SSLC ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ – ಶಿಕ್ಷಕರು, ವಿದ್ಯಾರ್ಥಿಗಳು ಸೇರಿ 8 ಮಂದಿ ಬಂಧನ.

SSLC ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗದ Cyber Crime ಪೊಲೀಸರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
FIR ದಾಖಲಾಗಿತ್ತು
ಜನವರಿ 9 ರಂದು SSLC ಪೂರ್ವಸಿದ್ಧತಾ ಹಿಂದಿ ಪರೀಕ್ಷೆ ನಿಗದಿಯಾಗಿತ್ತು. ಆದರೆ ಅದಕ್ಕೂ ಮುನ್ನ ಜನವರಿ 8 ರಂದು ನಿರಂಜನ್ ಶೆಟ್ಟಿ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದದ್ದು ಬೆಳಕಿಗೆ ಬಂದಿತ್ತು. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ರಾಜು ಅವರು ನೀಡಿದ ದೂರಿನ ಆಧಾರದಲ್ಲಿ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು.
ಇದನ್ನು ಓದಿ : Namma Metro ಪ್ರಯಾಣಕರಿಗೆ ಮತ್ತೆ ಟಿಕೆಟ್ ದರ ಏರಿಕೆಯ ಶಾಕ್! ಈ ಬಾರಿ ಎಷ್ಟು?

8 ಮಂದಿ ಅರೆಸ್ಟ್
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಹೆಡ್ ಮಾಸ್ಟರ್ಗಳು, ಶಿಕ್ಷಕರು ಹಾಗೂ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಸೇರಿ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ. ತುಮಕೂರು, ರಾಮನಗರ ಮತ್ತು ಕಲಬುರಗಿ ಜಿಲ್ಲೆಗಳ ಶಾಲೆಗಳ ಮುಖ್ಯೋ ಪಾಧ್ಯಾಯರು ಹಾಗೂ ಶಿಕ್ಷಕರು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ.
ಪ್ರಶ್ನೆಪತ್ರಿಕೆ ವೈರಲ್
ಇದೀಗ ಪೊಲೀಸರು ಪ್ರಶ್ನೆಪತ್ರಿಕೆ ವೈರಲ್ ಆಗಿರುವ ಕುರಿತು ವಾಟ್ಸಪ್, ಇನ್ಸ್ಟಾಗ್ರಾಂ, ಟೆಲಿಗ್ರಾಂ ಖಾತೆಗಳು ಹಾಗೂ ಮೊಬೈಲ್ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ವಿವರ
- ಗಿರೀಶ್ ವಿ.ಡಿ – ಮುಖ್ಯೋಪಾಧ್ಯಾಯ (ತುಮಕೂರು)
- ಅಮ್ಜದ್ ಖಾನ್ – ಸಹ ಶಿಕ್ಷಕ (ರಾಮನಗರ)
- ಶಾಹಿದಾ ಬೇಗಂ – ಮುಖ್ಯ ಶಿಕ್ಷಕಿ (ಕಲಬುರಗಿ)
- ಫಾಹ್ಮಿದಾ – ಸಹ ಶಿಕ್ಷಕಿ (ಕಲಬುರಗಿ)
- ಮೊಹಮ್ಮದ್ ಸಿರಾಜುದ್ದೀನ್ – ಶಿಕ್ಷಕ (ಕಲಬುರಗಿ)
- ಫರ್ಜಾನಾ ಬೇಗಂ – ಶಿಕ್ಷಕಿ (ಕಲಬುರಗಿ)
ಇನ್ನು ಈ ಘಟನೆಯು ಶಿಕ್ಷಣ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ
ಇದನ್ನು ನೋಡಿ : ಜ 23ಕ್ಕೆ CULT MOVIE ಬಿಡುಗಡೆ – ರಾಜ್ಯಾದ್ಯಂತ ಚಿತ್ರತಂಡದಿಂದ ಭರ್ಜರಿ ಪ್ರಚಾರ




