Haveri News : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಳಗೇರಿ ಸುರಗುಪ್ಪ ಗ್ರಾಮದಲ್ಲಿ ಜಾನುವಾರು ಕಳ್ಳತನ ಮಾಡಿದ್ದ ಹಾನಗಲ್ ಮೂಲದ 6 ಜನ ಅಂತರ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

Haveri News : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಳಗೇರಿ ಸುರಗುಪ್ಪ ಗ್ರಾಮದಲ್ಲಿ ಜನವರಿ 9ರ ರಾತ್ರಿ ನಡೆದಿದ್ದ ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣವನ್ನು ಭೇದಿಸಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಹಾನಗಲ್ ಮೂಲದ 6 ಜನ ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ.
ಅಂತರ ಜಿಲ್ಲಾ ಜಾನುವಾರು ಕಳ್ಳರ ಗ್ಯಾಂಗ್ ಅರೆಸ್ಟ್
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರು ಗ್ರಾಮದ ಗೊಲ್ಲರ ಬಿಡಾರದ 25 ವರ್ಷದ ಮೋಹನ ಶೇಖಪ್ಪ ಗೊಲ್ಲರ, 35 ವರ್ಷದ ಬಸವರಾಜ ಅಮ್ಮಣಪ್ಪ ಗೊಲ್ಲರ, 22 ವರ್ಷದ ಅವಿನಾಶ ರುದ್ದಪ್ಪ ಗೊಲ್ಲರ, 35 ವರ್ಷದ ಸುರೇಶ ಫಕೀರಪ್ಪ ಗೊಲ್ಲರ, 47 ವರ್ಷದ ಬಸವರಾಜ ಫಕೀರಪ್ಪ ಗೊಲ್ಲರ ಮತ್ತು 54 ವರ್ಷದ ಅಯೂಬ ಅನೀಮ್ ಸಾಬ ಬಂಧಿತ ಆರೋಪಿಗಳು ಎನ್ನಲಾಗಿದೆ.

ಇದನ್ನೂ ಓದಿ : Haveri ಯ ವರದಾ ನದಿಯಲ್ಲಿ ಮುಳುಗಿ ಯುವಕ ಸಾವು..!!
ಹಾನಗಲ್ ಮೂಲದ ಆರು ಆರೋಪಿಗಳ ಬಂಧನ
ಇನ್ನು ಬಂಧಿತರು ಜನವರಿ 9 ರಂದು ರಾತ್ರಿವೇಳೆ ರಾಮಚಂದ್ರ ಗೌಡ ಮತ್ತವರ ಸಹೋದರನ ಹೊಲದಲ್ಲಿರುವ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಜಾನುವಾರಗಳನ್ನು ಕದ್ದು ಪರಾರಿಯಾಗಿದ್ದರು. ಇದೀಗ ಜಾನುವಾರು ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
MUST WATCH : ಎತ್ತಿನ ಮೈ ತೊಳೆಯಲು ಹೋಗಿ ನೀರಿನಲ್ಲಿ ಮುಳುಗಿ ಯುವಕ ಸಾ**




