ನಾನ್ ಕನ್ನಡಿಗ HR ಕೆಲಸಕ್ಕೆ ಬೇಕು ಎಂಬ Bengaluru ಖಾಸಗಿ ಕಂಪನಿಯೊಂದರ ಪ್ರಕಟಣೆ ಕನ್ನಡಿಗರನ್ನು ಕೆರಳಿಸಿದೆ.

ಖಾಸಗಿ ಕಂಪನಿಗಳು ಕನ್ನಡ ನೆಲದಲ್ಲೇ ಕಾರ್ಯನಿರ್ವಹಿಸುತ್ತಿದ್ದರೂ ಕನ್ನಡಿಗರನ್ನು ನಿರ್ಲಕ್ಷ್ಯ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಮತ್ತೆ ಕೇಳಿಬಂದಿವೆ. ಕಳೆದ ವಾರ ಕಾಲೇಜೊಂದರಲ್ಲಿ ಕನ್ನಡ ಮಾತನಾಡಿದ ಕಾರಣಕ್ಕೆ ಗಲಾಟೆ ನಡೆದಿದ್ದ ಬೆನ್ನಲ್ಲೇ, ಇದೀಗ Bengaluru ಜೆಪಿ ನಗರದಲ್ಲಿರುವ ‘ಸ್ಕಿಲ್ಸ್ ಸೋನಿಕ್ಸ್’ ಎಂಬ ಖಾಸಗಿ ಕಂಪನಿಯ ಉದ್ಯೋಗ ಪ್ರಕಟಣೆ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕಂಪನಿಯು ನೌಕ್ರಿ ಡಾಟ್ ಕಾಂನಲ್ಲಿ ಹೆಚ್ಆರ್ ಹುದ್ದೆಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ “NON KANNADA HR” ಅಭ್ಯರ್ಥಿಗಳಿಗೆ ಆದ್ಯತೆ ನೀಡಿರುವುದಾಗಿ ಉಲ್ಲೇಖಿಸಲಾಗಿದೆ. ಕನ್ನಡ ಗೊತ್ತಿಲ್ಲದವರನ್ನೇ ನೇಮಕ ಮಾಡಬೇಕೆಂಬ ಈ ಸೂಚನೆ ಕನ್ನಡಿಗರನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣ **ಎಕ್ಸ್ (ಟ್ವಿಟರ್)**ನಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.
ಇದನ್ನು ಓದಿ : SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಕೇಸ್- 8 ಮಂದಿ ಅರೆಸ್ಟ್

ಕೆಲಸಕ್ಕೆ ಬೇಕು, ಆದ್ರೆ ಕನ್ನಡಿಗರು ಬೇಡ್ವಂತೆ
ಈ ಪ್ರಕಟಣೆಯನ್ನು ಕೂಡಲೇ ವಾಪಸ್ ಪಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹಲವು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
“ಖಾಸಗಿ ಕಂಪನಿಗಳಿಗೆ ಬದುಕಲು ಕನ್ನಡ ನೆಲ ಬೇಕು, ಆದರೆ ಉದ್ಯೋಗಕ್ಕೆ ಕನ್ನಡಿಗರು ಬೇಡವೇ?” ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ.
ಕನ್ನಡಿಗರನ್ನು ಅವಮಾನ
ಕನ್ನಡ ನಾಡಿಗೆ ಬಂದು ಈ ರೀತಿಯ ಉದ್ಯೋಗ ಪ್ರಕಟಣೆ ಹೊರಡಿಸುವುದು ಕನ್ನಡಿಗರನ್ನು ಅವಮಾನಿಸುವಂತಿದೆ ಎಂದು ಆರೋಪಿಸಲಾಗಿದೆ. ಅನ್ಯ ಭಾಷಿಕರಿಗೆ ಅವಕಾಶ ನೀಡುವುದಕ್ಕೆ ವಿರೋಧವಿಲ್ಲ.ಆದರೆ ಕನ್ನಡಿಗರನ್ನು ಸಂಪೂರ್ಣವಾಗಿ ಹೊರಗಿ ಟ್ಟಿರುವುದು ತಪ್ಪು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕಂಪನಿ ಕ್ಷಮೆ ಕೇಳಬೇಕು
ಈ ವಿಚಾರದಲ್ಲಿ ಸಂಬಂಧಿಸಿದ ಕಂಪನಿ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಆದರೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕಂಪನಿ ಕ್ಷಮೆ ಕೇಳಬೇಕು ಹಾಗೂ ಪ್ರಕಟಣೆಯನ್ನು ಹಿಂಪಡೆಯಬೇಕು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.
ಇದನ್ನು ನೋಡಿ : “ಸರಿಯಾಗಿ ಬಟ್ಟೆ ಹಾಕಮ್ಮ” ಎಂದ ಮಹಿಳಾ ಪೊಲೀಸ್ʼಗೆ ರಕ್ತ ಬರುವಂತೆ ಹೊಡೆದ ಬೆಂಗಳೂರಿನ ಯುವತಿ..!




