ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಬರೋಬ್ಬರಿ 96 ಹೊಸ ರೈಲುಗಳು ಶೀಘ್ರದಲ್ಲೇ ಮೆಟ್ರೋ ಸೇರಲಿವೆ.

ಯೆಲ್ಲೋ ಲೈನ್ ಆರಂಭದ ಬೆನ್ನಲ್ಲೇ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು Good News ಸಿಕ್ಕಿದೆ. ಒಂದೆರಡಲ್ಲ ಬರೋಬ್ಬರಿ 96 ಹೊಸ ಮೆಟ್ರೋ ರೈಲುಗಳು ಬರಲಿದ್ದು, ಇವು ಕಾರ್ಯಾಚರಣೆಗೆ ಇಳಿದ ಬಳಿಕ ಎಲ್ಲ ಲೈನ್ಗಳಲ್ಲೂ ಪ್ರತಿ 4 ನಿಮಿಷಕ್ಕೊಂದು ರೈಲು ಸಂಚಾರ ಸಾಧ್ಯವಾಗಲಿದೆ.
64 ರೈಲುಗಳು ಸೇವೆ
ನಮ್ಮ Metro ಬಳಿ ಸದ್ಯ ಗ್ರೀನ್, ಪರ್ಪಲ್ ಮತ್ತು ಯೆಲ್ಲೋ ಲೈನ್ಗಳನ್ನು ಸೇರಿಸಿ ಒಟ್ಟು 64 ರೈಲುಗಳು ಸೇವೆ ನೀಡುತ್ತಿವೆ. ಇದರಲ್ಲಿ ಗ್ರೀನ್ ಮತ್ತು ಪರ್ಪಲ್ ಲೈನ್ಗಳಲ್ಲಿ 58, ಯೆಲ್ಲೋ ಲೈನ್ನಲ್ಲಿ 6 ರೈಲುಗಳು ಓಡುತ್ತಿವೆ. ಈಗಾಗಲೇ ಇರುವ ಮಾರ್ಗಗಳಿಗೆ ಹೊಸ ರೈಲುಗಳ ಜೊತೆಯಲ್ಲಿ, ಇನ್ನೂ ಉದ್ಘಾಟನೆಯಾಗಬೇಕಿರುವ ಬ್ಲೂ ಮತ್ತು ಪಿಂಕ್ ಲೈನ್ಗಳಿಗೂ ಹೊಸ ರೈಲುಗಳನ್ನು Order ಮಾಡಲಾಗಿದೆ. ಎಲ್ಲ ರೈಲುಗಳು ಬಂದ ನಂತರ ಮೆಟ್ರೋ ರೈಲುಗಳ ಒಟ್ಟು ಸಂಖ್ಯೆ 160ಕ್ಕೆ ಏರಲಿದೆ.
ಇದನ್ನು ಓದಿ : ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ..!

ಯಾವ ಲೈನ್ಗೆ ಎಷ್ಟು ಹೊಸ ರೈಲು?
- ಗ್ರೀನ್ & ಪರ್ಪಲ್ ಲೈನ್: 21 ಹೊಸ ರೈಲುಗಳು
- ಯೆಲ್ಲೋ ಲೈನ್: 9 ಹೊಸ ರೈಲು + ಹೆಚ್ಚುವರಿಯಾಗಿ 6 ರೈಲುಗಳ ಆರ್ಡರ್
- ಬ್ಲೂ ಲೈನ್: ಒಟ್ಟು 37 ರೈಲು
- ಸಿಲ್ಕ್ ಬೋರ್ಡ್ – ಕೆ.ಆರ್.ಪುರ: 16 ರೈಲು
- ಕೆ.ಆರ್.ಪುರ – ವಿಮಾನ ನಿಲ್ದಾಣ: 21 ರೈಲು
- ಪಿಂಕ್ ಲೈನ್: 26 ಹೊಸ ರೈಲು + ಹೆಚ್ಚುವರಿಯಾಗಿ 7 ರೈಲುಗಳ ಆರ್ಡರ್
ನಗರದ ಟ್ರಾಫಿಕ್ ಒತ್ತಡ ತಗ್ಗಿಸುವಲ್ಲಿ ಈಗಾಗಲೇ ಮಹತ್ವದ ಪಾತ್ರ ವಹಿಸಿರುವ Metro, ಹೊಸ ರೈಲುಗಳ ಸೇರ್ಪಡೆಯಿಂದ ಸಂಚಾರ ಗತಿ ಹೆಚ್ಚಳ ಮತ್ತು ಪ್ರಯಾಣಿಕರ ಸಂಖ್ಯೆಯ ವೃದ್ಧಿ ನಿರೀಕ್ಷಿಸಲಾಗಿದೆ. ಬಹುಕಾಲದಿಂದ ಕೇಳಿಬರುತ್ತಿದ್ದ ಮೆಟ್ರೋಗಳ ನಡುವಿನ ಸಂಚಾರ ಅಂತರ ಕಡಿಮೆಯಾಗಬೇಕೆಂಬ ಬೇಡಿಕೆ ಕೂಡ ಈ ಮೂಲಕ ಈಡೇರಲಿದೆ.

ಇದನ್ನು ನೋಡಿ : ಅಬ್ಬಬ್ಬಾ ಸತತ 4 ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಯ್ತು ಗ್ರಾ.ಪಂ




