೆ ನಿರಾಶೆ ಉಂಟು ಮಾಡಬಾರದು ಎಂಬ ಉದ್ದೇಶದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
KSCA ಭರವಸೆ ಕೊಟ್ಟಿದೆ
ಮಾಧ್ಯಮದವರೊಂದಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಆಡೋದಕ್ಕೆ ಅನುಮತಿ ಮಾಧ್ಯಮದವರೊಂದಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಆಡೋದಕ್ಕೆ ಅನುಮತಿ ನೀಡಿದ ವಿಚಾರವಾಗಿ ಮಾತನಾಡಿ, ಕುನ್ಹಾ ಸಮಿತಿ ಕೆಲವೊಂದು ಶಿಫಾರಸ್ಸು ಮಾಡಿತ್ತು.
ಅದರನ್ವಯ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ, ಜಿಬಿಎ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ವಿ. ನಾವು ಕುನ್ಹಾ ಅವರ ಶಿಫಾರಸ್ಸು ಕೆಎಸ್ಸಿಎಗೆ ಕಳಿಸಿ, ಇದನ್ನ ಸರಿಮಾಡಿ ಎಂದಿದ್ದೆವು. ಬಳಿಕ ಕೆಎಸ್ಸಿಎನವರು ಕೂಡ ಮನವಿ ಮಾಡಿ, ಎಲ್ಲವನ್ನ ಸರಿಪಡಿಸುತ್ತೇವೆ ಅಂತಾ ಹೇಳಿದ್ದರು. ಎಲ್ಲವನ್ನ ಸರಿಪಡಿಸುತ್ತೇವೆ ಅಂತಾ ಕೆಎಸ್ಸಿಎ ಭರವಸೆ ಕೊಟ್ಟಿದೆ.
ಇದನ್ನು ಓದಿ : Bidar|ಕಟ್ಟಡದ ಮೇಲಿಂದ ಬಿದ್ದು ಯುವಕ ದಾರುಣ ಸಾವು

IPL ಆಡೋದಕ್ಕೆ ಷರತ್ತುಬದ್ಧ ಅನುಮತಿ
ಮಾರ್ಚ್ ತಿಂಗಳಲ್ಲಿ IPL ಆರಂಭವಾಗಲಿರುವುದರಿಂದ, ಅಷ್ಟರೊಳಗೆ ಕಡಿಮೆ ಅವಧಿಯಲ್ಲಿ ಅಗತ್ಯ ಷರತ್ತುಗಳನ್ನು ಪೂರೈಸುವಂತೆ ಸೂಚಿಸಿ, ತಾತ್ಕಾಲಿಕವಾಗಿ ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಎಲ್ಲ ವ್ಯವಸ್ಥೆಗಳನ್ನು ಪರಿಶೀಲಿಸಿ, ಎಲ್ಲವೂ ಸರಿಯಾಗಿದ್ದರೆ ಅಂತಿಮ ಅನುಮತಿ ನೀಡಲಾಗುವುದು ಎಂದರು.
ಜನರಿಗೆ ನಿರಾಶೆ ಮಾಡಬಾರದು
ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಸುರಕ್ಷತೆ ಮತ್ತು ಹಿತಾಸಕ್ತಿಯ ಕುರಿತು ಜವಾಬ್ದಾರಿ ಇದೆ. ಜೊತೆಗೆ ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇದೆ, ಜನರಿಗೆ ನಿರಾಶೆ ಮಾಡಬಾರದು. ಈಗಾಗಲೇ ಕೆಲಸ ಶುರುವಾಗಿದೆ. ಗೇಟ್ ಎಲ್ಲ ಕಿತ್ತಾಕಿದ್ದಾರೆ. ದಾರಿಯಲ್ಲಿ ಬರೋವಾಗ ನೋಡಿದ್ದೇನೆ ಎಂದಿದ್ದಾರೆ.

ಇದನ್ನು ನೋಡಿ : ಅಭಿವೃದ್ಧಿಗೆ ಕುಮಾರಸ್ವಾಮಿ ನೆರವು ಪಡೆದಿಲ್ವಾ ಶಿವಲಿಂಗೇಗೌಡಗೆ ಸವಾಲ್ ಹಾಕಿದ ರೇವಣ್ಣ

