
TUMKUR:
ಆದಾಯ ತೆರಿಗೆಯ ರಿಟರ್ನ್ ಪೈಲ್ ಮಾಡಲು ಕೇಂದ್ರ ಸರ್ಕಾರ ಸೆಪ್ಟೆಂಬರ್ 30ಕ್ಕೆ ಕೊನೆಯ ದಿನವನ್ನು ನಿಗದಿಪಡಿಸಿ, ಆದೇಶ ಹೊರಡಿಸಿದೆ. ಇದರಿಂದಾಗಿ ಆಡಿಟರ್ಸ್ ಸಂಘಗಳು ಸಂಕಷ್ಟಕ್ಕೆ ಸಿಲುಕಿದ್ದು, ದಿನಾಂಕವನ್ನು ಮುಂದೂಡಬೇಕೆಂದು ತುಮಕೂರಿನಲ್ಲಿ ತೆರಿಗೆ ಸಹಾಯಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮೌನ ಪ್ರತಿಭಟನೆ ನಡೆಸಿ, ಕೇಂದ್ರ ಸಚಿವ ವಿ.ಸೋಮಣ್ಣ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತುಮಕೂರಿನಲ್ಲಿರುವ ಜಿಲ್ಲಾ ತೆರಿಗೆ ಸಹಾಯಕರ ಸಂಘದಿಂದ ಪ್ರತಿಭಟನೆ ನಡೆಸಿ, ದಿನಾಂಕವನ್ನು ಮುಂದೂಡಬೇಕೆಂದು ಆಗ್ರಹಿಸಿದ್ರು. ಹಾಗೇ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೂಡ ಒತ್ತಾಯಿಸಿ ತುಮಕೂರಿನ ಆದಾಯ ಇಲಾಖೆಯ ಎದುರು ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ತುಮಕೂರು ತೆರಿಗೆ ಸಹಾಯಕರ ಸಂಘ ಅಧ್ಯಕ್ಷರಾದ ಟಿ.ಎಸ್.ಸುರೇಶ್ ರಾವ್ ಮಾತನಾಡಿ, ಇಂಡಿವಿಷುಯಲ್ ರಿಟರ್ನಸ್ ಕೇಸ್ ಗಳು ಜುಲೈನಲ್ಲಿ ಇದ್ದವು. ಇವರೇ ವೆಬ್ ಸೈಟ್ ಅಪ್ಡೇಟ್ ಮಾಡದೆ, ಫಾರಮ್ಸ್ ರಿಲೀಸ್ ಮಾಡದೆ ಪೋಸ್ಟ್ ಪೋನ್ ಮಾಡಿದ್ರು. ಇದೀಗ ಸೆಪ್ಟೆಂಬರ್ 15ರ ವರೆಗೆಊ ಪೋಸ್ ಪೋನ್ ಮಾಡಿದ್ರು. ಆಗ ನಾವು ಫೈಲ್ ಮೂವ್ ಮಾಡೋಕೆ ಆಗದೆ ಪರಿಸ್ಥಿತಿಯಲ್ಲಿ ಮನವಿ ಮಾಡಿಕೊಂಡೆವು. ಒಂದು ದಿನ ಕೊಟ್ಟಿದ್ದರು. ಅದರಿಂದಲೂ ನಮಗೆ ಏನು ಉಪಯೋಗವಾಗಲಿಲ್ಲ. ಈಗ ಸೆಪ್ಟೆಂಬರ್ 30 ಲಾಸ್ಟ್ ಡೇಟ್ ಕೊಟ್ಟಿದ್ದಾರೆ. ಈ ಸಮಯಲ್ಲಿ ದಸರಾ, ಹೊಸ ಜಿಎಸ್ ಟಿ ಜಾರಿ ವಿಚಾರಗಳು ಇವೆ. ಹೀಗಾಗಿ ದೊಡ್ಡ ದೊಡ್ಡ ಕೇಸ್ ಗಳನ್ನು ಮಾಡಲು ಆ ಸಮಯ ಸಾಕಾಗೊಲ್ಲ. ಹೀಗಾಗಿ ನಮಗೆ ಸಮಯ ಮುಂದೂಡಬೇಕೆಂದು ಇನ್ ಕಮ್ ಟ್ಯಾಕ್ಸ್ ಇಲಾಖೆ ಮೂಲಕ ಕೇಂದ್ರಕ್ಕೆ ಸಲ್ಲಿಸಿದ್ದೇವೆ ಎಂದರು.
ತುಮಕೂರು ತೆರಿಗೆ ಸಹಾಯಕರ ಸಂಘದವರೆಲ್ಲ ಟ್ಯಾಕ್ಸ್ ಡಿಪಾರ್ಟ್ ಮೆಂಟ್ ನ ಗೂ ಮನವಿ ನೀಡಿದರು. ಅತ್ತ ಕೇಂದ್ರ ಸಚಿವ ವಿ.ಸೋಮಣ್ಣರನ್ನು ಭೇಟಿ ಮಾಡಿ, ಅವರ ಮೂಲಕವು ಕೇಂದ್ರ ಟ್ಯಾಕ್ಸ್ ಡಿಪಾರ್ಟ್ ಮೆಂಟ್ ಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು.
ಒಟ್ಟಿನಲ್ಲಿ ತೆರಿಗೆ ಸಹಾಯಕರ ಸಂಘದ ಮನವಿಯನ್ನು ಕೇಂದ್ರ ಸರ್ಕಾ ಸ್ವೀಕರಿಸಿ, ಸ್ಪಂದಿಸುತ್ತದೆಯೋ.. ಇಲ್ಲವೋ.. ಕಾದು ನೋಡಬೇಕಿದೆ.




