Tumakuru ಅಭಿವೃದ್ಧಿಗೆ ಪಣತೊಟ್ಟಿರೋ ಗೃಹ ಸಚಿವ ಪರಮೇಶ್ವರ್

Tumakuru ನಗರದ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿದ್ದು, ಎರಡನೇ ರಾಜಧಾನಿಯಾಗಿ ಬೆಳೆಯುತ್ತಿದ್ದೆ. ಸ್ಮಾರ್ಟ್ ಸಿಟಿ, ಎಜುಕೇಷನ್ ಸಿಟಿ ಅಂತಾ ಕರೆಸಿಕೊಳ್ಳುತ್ತಿರೋ ನಮ್ಮ ತುಮಕೂರಿಗೆ ಇನ್ನೇನು ಕೆಲವೇ ವರ್ಷಗಳಲ್ಲಿ ಮೆಟ್ರೋ, ಅಂತರಾಷ್ಟ್ರೀಯ ಕ್ರಿಕೇಟ್ ಸ್ಟೇಡಿಯಂ ಕೂಡ ಬರ್ತಾ ಇದೆ.
ಜಿಲ್ಲೆಯ ಅಭಿವೃದ್ಧಿಗೆ ಪಣತೊಟ್ಟಿರೋ ಪರಂ
ಇಷ್ಟು ಮಾತ್ರವಲ್ಲದೇ ತುಮಕೂರಿನಲ್ಲೇ ಎರಡನೇ ಅಂತರಾಷ್ಟ್ರೀಯ ಏರ್ಪೋರ್ಟ್ ನಿರ್ಮಾಣ ಮಾಡಬೇಕೆಂಬ ಕೂಗು ಕೂಡ ಕೇಳಿ ಬಂದಿದ್ದು, ಜಿಲ್ಲೆಯ ನಾಯಕರು ಕೂಡ ತಮ್ಮ ಒತ್ತಾಸೆಯನ್ನ ಕೇಂದ್ರದ ಮುಂದೆ ಹೇಳಿಕೊಂಡಿದ್ದಾರೆ. ಇನ್ನು ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರಾದ ಪರಮೇಶ್ವರ್ ಅವರು ತಮ್ಮ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪಣ ತೊಟ್ಟಿದ್ದಾರೆ.
ಹೌದು ತುಮಕೂರಿನಲ್ಲಿ ಹಾಕಿ ಸ್ಟೇಡಿಯಂ ಹಾಗೂ ಅಂತರಾಷ್ಟ್ರೀಯ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಮಾಡಬೇಕೆಂಬ ಬಯಕೆಯನ್ನು ಸಿಎಂ ಮುಂದೆ ಹೇಳಿಕೊಂಡಿದ್ದು, ಪರಂ ಬೇಡಿಕೆಗೆ ಸಿದ್ದು ಅಸ್ತು ಎಂದಿದ್ದಾರೆ.

ಇದನ್ನು ಓದಿ : ಯಾರಿಗೂ ಸಾಧ್ಯವಾಗದ ದಾಖಲೆ ಬರೆದ Shreyanka Patil
ಸಿದ್ದು ಅವರಿಂದ ಅದ್ದೂರಿ ಚಾಲನೆ
ತುಮಕೂರಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಒಲಂಪಿಕ್ಸ್ ಕ್ರೀಡಾಕೂಟ ಆಯೋಜನೆ ಮಾಡಲಾಗಿದ್ದು ನಿನ್ನೆ ಕ್ರೀಡಾಕೂಟಕ್ಕೆ ಸಿಎಂ ಸಿದ್ದರಾಮಯ್ಯ ಅದ್ಧೂರಿಯಾಗಿ ಚಾಲನೆ ನೀಡಿದ್ರು. ನಗರದ ಮಹಾತ್ಮ ಗಾಂಧಿ ಸ್ಟೇಡಿಯಂನಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದು, ಕರ್ನಾಟಕ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ್ರು.
ಇನ್ನೇರಡು ತಿಂಗಳಲ್ಲಿ ಕಾಮಗಾರಿ ಶುರು
ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ್, ತುಮಕೂರು ನಗರದಲ್ಲಿ ಅಂತರಾಷ್ಟ್ರೀಯ ಕ್ರಿಕೇಟ್ ಸ್ಟೇಡಿಯಂ ಆಗಬೇಕೆಂಬ ಕನಸು ನನಸಾಗಲಿದ್ದು, ಇನ್ನೇರಡು ತಿಂಗಳಲ್ಲಿ ಕಾಮಗಾರಿ ಶುರು ವಾಗಲಿದ್ದು, ಒಂದು ವರ್ಷದಲ್ಲಿ ತುಮಕೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಆಗುವ ನಿರೀಕ್ಷೆ ಇದೆ ಎಂದ್ರು.
ಹಾಕಿ ಸ್ಟೇಡಿಯಂ ಹಾಗೂ ಸ್ವಿಮ್ಮಿಂಗ್ ಫೂಲ್ ನಿರ್ಮಾಣ
ಇನ್ನು ತುಮಕೂರಿನಲ್ಲಿ 27 ಕ್ರೀಡೆಗಳಲ್ಲಿ 25 ಕ್ರೀಡೆಗಳನ್ನು ಮಾಡಿದ್ದೇವೆ. ಇಂಟರ್ ನ್ಯಾಷನಲ್ ಟೆನ್ನಿಸ್ ಕೋರ್ಟ್ ಕೂಡ ಇದೆ. ಆದ್ರೆ ಜಿಲ್ಲೆಯಲ್ಲಿ ಹಾಕಿ ಸ್ಟೇಡಿಯಂ ಹಾಗೂ ಅಂತರಾಷ್ಟ್ರೀಯ ಸ್ವಿಮ್ಮಿಂಗ್ ಫೂಲ್ ಇಲ್ಲ. ಹೀಗಾಗಿ ಜಿಲ್ಲೆಯಲ್ಲಿ ಹಾಕಿ ಸ್ಟೇಡಿಯಂ ಹಾಗೂ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಮಾಡಿಕೊಡಬೇಕೆಂದು ಸಿಎಂಗೆ ಪರಂ ಮನವಿ ಮಾಡಿಕೊಂಡ್ರು.

ತುಮಕೂರಿಗೂ ಅನುದಾನ
ಇನ್ನು, ಪರಂ ಬೇಡಿಕೆಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಜಿಲ್ಲೆಯಲ್ಲಿ ಹಾಕಿ ಹಾಗೂ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಮಾಡಲು ಅನುದಾನ ನೀಡುವುದಾಗಿ ವೇದಿಕೆ ಮೇಲೆಯೇ ಘೋಷಣೆ ಮಾಡಿದ್ರು. ಮಂಗಳೂರು ಮತ್ತು ಉಡುಪಿಗೆ 6 ಕೋಟಿ ಅನುದಾನ ನೀಡುತ್ತಿದ್ದು, ತುಮಕೂರಿಗೂ ಅಷ್ಟೇ ಅನುದಾನ ಕೊಡುವುದಾಗಿ ಸಿದ್ದು ಘೋಷಣೆ ಮಾಡಿದ್ರು. ಈ ಮೂಲಕ ತುಮಕೂರು ಜಿಲ್ಲೆಯಿಂದ ಉತ್ತಮವಾದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಆಶಿಸಿದ್ರು.
ಕಾಂಗ್ರೆಸ್ ಅಧಿಕಾರವಧಿಯಲ್ಲೇ ಜಿಲ್ಲೆಯಲ್ಲಿ ಕ್ರಿಕೆಟ್
ತುಮಕೂರು ಜಿಲ್ಲೆ ಕೇವಲ ಮೆಟ್ರೋ, ಏರ್ಪೋರ್ಟ್, ಎಚ್ಎಎಲ್, ಕಂಪನಿಗಳ ನಿರ್ಮಾಣ ಮಾತ್ರವಲ್ಲದೇ, ಕ್ರೀಡೆಯಲ್ಲೂ ಜಿಲ್ಲೆ ಹೆಸರು ಮಾಡಲೆಂದು ಜಿಲ್ಲಾ ಉಸ್ತುವಾರಿ ಸಚಿವರು ಆಶಿಸಿದ್ದು, ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರ ವಧಿಯಲ್ಲೇ ಜಿಲ್ಲೆಯಲ್ಲಿ ಕ್ರಿಕೆಟ್, ಹಾಕಿ ಹಾಗೂ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಆಗುವ ನಿರೀಕ್ಷೆ ಇದ್ದು, ತುಮಕೂರು ನಗರ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಸದ್ದು ಮಾಡುವುದುರಲ್ಲಿ ಯಾವುದೇ ಅನುಮಾನ ಇಲ್ಲ.

ಇತ್ತ ತುಮಕೂರು ನಗರದಲ್ಲಿ ನಿರ್ಮಾಣಕ್ಕೆ ಅಣಿಯಾಗುತ್ತಿರೋ ಕ್ರಿಕೆಟ್, ಹಾಕಿ ಸ್ಟೇಡಿಯಂ ಹಾಗೂ ಸ್ವಿಮ್ಮಿಂಗ್ ಫೂಲ್ ನೋಡಲು ತುಮಕೂರಿಗರು ಕಾತುರರಾಗಿದ್ರೆ, ಮತ್ತೊಂದ್ಕಡೆ ತುಮಕೂರಿನಿಂದ ಮುಂದಿನ ದಿನಗಳಲ್ಲಿ ಉತ್ತಮವಾದ ಕ್ರೀಡಾಪಟುಗಳು ನಿರ್ಮಾಣ ಆಗಲು ಸಜ್ಜಾಗುವಂತೆ ಕಾಣುತ್ತಿದೆ.
ಇದನ್ನು ನೋಡಿ : ರಾಜಣ್ಣಗೆ ಸಿಎಂ ಸಿದ್ದು ಅಭಯ- ರಾಜಣ್ಣ ನಿವಾಸದಲ್ಲಿ ಇವತ್ತು ಏನೆಲ್ಲಾ ಆಯ್ತು..?




