
PAVAGADA:
ನಿಮ್ಮ ಪ್ರಜಾಶಕ್ತಿ ಟಿವಿಯ ಸದಾ ಜನಪರ ಕೆಲಸಗಳನ್ನು ಮಾಡುತ್ತ, ಜನರ ಮನಸ್ಸನ್ನು ಗೆದಿಯುವಲ್ಲಿ ಯಶಸ್ವಿಯಾಗಿದೆ. ಪ್ರತಿನಿತ್ಯ ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಅಧಿಕಾರಿಗಳಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ. ಅದರಂತೆ ಪಾವಗಡ ತಾಲೂಕಿನ ಬುಗಡೂರು ಗ್ರಾಮದಲ್ಲಿ ಕುಡಿಯಲು ಶುದ್ಧ ನೀರಿಲ್ಲದೆ ಹಾಗೇ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಅದು ಬಳಕೆಗೆ ಬರದೆ ಹಾಳುಬಿದ್ದಿದ್ದವು. ಈ ಕುರಿತಾಗಿ ನಿಮ್ಮ ಪ್ರಜಾಶಕ್ತಿ ಟಿವಿ ವರದಿ ಬಿತ್ತರಿಸಿತ್ತು. ಇದೀಗ ಅಧಿಕಾರಿಗಳು ಹೆಚ್ಚೆತ್ತುಕೊಂಡಿದ್ದು, ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿ, ಕುಡಿಯುವ ನೀರನ್ನು ಒದಗಿಸಿದ್ದಾರೆ.
ಬುಗಡೂರು ಗ್ರಾಮಸ್ಥರಿಗೆ ಕುಡಿಯುವ ನೀರಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವಿದ್ರು ವೇಸ್ಟ್ ಅನ್ನೋ ಅಣೆಬರಹದಡಿ ಸುದ್ದಿಯನ್ನು ಬಿತ್ತರಿಸಿ ಬುಗಡೂರು ಗ್ರಾಮದಲ್ಲಿ ಇರುವ ಎಲ್ಲಾ ಸಮಸ್ಯೆಗಳ ಕುರಿತಾಗಿ ವಿಸ್ತ್ರತ ವರದಿಯನ್ನು ಬಿತ್ತರಿಸಿತ್ತು. ಪಾವಗಡ ತಾಲೂಕಿನಲ್ಲಿ ಕೇಲವು ಗ್ರಾಮಗಳಿಗೆ ತುಂಗಭದ್ರ ನೀರೆ ಬಂದಿಲ್ಲ, ಆಗಲೇ ಶುದ್ಧ ಕುಡಿಯುವ ನೀರಿನ ಘಟಕಗಳು ಗುಜರಿ ಸೇರುತ್ತಿವೆ. ಫ್ಲೋರೈಡ್ ನೀರು ಕುಡಿದು ಬಹಳಷ್ಟು ಜನರು ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ಇತ್ತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುವಂತೆ ಕೋರ್ಟ್ ಆದೇಶವಿತ್ತು. ಇದೇ ಕಾರಣಕ್ಕೆ ಪಾವಗಡ ತಾಲೂಕಿನಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಮುಂದಾಗಿತ್ತು ಸರ್ಕಾರ. ಇತ್ತ ತುಂಗಾಭದ್ರ ನೀರಿನ್ನು ತಾಲೂಕಿಗೆ ಹರಿಸಲು ಪೈಪ್ಲೈನ್ ಅಳವಡಿಸಿದ್ದು, ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿ. ಆದರೆ ತಾಲೂಕಿನಾದ್ಯಂತ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳು ಬಳಕೆ ಬಾರದೆ ತುಕ್ಕು ಹಿಡಿಯುತ್ತಿವೆ ಎಂದರು ವರದಿ ಬಿತ್ತರಿಸಿದ್ದೇವು.
ಇದೀಗ ಎಚ್ಚೆತ್ತುಕೊಂಡು ಇಂಜಿನಿಯರ್ ಬಸವಲಿಂಗಪ್ಪ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿ, ಜನರ ನೋವಿಗೆ ಸ್ಪಂದಿಸಿದ್ದಾರೆ. ಇದು ನಿಮ್ಮ ಪ್ರಜಾಶಕ್ತಿ ಟಿವಿಯ ಬಿಗ್ ಇಂಪ್ಯಾಕ್ಟ್




