Gokarna ಪ್ಯಾರಡೈಸ್ ಬೀಚ್ಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಬೋಟಿಂಗ್ಗೆ ತೆರಳಿದ್ದಾಗ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.

Gokarna ದ ಪ್ಯಾರಡೈಸ್ ಬೀಚ್ (Gokarna Paradise Beach) ಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಮಹಿಳೆಯೊಬ್ಬರು ಬೋಟಿಂಗ್ಗೆ ತೆರಳಿದ್ದ ವೇಳೆ ಅಸ್ವಸ್ಥಗೊಂಡು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತರನ್ನು ಬೆಂಗಳೂರು (Bengaluru) ನಿವಾಸಿ ನಾಗರತಿನಮ್ (58) ಎಂದು ಗುರುತಿಸಲಾಗಿದೆ. ಅವರು ಕುಟುಂಬದೊಂದಿಗೆ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ : Tumakuru : ಸೋಪನಹಳ್ಳಿಯಲ್ಲಿ ಮರಿಗಳೊಂದಿಗೆ ಚಿರತೆ ಪ್ರತ್ಯಕ್ಷ

ಬೋಟಿಂಗ್ ವೇಳೆ ಅಸ್ವಸ್ಥತೆ
ಪ್ರವಾಸದ ವೇಳೆ ಬೋಟಿಂಗ್ ಮಾಡಲು ತೆರಳಿದ್ದ ನಾಗರತಿನಮ್ ಅವರಿಗೆ ಇದ್ದಕ್ಕಿದ್ದಂತೆ ಅಸ್ವಸ್ಥತೆ ಕಾಣಿಸಿಕೊಂಡಿದೆ. ತಕ್ಷಣ 108 ಆಂಬುಲೆನ್ಸ್ಗೆ ಕರೆ ಮಾಡಲಾಗಿದೆ. ಆದರೆ, ಆಂಬುಲೆನ್ಸ್ ಸಮಯಕ್ಕೆ ಸ್ಥಳಕ್ಕೆ ತಲುಪಿಲ್ಲ ಎಂಬ ಆರೋಪ ಕೇಳಿಬಂದಿದೆ.
ನಂತರ ಕುಮಟಾ (Kumta) ಯಿಂದ ಖಾಸಗಿ ಆಂಬುಲೆನ್ಸ್ನ್ನು ಕರೆಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಮಹಿಳೆ ಅಸುನೀಗಿದ್ದಾರೆ.ಈ ದುರ್ಘಟನೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗೋಕರ್ಣದಂತಹ ಪ್ರಮುಖ ಪ್ರವಾಸಿ ತಾಣದಲ್ಲಿ ತುರ್ತು ವೈದ್ಯಕೀಯ ಸೇವೆಗಳ ಕೊರತೆ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಪ್ರವಾಸಿಗರಲ್ಲಿ ಆತಂಕ ಮೂಡಿದೆ.
MUST WATCH: LEOPARD ATTACK ON WOMEN | ತೋಟಕ್ಕೆ ಹೋದ ಮಹಿಳೆಯನ್ನು ಚಿರತೆ ಕೊಂದ ಘಟನೆ SHOCKING




