ಮತ್ತೆ Namma Metro ಪ್ರಯಾಣ ದರ ಏರಿಕೆ.

ಬೆಂಗಳೂರಿನ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ ಎದುರಾಗುವ ಸಾಧ್ಯತೆ ಇದೆ. ನಗರದ ನಮ್ಮ ಮೆಟ್ರೋ ಟಿಕೆಟ್ ದರವನ್ನು ಫೆಬ್ರವರಿಯಿಂದ ಮತ್ತೊಮ್ಮೆ ಹೆಚ್ಚಿಸುವ ಕುರಿತು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಸಿದ್ಧತೆ ನಡೆಸುತ್ತಿದೆ.
ಮತ್ತೆ ಏರುತ್ತಾ ನಮ್ಮ ಮೆಟ್ರೋ ದರ?
2025ರಲ್ಲಿ Namma Metro ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿ 71% ವರೆಗೆ ಏರಿಕೆ ಮಾಡಲಾಗಿತ್ತು. ಈ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಸೇವೆ ನೀಡುವ ಸಂಸ್ಥೆಯಾಗಿ BMRCL ಗುರುತಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ 5% ದರ ಏರಿಕೆ ಮಾಡಲು ಮುಂದಾಗಿರುವುದು ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿದೆ.
ಇದನ್ನು ಓದಿ : ಚಿಕ್ಕನಾಯಕನಹಳ್ಳಿಯಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ Murder

ಕಾನೂನು ಬದ್ಧವಾಗಿ ಕಡ್ಡಾಯ
ಶುಲ್ಕ ನಿಗದಿ ಸಮಿತಿ (Fare Fixation Committee – FFC) ಪ್ರತಿ ವರ್ಷ ಮೆಟ್ರೋ ಟಿಕೆಟ್ ದರವನ್ನು ಕನಿಷ್ಠ 5% ರಷ್ಟು ಹೆಚ್ಚಿಸುವಂತೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಈ ಏರಿಕೆ ನಡೆಯಲಿದೆ ಎನ್ನಲಾಗಿದೆ. ಮೆಟ್ರೋ ರೈಲು ನಿರ್ವಹಣೆ ಕಾಯ್ದೆ – 2002 ರ ಸೆಕ್ಷನ್ 33 ಅಡಿಯಲ್ಲಿ, FFC ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು ಕಾನೂನುಬದ್ಧವಾಗಿ ಕಡ್ಡಾಯವಾಗಿದೆ.
ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ
ಆದರೆ ನಿರಂತರ ದರ ಏರಿಕೆಯಿಂದ ಮಧ್ಯಮ ಹಾಗೂ ಕಡಿಮೆ ಆದಾಯದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಈಗಾಗಲೇ ದುಬಾರಿ ದರಗಳಿಂದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿರುವ ನಡುವೆ, ಮತ್ತೆ ದರ ಹೆಚ್ಚಳ ಮಾಡುವ BMRCL ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನು ನೋಡಿ : SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಕೇಸ್- 8 ಮಂದಿ ಅರೆಸ್ಟ್




