ಪಟ್ಟನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 31 Accident ಪ್ರಕರಣಗಳು.

ಶಿರಾ-ಅಮರಾಪುರ ರಸ್ತೆಯು Accident Zone ಆಗಿ ಬದಲಾಗುತ್ತಿದೆ. ಪ್ರತಿನಿತ್ಯ ಒಂದಿಲ್ಲೊಂದು ವಿಧದಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ಈ ಮಾರ್ಗವು ಹೇಳಿಕೇಳಿ ರಾಷ್ಟ್ರೀಯ ಹೆದ್ದಾರಿ, ಪುಣೆ ಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಬೆಳಗ್ಗೆ ಇಲ್ಲವೇ ಸಂಜೆ, ಇಲ್ಲವೇ ರಾತ್ರಿ ಅಪಘಾತಗಳು ಕಟ್ಟಿಟ್ಟ ಬುತ್ತಿಯಂತಾಗಿದೆ.
ಜಾಗೃತ ಕ್ರಮಗಳನ್ನು ವಹಿಸಬೇಕು
ಈ ರಸ್ತೆಯಲ್ಲಿ ಚಲಿಸುವಾಗ ಒಂದಿಷ್ಟು ಮಾರ್ಗಸೂಚಿಗಳನ್ನು ಪಾಲಿಸಿ ಹೋಗಬೇಕು ಎಂದು ಪೊಲೀಸ್ ಇಲಾಖೆ ಮತ್ತು ಆರ್ ಟಿಓ ಇಲಾಖೆಯ ಅಧಿಕಾರಿಗಳು ವಾಹನ ಚಲಾಯಿಸುವಾಗ ಕೆಲವೊಂದು ಜಾಗೃತ ಕ್ರಮಗಳನ್ನು ವಹಿಸಬೇಕೆಂದು ಹೇಳಿದೆ. ಆದ್ರೂ ಕೂಡ ಒಂದಿಲ್ಲೊಂದು ವಿಧದಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ.
ಇದನ್ನು ಓದಿ : ಪುರೋಹಿತನನ್ನು ಮದುವೆಯಾಗಲು ಒಪ್ಪದ ಯುವತಿ – ಯುವಕ Suicide

ಒಟ್ಟು 31 ಪ್ರಕರಣಗಳು ದಾಖಲು
ದಿನದಿಂದ ದಿನಕ್ಕೆ ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪೋಲಿಸರ ಮಾಹಿತಿಯ ಪ್ರಕಾರ 2025 ರಿಂದ ಈವರೆಗೆ ಅಪಘಾತಗಳಿಂದ 8 ಜನ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. 2025ರಲ್ಲಿಯೇ ಒಟ್ಟು 31 ಅಪಘಾತ ಪ್ರಕರಣಗಳು ಪಟ್ಟನಾಯಕಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆಯಂತೆ.
ಕೆಲವರು ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಮರಣ ಹೊಂದಿದ್ರೆ. ಮತ್ತೆ ಕೆಲವರು ಆಸ್ಪತ್ರೆ ಹೋದ ನಂತರ ಕೊನೆ ಉಸಿರೆಳೆದಿದ್ದಾರೆ.
ಅಜಾಗರೂಕತೆಯ ಚಾಲನೆ ಬಗ್ಗೆ ಆಕ್ರೋಶ
ಇನ್ನು ಚಾಲಕರ ಅಜಾಗರೂಕತೆಯ ಚಾಲನೆ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರತಿದಿನ ಸಣ್ಣ ಪುಟ್ಟ ಅಪಘಾತಗಳ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಜಾಗರೂಕತೆಯ ಚಾಲನೆ ಬಗ್ಗೆ ಆಕ್ರೋಶವನ್ನೂ ಹೊರಹಾಕಿದ್ದಾರೆ.

ಮತ್ತಷ್ಟು ಜನ ಪ್ರಾಣ ಕಳೆದುಕೊಳ್ಳುವ ಸಾಧ್ಯ
ಫೋನ್ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದರಿಂದ ಹೆಚ್ಚಿನ ಅಪಘಾತಗಳಾಗುತ್ತಿವೆ. ಈ ಅಪಘಾತಗಳಿಂದ ಅದೆಷ್ಟು ಕುಟುಂಬಗಳು ಬೀದಿಗೆ ಬಿದ್ದಿವೆ.
ಒಟ್ಟಿನಲ್ಲಿ, ಪ್ರತಿದಿನ ಸಂಭವಿಸುತ್ತಿರುವ ಅಪಘಾತಗಳನ್ನು ನೋಡುತ್ತಿದ್ದರೆ, ಸರ್ಕಾರ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕಿದೆ. ಇಲ್ಲವಾದರೆ ಮತ್ತಷ್ಟು ಜನ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಇದನ್ನು ನೋಡಿ : TUMAKURU | ದಯಾಮರಣ ಕೋರಿ ಡಿಸಿ ಕಚೇರಿ ಎದುರು ಕುಟುಂಬಸ್ಥರ ಕಣ್ಣೀರು..!?




