Chikkanayakanahalli : ಮನೆ ಬಳಿ ಚಾಕುವಿನಿಂದ ಇರಿದು ಯುವಕನ ಹತ್ಯೆ.

ತುಮಕೂರು ಜಿಲ್ಲೆ Chikkanayakanahalli ತಾಲೂಕಿನ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಭಾನುವಾರ ರಾತ್ರಿ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು Murder ಮಾಡಿರುವ ದಾರುಣ ಘಟನೆ ನಡೆದಿದೆ.
ಇಬ್ಬರು ಮಕ್ಕಳ ತಂದೆ ದಾರುಣ ಸಾವು
ಮೃತರನ್ನು ಕೆಂಕೆರೆ ಗ್ರಾಮದ ನಿವಾಸಿ ಮಂಜುನಾಥ್ (41) ಎಂದು ಗುರುತಿಸಲಾಗಿದೆ. ಮಂಜುನಾಥ್ ಅವರು ಶಾಮಿಯಾನ ಹಾಗೂ ಡೆಕೋರೇಷನ್ ಕೆಲಸದ ಜೊತೆಗೆ ದಿನಸಿ ಅಂಗಡಿಯನ್ನು ನಡೆಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ : ಕಾಂಗ್ರೆಸ್ ಶಾಸಕಿ Nayana Motamma ಗೂ ಅಶ್ಲೀಲ ಕಮೆಂಟ್ ಕಾಟ
ಚಾಕುವಿನಿಂದ ಇರಿದು ಪರಾರಿ
ನೆನ್ನೆ ರಾತ್ರಿ ಸುಮಾರು 9.00 ರಿಂದ 9.30ರ ವೇಳೆಗೆ ಕೆಂಕೆರೆ ಗ್ರಾಮದ ಬಕಾಯಪ್ಪನ ಗುಡ್ಲು ಸಮೀಪ ನಿರ್ಮಾಣಗೊಂಡಿದ್ದ ಹೊಸ ಮನೆ ಬಳಿ ಈ ದುರ್ಘಟನೆ ನಡೆದಿದೆ. 3 ರಿಂದ 4 ಮಂದಿ ದುಷ್ಕರ್ಮಿಗಳು ಏಕಾಏಕಿ ಮಂಜುನಾಥ್ ಅವರಿಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮಾರ್ಗಮಧ್ಯೆ ಸಾವು
ಇನ್ನು ತೀವ್ರ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಪ್ರಕರಣ ದಾಖಲು
ಘಟನಾ ಸ್ಥಳಕ್ಕೆ ಹುಳಿಯಾರು ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಘಟನೆ ಕೆಂಕೆರೆ ಗ್ರಾಮದಲ್ಲಿ ಆತಂಕ ಮೂಡಿಸಿದ್ದು, ಹತ್ಯೆಯ ಹಿಂದಿನ ಕಾರಣ ಕುರಿತು ತನಿಖೆ ನಡೆಯುತ್ತಿದೆ.
ಇದನ್ನು ನೋಡಿ : ನಾನ್ ಕನ್ನಡಿಗ ಹೆಚ್ಆರ್ ಕೆಲಸಕ್ಕೆ ಬೇಕು – ಕನ್ನಡಿಗರನ್ನ ಕೆರಳಿಸಿದ ಬೆಂಗಳೂರಿನ ಖಾಸಗಿ ಕಂಪನಿ




