ಹೊಸ ವರ್ಷಾಚರಣೆ ಹಿನ್ನಲೆ Namma Metro ಗೆ ಬಂಪರ್ ಆದಾಯ – ಆದ ಕಲೆಕ್ಷನ್ ಎಷ್ಟು ಗೊತ್ತಾ?

ನಗರದಲ್ಲಿ ಸುಲಭ ಮತ್ತು ಅತಿ ವೇಗದ ಸಂಚಾರಕ್ಕೆ ನಮ್ಮ ಮೆಟ್ರೋ ಬಹಳಷ್ಟು ಅನುಕೂಲಕರವಾಗಿದೆ. ಪ್ರತಿನಿತ್ಯ ಸಾವಿರಾರು ಜನರು ನಮ್ಮ ಮೆಟ್ರೋವನ್ನು ಅವಲಂಬಿಸಿದ್ದಾರೆ. ಇದೀಗ ಹೊಸ ರ್ಷಾಚರಣೆಯ ಸಂದರ್ಭದಲ್ಲಿ Namma Metro ಬಂಪರ್ ಆಫರ್ ಗಳಿಸಿದೆ. New Year ಹಿಂದಿನ ದಿನ ಅಂದರೆ ನೆನ್ನೆ ಒಂದೇ ದಿನ ಮೆಟ್ರೋಗೆ 3 ಕೋಟಿ 8 ಲಕ್ಷ ರೂ. ಆದಾಯ ಹರಿದುಬಂದಿದೆ ಎಂದು ಮೆಟ್ರೋ ಅಂಕಿಅಂಶಗಳು ತಿಳಿಸಿವೆ.
ಮೆಟ್ರೋ ಸಂಚಾರ ವಿಸ್ತರಣೆ
ಇನ್ನು ಹೊಸ ವರ್ಷದ ಆಚರಣೆಗೆ ಬೆಂಗಳೂರು ನಗರದಾದ್ಯಂತ ಜನಸಾಗರವೇ ಹರಿದುಬಂದಿದ್ದು, ಸುಮಾರು 8,93,903 ಪ್ರಯಾಣಿಕರು ಮೆಟ್ರೋ ಸೇವೆಗಳನ್ನು ಬಳಸಿಕೊಂಡಿದ್ದಾರೆ. ಹೊಸ ವರ್ಷಾಚರಣೆಯ ಹಿನ್ನಲೆ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಸಂಚಾರ ಸಮಯವನ್ನು ವಿಸ್ತರಿಸಲಾಗಿತ್ತು.

ಬೆಳಗ್ಗಿನ ಜಾವ 3:10ರವರೆಗೆ ಮೆಟ್ರೋ ಸಂಚಾರ
ನಿನ್ನೆ ಬೆಳಗ್ಗೆ 5 ಗಂಟೆಯಿಂದ ಇಂದು ಬೆಳಗ್ಗಿನ ಜಾವ 3:10ರವರೆಗೆ ಮೆಟ್ರೋ ಸಂಚಾರ ಮುಂದುವರಿಸಲಾಗಿತ್ತು. ಎಂ.ಜಿ. ರಸ್ತೆ ನಿಲ್ದಾಣವನ್ನು ಹೊರತುಪಡಿಸಿ, ಹಳದಿ, ನೇರಳೆ ಹಾಗೂ ಹಸಿರು ಮಾರ್ಗಗಳ ಎಲ್ಲಾ ನಿಲ್ದಾಣಗಳು ನೆನ್ನೆ ಕಾರ್ಯನಿರ್ವ ಹಿಸಿದ್ದವು.
ಮೆಟ್ರೋಗೆ ಅಧಿಕ ಆದಾಯ
ಪ್ರಮುಖವಾಗಿ ಕೋರಮಂಗಲ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿದಂತೆ ಜನರು ಹೊಸ ವರ್ಷಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಮೆಟ್ರೋಗೆ ಅಧಿಕ ಆದಾಯ ಬಂದಿದೆ ಎನ್ನಲಾಗಿದೆ.

ಇದನ್ನು ನೋಡಿ : TUMAKURU | ಹೊಸ ವರ್ಷಾಚರಣೆಗೂ ಮುನ್ನ ಅಪಘಾ ಗಂಭೀರ ಗಾಯಗಳಾಗಿ ಬೈಕ್ ಸವಾರ ಸಾವು




