BBK S12 : ಫಿನಾಲೆ ಹೊಸ್ತಿಲಲ್ಲಿ ಹೊರ ಬಂದ ರಾಶಿಕಾ ಶೆಟ್ಟಿ , ಕಿಚ್ಚ ಸುದೀಪ್ ಎದುರು ರಾಶಿಕಾ ಶೆಟ್ಟಿ ಹೇಳಿದ್ದೇನು..?

BBK S12 : ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಕೇವಲ ಒಂದು ವಾರ ಬಾಕಿ ಇರುವಾಗಲೇ ಸ್ಪರ್ಧಿ ರಾಶಿಕಾ ಶೆಟ್ಟಿ (Rashika Shetty) ಎಲಿಮಿನೇಟ್ ಆಗಿದ್ದಾರೆ. ಈ ಅಪ್ರತೀಕ್ಷಿತ ಎಲಿಮಿನೇಷನ್ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ.
ನಿನ್ನೆ ಪ್ರಸಾರವಾದ ಬಿಗ್ ಬಾಸ್ ಕನ್ನಡ 12ರ ಕೊನೆಯ ವೀಕೆಂಡ್ ಎಪಿಸೋಡ್ನಲ್ಲಿ, ನಿಯಮದಂತೆ ಒಬ್ಬ ಸ್ಪರ್ಧಿ ಮನೆಯಿಂದ ಹೊರ ಹೋಗಬೇಕಿತ್ತು. ಮನೆ ಒಳಗೆ ಇದ್ದ 8 ಮಂದಿಯಲ್ಲಿ, ಕ್ಯಾಪ್ಟನ್ ಧನುಷ್ ಹೊರತುಪಡಿಸಿ ಶನಿವಾರದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಸೇವ್ ಆಗಿದ್ದರು.
ಅದರ ಬಳಿಕ, ನಿರೂಪಕ ಕಿಚ್ಚ ಸುದೀಪ್ ಉಳಿದ ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿ ಸೇವ್ ಮಾಡುತ್ತ ಬಂದರು. ಕೊನೆಗೆ ರಘು ಮತ್ತು ರಾಶಿಕಾ ಶೆಟ್ಟಿ ಮಾತ್ರ ಉಳಿದುಕೊಂಡರು.
ಇದನ್ನು ಓದಿ : Namma Metro ಪ್ರಯಾಣಕರಿಗೆ ಮತ್ತೆ ಟಿಕೆಟ್ ದರ ಏರಿಕೆಯ ಶಾಕ್! ಈ ಬಾರಿ ಎಷ್ಟು?

ಅಂತಿಮ ಕ್ಷಣದಲ್ಲಿ ರಾಶಿಕಾ ಶೆಟ್ಟಿ ಎಲಿಮಿನೇಟ್
ಅಂತಿಮ ನಿರ್ಣಯದಲ್ಲಿ ರಾಶಿಕಾ ಶೆಟ್ಟಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು. ರಾಶಿಕಾ ಶೆಟ್ಟಿ ಅವರ ಆಟ ಶ್ಲಾಘನೀಯವಾಗಿದ್ದು, ಪ್ರೇಕ್ಷಕರನ್ನು ರಂಜಿಸುವಲ್ಲಿ ಅವರು ಯಶಸ್ವಿಯಾಗಿದ್ದರು.
ಕಿಚ್ಚನ ಎದುರು ರಾಶಿಕಾ ಶೆಟ್ಟಿ ಭಾವುಕ ಮಾತು
ಮನೆಯಿಂದ ಹೊರ ಬಂದ ಬಳಿಕ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಮಾತನಾಡಿದ ರಾಶಿಕಾ ಶೆಟ್ಟಿ,
“ಬಿಗ್ ಬಾಸ್ಗೆ ಬಂದಿದ್ದು ನನ್ನ ಜೀವನದ ಅತ್ಯುತ್ತಮ ನಿರ್ಧಾರ. ನಾನು ಇಷ್ಟು ಧೈರ್ಯವಂತೆ ಎನ್ನುವುದು ಇಲ್ಲಿಗೆ ಬರುವವರೆಗೆ ಗೊತ್ತಿರಲಿಲ್ಲ. ನಾನು ಸಹ ಬಹಳ ಸ್ಟ್ರಾಂಗ್ ಎಂದು ಇಲ್ಲಿ ತಿಳಿಯಿತು. ಅಪ್ಪನ ಧ್ವನಿಯ ನಂತರ ನಾನು ಹೆದರಿದ್ದು ಬಿಗ್ ಬಾಸ್ ಧ್ವನಿಗೆ ಮಾತ್ರ”
ಎಂದು ಭಾವುಕವಾಗಿ ಹೇಳಿದರು.
ಈ ಮಾತುಗಳು ಅಭಿಮಾನಿಗಳ ಮನಸ್ಸನ್ನು ತಟ್ಟಿದವು.

ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳು
ಪ್ರಸ್ತುತ ಬಿಗ್ ಬಾಸ್ ಕನ್ನಡ 12 ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳು:
- ಅಶ್ವಿನಿ
- ಧನುಷ್
- ಗಿಲ್ಲಿ
- ಕಾವ್ಯಾ
- ಧ್ರುವಂತ್
- ರಕ್ಷಿತಾ
- ರಘು
ಇವರಲ್ಲಿ ಇಬ್ಬರು ಮಿಡ್ನೈಟ್ ಎಲಿಮಿನೇಷನ್ ಮೂಲಕ ಹೊರ ಹೋಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ವೋಟಿಂಗ್ ಲೈನ್ ತೆರೆಯಲಾಗಿದೆ. ಫಿನಾಲೆಗೆ ಯಾರು ಪ್ರವೇಶ ಪಡೆಯುತ್ತಾರೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಇದನ್ನು ನೋಡಿ : ಜ 23ಕ್ಕೆ CULT MOVIE ಬಿಡುಗಡೆ – ರಾಜ್ಯಾದ್ಯಂತ ಚಿತ್ರತಂಡದಿಂದ ಭರ್ಜರಿ ಪ್ರಚಾರ




