ಮೂಡಿಗೆರೆ ಕ್ಷೇತ್ರದ ಶಾಸಕಿ Nayana Motamma ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದಾರೆ ಕಿಡಿಗೇಡಿಗಳು.

ಕಾಂಗ್ರೆಸ್ ನಾಯಕಿ ನಯನಾ ಮೋಟಮ್ಮ ಅವರಿಗೂ ಕಿಡಿಗೇಡಿಗಳು ಅಶ್ಲೀಲ ಕಮೆಂಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರಿಗೆ ಇನ್ಸ್ಟಾಗ್ರಾಂನಲ್ಲಿ ಕಿಡಿಗೇಡಿಗಳಿ ಅಶ್ಲೀಲ ಕಮೆಂಟ್ ಮಾಡಿದ್ದು, ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ.
ಬಟ್ಟೆ ಬಗ್ಗೆ ಕೆಟ್ಟದಾಗಿ ಸಂದೇಶ
Nayana Motamma ಅವರ ಬಟ್ಟೆ ಬಗ್ಗೆ ಕೆಟ್ಟದಾಗಿ ಸಂದೇಶ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ನಯನಾ ಮೋಟಮ್ಮ ಅವರೇ ಮಾಹಿತಿ ಹಂಚಿಕೊಂಡಿದ್ದು, ತಮ್ಮ ವೈಯಕ್ತಿಕ ಇನ್ಸ್ಟಾಗ್ರಾಂ ಖಾತೆಗೆ ಈ ರೀತಿಯ ಅಶ್ಲೀಲ ಕಮೆಂಟ್ ಬಂದಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ದೈವದ ಮೊರೆ ಹೋದ Rakshith Shetty

ವೈಯಕ್ತಿಕ ಖಾತೆಗೆ ಅಶ್ಲೀಲ ಕಮೆಂಟ್
ನಯನಾ ಮೋಟಮ್ಮ ಅವರು ಇನ್ಸ್ಟಾಗ್ರಾಂನಲ್ಲಿ ಎರಡು ಅಧಿಕೃತ ಖಾತೆಗಳನ್ನು ಹೊಂದಿದ್ದಾರೆ. ಒಂದರಲ್ಲಿ ರಾಜಕೀಯ ಚಟುವಟಿಕೆಗಳು ಹಾಗೂ ಸಾರ್ವಜನಿಕ ಮಾಹಿತಿ ಹಂಚಿಕೊಳ್ಳಲಾಗುತ್ತಿದ್ದು, ಇನ್ನೊಂದರಲ್ಲಿ ಪ್ರವಾಸ ಹಾಗೂ ವೈಯಕ್ತಿಕ ವಿಚಾರಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಈ ಅಶ್ಲೀಲ ಕಮೆಂಟ್ ರಾಜಕೀಯ ಖಾತೆಗಲ್ಲ, ಅವರ ವೈಯಕ್ತಿಕ ಖಾತೆಗೆ ಬಂದಿದೆ.
ಕಠಿಣ ಕ್ರಮ
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಸಭ್ಯ ಕಮೆಂಟ್ಗಳು ಹೆಚ್ಚಾಗುತ್ತಿರುವ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹವಾಗಿದೆ.

ಇದನ್ನು ನೋಡಿ : ಮನೆ ಕಟ್ಟಲು ಅಗೆಯುತ್ತಿದ್ದಾಗ ಸಿಕ್ಕೇ ಬಿಡ್ತು ನಿಧಿ.. ಪ್ರಾಮಾಣಿಕತೆ ಮೆರೆದರೂ ಕುಟುಂಬಕ್ಕೆ ಎದುರಾಯ್ತು ಗಂಡಾಂತರ..!




