ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕ್ Accident.

ರಸ್ತೆಯ ತಿರುವಿನಲ್ಲಿ ಸವಾರನ ನಿಯಂತ್ರಣ ತಪ್ಪಿ ಬೈಕ್ ಕಾಲುವೆಗೆ ಬಿದ್ದ ಪರಿಣಾಮ ಭೀಕರ Accident ಸಂಭವಿಸಿದ್ದು, 16 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಾಂವಸಗಿ ಗ್ರಾಮದ ಸಮೀಪ ನಡೆದಿದೆ. ಇನ್ನು ಮೃತನನ್ನು ಕಂಚಿನೆಗಳೂರು ಗ್ರಾಮದ ನಿವಾಸಿ ಶಿವು ಆನಂದ ಡೊಂಬರ್ ಎನ್ನಲಾಗಿದೆ.
ಹಾವೇರಿಯಲ್ಲಿ ಭೀಕರ Accident
ಸಂಬಂಧಿಕೊಬ್ಬರ ಮನೆಗೆ ಪೂಜಾ ಸಾಮಗ್ರಿಗಳನ್ನ ತರಲು ಬೈಕಿನಲ್ಲಿ ತೆರಳುತಿದ್ದ ವೇಳೆ, ಈ ಅಪಘಾತ ಸಂಭವಿಸಿದೆ. ಸಾಂವಸಗಿ ಗ್ರಾಮದ ಮಧ್ಯಭಾಗದ ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಕಾಲುವೆಗೆ ಜಿಗಿದು ಬಿದ್ದಿದ್ದು, ಪರಿಣಾಮ ಶಿವು ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದನ್ನು ಓದಿ : ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಬೆಂಗಳೂರಿನ Private Company!

ಇನ್ನು ಕೂಡಲೇ ಆತನನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲು
ಸದ್ಯ ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದು ಕೊಂಡಿದ್ದಾರೆ.

ಇದನ್ನು ನೋಡಿ : ಪಾರಿವಾಳದ ವಿಚಾರಕ್ಕೆ FULL FIGHT ಬಾಲಕನನ್ನ ಕಾಪಾಡಿದಕ್ಕೆ ಹೊಡೆದ್ರಂತೆ




