BBK S12 : ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಪ್ರಮುಖ ಹೈಲೈಟ್ ಆಗಿದ್ದಾರೆ. ಗಿಲ್ಲಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ.

BBK S12 : ಬಿಗ್ ಬಾಸ್ ಕನ್ನಡ 12 ಮನೆಯಲ್ಲಿ ಗಿಲ್ಲಿ ನಟ (Gilli Nata) ಇದೀಗ ಪ್ರಮುಖ ಹೈಲೈಟ್ ಆಗಿದ್ದಾರೆ. ಅವರು ಮಾಡುವ ಪ್ರತಿಯೊಂದು ಕೆಲಸವೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅವರ ಹಾಸ್ಯ ಹಾಗೂ ಸ್ಪಾಂಟೇನಿಯಸ್ ವರ್ತನೆಗೆ ದೊಡ್ಡ ಅಭಿಮಾನಿ ಬಳಗ ನಿರ್ಮಾಣವಾಗಿದೆ. “ಗಿಲ್ಲಿಯೇ ಈ ಸೀಸನ್ ವಿನ್ನರ್” ಎಂಬ ಚರ್ಚೆ ಈಗ ಜೋರಾಗಿದೆ.
ಬಿಗ್ ಬಾಸ್ ನೀಡಿದ Three Choices ಟಾಸ್ಕ್
ನಿನ್ನೆ ಬಿಗ್ ಬಾಸ್ ಮನೆದಲ್ಲಿ ಸ್ಪರ್ಧಿಗಳಿಗೆ Three Choices ನೀಡಲಾಗಿತ್ತು. ಆ ಪೈಕಿ ಒಂದನ್ನು ಈಡೇರಿಸುವ ಅವಕಾಶ ದೊರಕಿತ್ತು. ಈ ವೇಳೆ ಗಿಲ್ಲಿ ನಟರು
- ಬಿಗ್ ಬಾಸ್ ಟಿವಿಯಲ್ಲಿ ಸಿನಿಮಾ ನೋಡಬೇಕು
- ಬಿಗ್ ಬಾಸ್ ಮನೆಯಲ್ಲಿರುವ ಆನೆ ಮೇಲೆ ಕುಳಿತುಕೊಳ್ಳಬೇಕು
- ನಳ್ಳಿ ಮೂಳೆ ತಿನ್ನಬೇಕು
ಎಂಬ ಮೂರು ಬೇಡಿಕೆಗಳನ್ನು ಇಟ್ಟಿದ್ದರು.
ಇದನ್ನು ನೋಡಿ : Namma Metro ದಲ್ಲಿ ಪ್ರಯಾಣಿಸಲು ಮೊಬೈಲ್ QR ಪಾಸ್ ಆರಂಭ

ನಳ್ಳಿ ಮೂಳೆ ತಿಂದು ವೈರಲ್ ಆದ ಗಿಲ್ಲಿ
ಗಿಲ್ಲಿಯ ಸರದಿ ಬಂದಾಗ ಅವರು ನಳ್ಳಿ ಮೂಳೆ (Nalli Moole) ತಿಂದು ತೇಗಿದ್ದಾರೆ. ಈ ದೃಶ್ಯದ ವಿಡಿಯೋ ಈಗ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಭಾರೀ ವೈರಲ್ ಆಗುತ್ತಿದೆ.
ಫ್ಯಾನ್ಸ್ ಈ ದೃಶ್ಯವನ್ನು ಖೈದಿ ಸಿನಿಮಾದಲ್ಲಿ ಕಾರ್ತಿ ಬಿರಿಯಾನಿ ತಿನ್ನುವ ಸೀನ್ಗೆ ಹೋಲಿಕೆ ಮಾಡುತ್ತಿದ್ದಾರೆ.
“Bro created a masterpiece” ಎಂಬ ಕಾಮೆಂಟ್ಗಳು ಟ್ರೆಂಡ್ ಆಗಿವೆ.
ಒಟ್ಟಾರೆ ನೋಡಿದರೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರ ಎಂಟರ್ಟೈನ್ಮೆಂಟ್, ಟಾಸ್ಕ್ಗಳಲ್ಲಿ ತೋರಿಸುವ ಎನರ್ಜಿ ವೀಕ್ಷಕರನ್ನು ಸೆಳೆಯುತ್ತಿದೆ.
ಗಿಲ್ಲಿ ವಿನ್ನರ್ ಆಗ್ತಾರಾ?
ನಳ್ಳಿ ಮೂಳೆ ಸೀನ್ ವೈರಲ್ ಆದ ಬಳಿಕ ಗಿಲ್ಲಿ ನಟರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. Bigg Boss Kannada 12ರಲ್ಲಿ ಗಿಲ್ಲಿಯ ಈ ಕ್ರೇಜ್ ಅವರನ್ನು ವಿನ್ನರ್ ಮಾಡುತ್ತಾ? ಎಲ್ಲರ ಗಮನ ಈಗ ಇದೇ ಪ್ರಶ್ನೆಯ ಮೇಲೆ ಇದೆ.
ಇದನ್ನು ನೋಡಿ : ಶಿಡ್ಲಘಟ್ಟ ಆಯುಕ್ತೆಗೆ ಅವಾಚ್ಯ ಶಬ್ದ ಬಳಸಿRAJEEV GOWDA ಬೈದಿರೋ AUDIO VIRAL




