Pavagada : ತಾಲೂಕು ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಇಲ್ಲದೆ ಪರದಾಟ – ಆಸ್ಪತ್ರೆಗೆ ಬೀಗ ಹಾಕಿ ಸಾರ್ವಜನಿಕರಿಂದ ಆಕ್ರೋಶ…!?

ಹೊಲದಲ್ಲಿ ಕೆಲಸ ಮಾಡ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿದ್ದು, ಕೂಡಲೇ ಆತನನ್ನು ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಆಂಬುಲೆನ್ಸ್ ಸಿಗದೆ ಕುಟುಂಬಸ್ಥರು ಪರದಾಡಿದ್ದು, ಬಳಿಕ ಆಸ್ಪತ್ರೆಯಲ್ಲೂ ಸಹ ಸಿಬ್ಬಂದಿಗಳು ಚಿಕಿತ್ಸೆ ನೀಡಲು ತಡಮಾಡಿದ್ದಕ್ಕೆ ಆಕ್ರೋಶಗೊಂಡು ಆಸ್ಪತ್ರೆಗೆ ಬೀಗ ಜಡಿದಿರುವ ಘಟನೆ Pavagada ದಲ್ಲಿ ನಡೆದಿದೆ.
ಆಸ್ಪತ್ರೆಗೆ ಬೀಗ ಜಡಿದು ಆಕ್ರೋಶ
ಪಾವಗಡ ತಾಲೂಕಿನ ಲಿಂಗದಹಳ್ಳಿ ವ್ಯಾಪ್ತಿಯ ಪೆನ್ನೊಬೆನಹಳ್ಳಿ ಗ್ರಾಮದ ಬಿ.ನರಸರೆಡ್ಡಿ ಎಂಬುವರಿಗೆ ಹಾವು ಕಚ್ಚಿತ್ತು. ನಂತರ ಆಂಬುಲೆನ್ಸ್ ಸಿಗದೇ ಪರದಾಡಿ ಬಳಿಕ ಖಾಸಗಿ ವಾಹನದಲ್ಲಿ ಪಾವಗಡ ಆಸ್ಪತ್ರೆಗೆ ಕರೆತಂದಿದ್ದು, ಹಾವು ಕಡಿದು ಸುಮಾರು 3 ರಿಂದ 4 ಗಂಟೆಯಾದ್ರೂ ಸಿಬ್ಬಂದಿಗಳು ಚಿಕಿತ್ಸೆ ನೀಡಲು ಸತಾಯಿಸಿದ್ದಾರೆ. ಅಲ್ದೇ ವೈದ್ಯರು ಬಂದ ಮೇಲೆ ರಕ್ತ ಪರೀಕ್ಷೆ ಮಾಡಿ, ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ತೇವೆ ಎಂದಿದ್ದಾರೆ ಇದಕ್ಕೆ ರೊಚ್ಚಗೆದ್ದ ಕುಟುಂಬಸ್ಥರು ಆಸ್ಪತ್ರೆಗೆ ಬೀಗ ಜಡಿದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನು ಓದಿ : ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ – ಕಾಟೇನಹಳ್ಳಿ ಶಾಲೆ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ

Pavagada ದಲ್ಲಿ ಆಂಬುಲೆನ್ಸ್ ಇಲ್ಲದೆ ಪರದಾಟ
ಇನ್ನು ತಾಲೂಕಿನಲ್ಲಿ ಎರಡು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದಾರೆ. ಆದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ವ್ಯವಸ್ಥೆಯಿಲ್ಲದೆ, ಇರೋದ್ರಿಂದ ಏನಾದ್ರೂ ತುರ್ತು ಪರಿಸ್ಥಿತಿ ಆದ್ರೆ ಜನರು ಸಂಕಷ್ಟಪಡುವಂತಾಗಿದೆ. ರಾತ್ರಿ ವೇಳೆ ಏನಾದ್ರೂ ಸಮಸ್ಯೆ ಆದ್ರೆ ರೋಗಿಗಳು ಪರದಾಡುವಂತಾಗಿದ್ದು, ಆರೋಗ್ಯ ಅಧಿಕಾರಿಗಳು ಈ ಸಮಸ್ಯೆಯನ್ನ ಬಗೆಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಡ್ತಾರಾ..?
ಇನ್ನಾದ್ರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲಿರುವ ಆಂಬುಲೆನ್ಸ್ ಸಮಸ್ಯೆಯನ್ನ ಬಗೆಹರಿಸಿ ಆಂಬುಲೆನ್ಸ್ ವ್ಯವಸ್ಥೆಯನ್ನ ಕಲ್ಪಿಸಿಕೊಡ್ತಾರಾ ಇಲ್ವಾ ಅನ್ನೋದನ್ನ ಕಾದುನೋಡಬೇಕಿದೆ.

ಇದನ್ನು ನೋಡಿ : 2 ತಿಂಗಳ ಗರ್ಭಿಣಿ ಆತ್ಮಹ*ತ್ಯೆಯ ಸುತ್ತ ಹಲವು ಅನುಮಾನಗಳ ಹುತ್ತ..!?




